Advertisement
ತಾವು ಅಡಗಿರುವ ಬಂಕರ್‌ನಿಂದಲೇ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿರುವ ಅವರು, “”ಚೆಚೆನ್ಯಾ ಮೂಲದ ಹಂತಕರ ಪಡೆಯೊಂದನ್ನು ರಷ್ಯಾ, ಕೀವ್ ನಗರದ ಹೊರವಲಯದ ಅರಣ್ಯ ಪ್ರದೇಶಗಳಲ್ಲಿ ಇರಿಸಿದೆ. ಆ ಪಡೆಯ ಪ್ರತಿಯೊಬ್ಬ ಯೋಧನ ಕೈಯ್ಯಲ್ಲಿ ಉಕ್ರೇನ್‌ನ ಪ್ರಮುಖ ರಾಜಕಾರಣಿಗಳು, ಅಧಿಕಾರಿಗಳ ಫೋಟೋ ಸಹಿತ ವಿವರಗಳಿವೆ. ಅವರೆಲ್ಲರನ್ನು ಸೆರೆಹಿಡಿಯುವುದು ಅಥವಾ ಕೊಲ್ಲುವುದು ಅವರ ಉದ್ದೇಶ. ಆ ಮೂಲಕ, ಉಕ್ರೇನನ್ನು ರಾಜಕೀಯವಾಗಿ ಸೋಲಿಸಲು ರಷ್ಯಾ ಮನಸ್ಸು ಮಾಡಿದೆ. ಇಂಥ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಉಕ್ರೇನ್‌ನ ಜನತೆ ಮನೋಸ್ಥೈರ್ಯ ಕಾಪಾಡಿಕೊಳ್ಳಬೇಕು” ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಲಹೆ ಮಾಡಿದ್ದಾರೆ.
“ನಮ್ಮ ರಾಷ್ಟ್ರವನ್ನು ರಕ್ಷಿಸಿಕೊಳ್ಳುವ ವಿಚಾರದಲ್ಲಿ ನಾವು ಏಕಾಂಗಿಯಾಗಿದ್ದೇವೆ. ನಮ್ಮ ಜೊತೆಗೂಡಿ ಯುದ್ಧ ಮಾಡುವವರು ಯಾರಿದ್ದಾರೆ? ಅಂಥ ಯಾರೊಬ್ಬರೂ ನನಗೆ ಕಾಣುತ್ತಿಲ್ಲ. ನ್ಯಾಟೋ ಸದಸ್ಯತ್ವ ಪಡೆಯಲು ಯಾರು ನಮಗೆ ಖಾತ್ರಿ ಕೊಡುತ್ತಾರೆ? ಎಲ್ಲರಲ್ಲೂ ಭಯ ಕಾಡುತ್ತಿದೆ. ಹಾಗಾಗಿ, ಯಾರೂ ನಮ್ಮ ಬೆಂಬಲಕ್ಕೆ ಬರುತ್ತಿಲ್ಲ” ಎಂದಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಗುರುವಾರ ರಾತ್ರಿ ಹಂಚಿಕೊಳ್ಳಲಾಗಿದೆ.
Related Articles
Advertisement