ಸಿಂದಗಿ: ದೇವೇಗೌಡರು ಹಾಗೂ ಕುಮಾರಸ್ವಾಮಿ ನನ್ನ ಮೇಲೆ ಬಾಣಗಳ ಮೇಲೆ ಬಾಣ ಬಿಡುತ್ತಾರೆ. ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ಗೆ ನಾನೇ ಟಾರ್ಗೆಟ್. ಅವರು ಸಿದ್ದರಾಮಯ್ಯರನ್ನು ಮುಗಿಸಿ ಬಿಟ್ರೆ ಕಾಂಗ್ರೆಸ್ ಮುಗಿಸಿ ದಂತೆಯೇ ಎಂಬ ಭ್ರಮೆ ಯಲ್ಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರವಿವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್‌ಗೆ ಏನೂ ವ್ಯತ್ಯಾಸವಿಲ್ಲ. ಹೆಸರು ಮಾತ್ರ ಬೇರೆ ಬೇರೆ. ಜೆಡಿಎಸ್ ಪಕ್ಷ ಈಗ ಉಳಿದಿಲ್ಲ. ಅದು ಜೆಡಿಎಸ್ (ಫ್ಯಾಮಿಲಿ) ಆಗಿ ಪರಿವರ್ತನೆಯಾಗಿದೆ. ನನ್ನನ್ನು ಯಾರೂ ಮುಟ್ಟಲು ಆಗುವುದಿಲ್ಲ.
ಮುಂದಿನ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂದೇ ಬರುತ್ತದೆ ಹಾಗೂ ನಾವು ಸರಕಾರ ರಚಿಸಿಯೇ ತೀರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!
ವಿಶ್ವಕರ್ಮ, ಭಗೀರಥ ದಿನಾಚರಣೆ, ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಪ್ರಾರಂಭಿಸಿದ್ದು ನಾನೇ. ಕೆಂಪೇಗೌಡ ಜಯಂತಿ ಪ್ರಾರಂಭ ನನ್ನ ಅಧಿ ಕಾರವಧಿ ಯಲ್ಲಿ ಮಾಡಿದ್ದೇನೆ. ನಾನು ಬಿಜೆಪಿಯವರಂತೆ ಮೇಲ್ವರ್ಗದವರಿಗೆ ಮಣೆ ಹಾಕಲಿಲ್ಲ. ಅಹಿಂದ ಜನತೆ ಕಲ್ಯಾಣಕ್ಕಾಗಿ ಶ್ರಮಿಸಿದ್ದೇನೆ. ಅವರೇ ನನ್ನ ಶಕ್ತಿ. ಅವರಿಂದಲೇ ನನಗೆ ಶಕ್ತಿ ಬಂದಿದೆ. ನನ್ನನ್ನು ಯಾರು ಏನು ಮಾಡಲು ಆಗುವುದಿಲ್ಲ ಎಂದು ಪುನರುಚ್ಚರಿಸಿದರು.