Advertisement

ನಾನು ಸೋನಿಯಾ ಗಾಂಧಿಯ ರಿಮೋಟ್ ಕಂಟ್ರೋಲ್ ಅಲ್ಲ; ಬಿಜೆಪಿಗೆ ಖರ್ಗೆ ತಿರುಗೇಟು

05:49 PM Oct 07, 2022 | Team Udayavani |

ಅಹಮದಾಬಾದ್: ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ ವ್ಯಕ್ತವಾದ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ, ನಾನು ಸೋನಿಯಾ ಗಾಂಧಿಯ ರಿಮೋಟ್ ಕಂಟ್ರೋಲ್ ಅಲ್ಲ ಎಂದು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:Easy recipes: ಬೇಬಿ ಕಾರ್ನ್ ಮಂಚೂರಿಯನ್‌ ಟ್ರೈ ಮಾಡಿ ಟೇಸ್ಟ್ ನೋಡಿ…

ಕಾಂಗ್ರೆಸ್ ಪಕ್ಷದಲ್ಲಿ ಭಾರತೀಯ ಜನತಾ ಪಕ್ಷದಂತೆ ರಿಮೋಟ್ ಕಂಟ್ರೋಲ್ ನಂತಹ ವ್ಯವಸ್ಥೆ ಇಲ್ಲ. ಪ್ರತಿ ಅಧ್ಯಕ್ಷರ ಆಯ್ಕೆಯೂ ಒಮ್ಮತದ ಮೂಲಕವೇ ನಡೆಯುತ್ತದೆ ಎಂದು ಖರ್ಗೆ ಹೇಳಿದರು.

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯಕ್ಕಾಗಿ ಅಹಮ್ಮದಾಬಾದ್ ಗೆ ಆಗಮಿಸಿದ್ದ ವೇಳೆ ಸುದ್ದಿಗಾರರ ಪ್ರಶ್ನೆಗೆ, ಒಂದು ವೇಳೆ ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾದರೆ, ನಾನೇ ಪಕ್ಷದ ರಿಮೋಟ್ ಕಂಟ್ರೋಲ್ ಆಗಲಿದ್ದೇನೆ ಎಂದರು.

ಮಲ್ಲಿಕಾರ್ಜುನ್ ಖರ್ಗೆಯವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರೆ ಸೋನಿಯಾ ಗಾಂಧಿ ಪರೋಕ್ಷವಾಗಿ ಕಾರ್ಯನಿರ್ವಹಿಸುವ ಮೂಲಕ ರಿಮೋಟ್ ಕಂಟ್ರೋಲ್ ಆಗಲಿದ್ದಾರೆ ಎಂದು ಭಾರತೀಯ ಜನತಾ ಪಕ್ಷ ಟೀಕಿಸಿತ್ತು.

Advertisement

ನಾಮಕಾವಸ್ತೆಗೆ ಅಧ್ಯಕ್ಷರಾಗಿದ್ದು, ಪರೋಕ್ಷವಾಗಿ ಸೋನಿಯಾ ಅಧಿಕಾರ ಚಲಾಯಿಸುತ್ತಾರೆ ಎಂಬುದಾಗಿ ತುಂಬಾ ಜನರು ಆರೋಪಿಸುತ್ತಿದ್ದಾರೆ. ಸೋನಿಯಾ ಹೇಳಿದಂತೆ ನಾನು ಕೆಲಸ ಮಾಡಬೇಕಾಗುತ್ತದೆ ಎಂದು ದೂರಿದ್ದ..ಾರೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಅಂತಹ ರಿಮೋಟ್ ಕಂಟ್ರೋಲ್ ವ್ಯವಸ್ಥೆ ಇಲ್ಲ. ಇದು ನಿಮ್ಮ ಊಹೆ ಅಷ್ಟೇ, ಕೆಲವು ಜನರು ಇಂತಹ ಊಹಾಪೋಹ ಹರಡುತ್ತಿದ್ದಾರೆ ಎಂದು ಖರ್ಗೆ ಹೇಳಿದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ಪ್ರಧಾನಿ ಅವರು ಎಷ್ಟು ಬಾರಿ ಪಕ್ಷದ ಅಧ್ಯಕ್ಷರ ಚುನಾವಣೆ ನಡೆಸಿದ್ದಾರೆ? ಎಲ್ಲಾ ಅಧ್ಯಕ್ಷರನ್ನು ಒಮ್ಮತದಿಂದಲೇ ಆಯ್ಕೆ ಮಾಡಿದ್ದೀರಿ. ನಿಮ್ಮ (ಬಿಜೆಪಿ) ರಿಮೋಟ್ ಕಂಟ್ರೋಲ್ ಎಲ್ಲಿದೆ ಅಂತ ಗೊತ್ತು..ನೀವು ನನಗೆ ಪಾಠ ಕಲಿಸುತ್ತೀರಾ ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next