Advertisement

ಖರ್ಗೆ ಅವರನ್ನು ಕೀಳು ಮಟ್ಟದಿಂದ ನೋಡುವ ರಾಜಕಾರಣಿ ನಾನಲ್ಲ- ಆರಗ ಜ್ಞಾನೇಂದ್ರ

04:49 PM Aug 04, 2023 | Team Udayavani |

ತೀರ್ಥಹಳ್ಳಿ : ಅರಣ್ಯ ಸಚಿವರ ಹೇಳಿಕೆ ವಿರುದ್ಧ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಆಡಿದಂತಹ ಕೆಲವು ಮಾತುಗಳನ್ನು ಆಡದೇ ಇರುವ ಮಾತುಗಳನ್ನು ಸೇರಿಸಿ ರಾಜಕಾರಣಕ್ಕೆ ಬಳಸಿ ರಾಜ್ಯಾದ್ಯಂತ ಸುದ್ದಿಯಾಗಿದೆ. ಅದರ ಬಗ್ಗೆ

Advertisement

ಯಾರಿಗಾದರೂ ಮನಸ್ಸಿಗೆ ಕಸಿವಿಸಿ ಆಗಿದ್ದರೆ ವಿಶೇಷವಾಗಿ ಖರ್ಗೆಯವರಿಗೆ ಕ್ಷಮೆಯಾಚನೆ ಮಾಡುತ್ತೇನೆ ಎಂದು ಶಾಸಕ, ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ಈ ವಿಷಯವನ್ನು ಕಾಂಗ್ರೆಸ್ ನವರು ರಾಜಕಾರಣಕ್ಕೆ ಉಪಯೋಗಿಸಿಕೊಂಡು ಪ್ರಚೋದನೆ ನೀಡಿ ದೂರು ಕೊಡಿಸಿದ್ದಾರೆ. ಅರಣ್ಯ ಸಚಿವರ ವಿರುದ್ಧ ಮಾತನಾಡುವಾಗ ಬಾಯಿ ತಪ್ಪಿನಿಂದ ಖರ್ಗೆ ಅಂತ ಹೇಳಿದ್ದೇನೆ. ಆದರೆ ಎಲ್ಲೂ ಸಹ ಮಲ್ಲಿಕಾರ್ಜುನ ಖರ್ಗೆ ಅಂದಿಲ್ಲ. ಅವರ ಬಗ್ಗೆ ಬಣ್ಣದ ಬಗ್ಗೆ ವಯಕ್ತಿಕ ನಿಂದನೆ ಮಾಡಿಲ್ಲ.

ಅವರ ಜೊತೆ ವಿಧಾನಸಭೆಯಲ್ಲಿ ಕೆಲಸ ಮಾಡಿದ್ದೇನೆ. ಅವರನ್ನು ತುಂಬಾ ಗೌರವದಿಂದ ನೋಡುತ್ತೇನೆ. ಖರ್ಗೆ ಅವರನ್ನು ಕೀಳು ಮಟ್ಟದಿಂದ ನೋಡುವ ರಾಜಕಾರಣಿ ನಾನಲ್ಲ ಎಂದರು.

ರಾಜಕೀಯವಾಗಿ ಟೀಕೆ ಮಾಡಿರಬಹುದು ಹಾಗೂ ಮಾಡಬಹುದು. ಮಲ್ಲಿಕಾರ್ಜುನ ಖರ್ಗೆ ಅಂದಿಲ್ಲ ಹಾಗೆನಾದರೂ ಆದರೆ ಕೊಟ್ಟ ಶಿಕ್ಷೆಗೆ ಒಳಗಾಗುತ್ತೇನೆ ಎಂದು ಚಾಲೆಂಜ್ ಮಾಡಿದರು. ನಾನೇನೋ ಹೇಳಿದ್ದೇನೆ ಎಂದು ಖರ್ಗೆ ಅವರನ್ನು ಕರೆತಂದು ಸಣ್ಣವರಾಗಿ ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ನವರು ಸುಖಾ ಸುಮ್ಮನೆ ಇದನ್ನು ದೊಡ್ಡ ವಿಷಯ ಮಾಡುತ್ತಿದ್ದಾರೆ ಎಂದರು.

Advertisement

ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಅವರ ಹೇಳಿಕೆ ಪಶ್ಚಿಮ ಘಟ್ಟದ ತಾಲೂಕುಗಳಲ್ಲಿ ಸಂಚಲನ ಸೃಷ್ಟಿಸಿದೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಈ ವಿಷಯ ಚರ್ಚೆಗೆ ಬಂದಿದ್ದರು ಸರಿಯಾಗಿ ವರದಿ ನೀಡಿಲ್ಲ. ಈಗ ಸುಪ್ರೀಂ ಕೋರ್ಟ್ ನಾ ಹಸಿರು ಪೀಠ ಕೈಗೆ ಎತ್ತಿಕೊಂಡಿದೆ. ಹಸಿರು ಪೀಠ ಒತ್ತಡ ಮಾಡಿದಾಗ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಬಳಿ ವರದಿ ಕೇಳಿದ್ದರು. ಜಿಲ್ಲಾ ಮಟ್ಟದಲ್ಲಿ ಸಭೆ ಮಾಡಿ ನಿರ್ಣಯ ಕಳುಹಿಸಿಕೊಡಲಾಗಿತ್ತು.

ಬೊಮ್ಮಾಯಿ ಸರ್ಕಾರ ಅಥವಾ ಯಡಿಯೂರಪ್ಪ ಸರ್ಕಾರ ಇದ್ದಾಗ ಕಸ್ತೂರಿ ರಂಗನ್ ವರದಿ ವೈಜ್ಞಾನಿಕವಾಗಿ ಇಲ್ಲ. ತಿರಸ್ಕಾರ ಮಾಡಬೇಕು ಎಂದು ಹೇಳಿದ್ದೇವು ಎಂದು ತಿಳಿಸಿದರು.

ಅರಣ್ಯ ಸಚಿವರಿಗೆ ಈ ವಿಷಯದ ಬಗ್ಗೆ ಗೊತ್ತಿಲದೆ ಮಾತನಾಡಿರಬಹುದು. ಆ ವಿಷಯದ ಬಗ್ಗೆ ಮಾತನಾಡಿ ಹೀಗೆ ಆಗಿದೆ. ಅವರ ಜಾತಿ ಬಗ್ಗೆ ಎಲ್ಲೂ ಮಾತನಾಡಿಲ್ಲ. ಮಲೆನಾಡ ಜನ ಹಾಗೂ ಬಯಲುಸೀಮೆ ಜನರ ಬಗ್ಗೆ ಹೇಳಿದ್ದೇನೆ.ಅರಣ್ಯ ಸಚಿವರ ಬಗ್ಗೆಯೂ ಕಿಚಯಿಸಿಸಿದ್ದಲ್ಲ ಎಂದರು.

ಇನ್ನು ಕಸ್ತೂರಿ ರಂಗನ್ ವರದಿ ಬಗ್ಗೆ ಸ್ಥಳೀಯ ಕಾಂಗ್ರೆಸ್ ನವರಿಗೆ ನೀವು ಪಾದಯಾತ್ರೆ ಮಾಡಿದವರು. ಈಗ ಅರಣ್ಯ ಸಚಿವರ ಹೇಳಿಕೆ ಬಗ್ಗೆ ನಿಮ್ಮ ತೀರ್ಮಾನ ಹೇಳಿ? ನಿಮ್ಮ ತೀರ್ಮಾನ ಏನು ಎಂದು ಯಾಕೆ ಹೇಳಿಲ್ಲ? ಕಸ್ತೂರಿ ರಂಗನ್ ವರದಿ ಜಾರಿಯಾಗಬೇಕು ಎಂಬ ಅಪೇಕ್ಷೆ ನಿಮ್ಮಲ್ಲಿ ಇದೆಯೇ? ನಾನು ಮಾಡಿದ ಪ್ರತಿಭಟನೆಯನ್ನು ಬೇರೆ ವಿಷಯಕ್ಕೆ ತಿರುಗಿಸುತ್ತಿದ್ದಾರೆ. ದಲಿತರ ಬಗ್ಗೆ ಕಾಂಗ್ರೆಸ್ ನಿಲುವೇನು ಎಂಬುದು ನಮಗೆ ತಿಳಿದಿದೆ

ಕೆಜೆ ಹಳ್ಳಿ ಡಿಜೆ ಹಳ್ಳಿ ಬಗ್ಗೆ ಏನು ಹೇಳಿದ್ದಿರಾ ಎಂದು ಗೊತ್ತು ಅವರನ್ನು ಅಮಾಯಕರು ಅಂದವರು ನೀವು ನಿಮಗೆ ದಲಿತರ ಬಗ್ಗೆ ಎಷ್ಟು ಅನುಕಂಪ ಇದೆ ಗೊತ್ತಿದೆ ಎಂದರು.

34ಸಾವಿರ ಕೋಟಿ ಬಜೆಟ್ ಪುಸ್ತಕದಲ್ಲಿ ತೋರಿಸಿ 17 ಸಾವಿರ ಕೋಟಿ ಗ್ಯಾರೆಂಟಿ ಯೋಜನೆಗಳಿಗೆ ಮಾಡಿದ್ದೀರಾ. ದಲಿತ ಜನ ದಡ್ಡರು, ಅವರನ್ನು ಹೇಗೆ ಬೇಕಾದರು ಮರಳು ಮಾಡಬಹುದು ಎಂಬ ಉದ್ದೇಶ ಕಾಂಗ್ರೆಸ್ ನವರದ್ದು. ಬಿಜೆಪಿ ಅದರ ವಿರುದ್ಧ ಪ್ರತಿಭಟನೆ ಮಾಡುತ್ತಿದೆ. ಕಾಂಗ್ರೆಸ್ ಬಜೆಟ್ ಬಗ್ಗೆ ದಲಿತ ಮುಖಂಡರು ಅಭಿಪ್ರಾಯ ಏನು? ಅವರನ್ನು ಈ ವಿಚಾರದಲ್ಲಿ ಹೇಗೆ ಕ್ಷಮಿಸುವುದು ಎಂದು ಸ್ಪಷ್ಟನೆ ನೀಡಬೇಕು ಎಂದರು.

ಇತ್ತೀಚಿಗೆ ನೆಡೆದ ಚುನಾವಣೆಯಲ್ಲಿ ನೀವು ಸೋತಿದ್ದೀರಾ. ಆ ಸೋಲನ್ನು ಸ್ವೀಕಾರ ಮಾಡಲು ಸಂಸ್ಕಾರ ಬೇಕು. ನಾನು ಐದು ಬಾರಿ ಸೋತಿದ್ದೇನೆ ಆದರೆ ಸೋತಾಗ ನಿಮ್ಮ ಬಳಿ ಬೆರಳು ತೋರಿಸುವುದನ್ನು ಹಾಗೂ ನಿಮ್ಮ ಚರಿತ್ರ್ಯ ಹರಣ ಮಾಡಿಲ್ಲ. ಈಗ ನೀವು ಆ ಸೋಲನ್ನು ಜಿದ್ದನ್ನು ನನ್ನ ಮೇಲೆ ತೀರಿಸಿಕೊಳ್ಳಲು ಒಂದು ಅವಕಾಶಕ್ಕೆ ಕಾಯ್ತಾ ಇದ್ರಿ ಅಂತ ಕಾಣಿಸುತ್ತದೆ. ಕೋರ್ಟ್ ಗೆ ಹೇಗೆ ಹಾಕಬೇಕು ಕಂಪ್ಲೇಂಟ್ ಹೇಗೆ ಕೊಡಬೇಕು. ಮಾಧ್ಯಮದಲ್ಲಿ ನನ್ನ ನೇಣಿಗೆ ಏರಿಸಬೇಕು ಎಂದು ಹೇಳಿಲ್ಲ ನಾನು ಜೀವಂತ ಬದುಕಿರುವುದೇ ಅವರಿಗೆ ಸಹಿಸಲಾಗುತ್ತಿಲ್ಲ ಹಾಗಾಗಿ ನನ್ನ ಚಾರಿತ್ರ್ಯ ಹರಣ ಮಾಡುತ್ತಿರುತ್ತಾರೆ ಎಂದರು.

ಇದ್ದಕ್ಕಿದ್ದ ಹಾಗೆ ಸರ್ಕಾರ ಬಂತು. ಕೊಟ್ಟ ಭರವಸೆ ಈಡೇರಿಸಲು ಆಗುತ್ತಿಲ್ಲ. ಕೆ ಎಸ್ ಆರ್ ಟಿ ಸಿ ಬಸ್ ಗೆ 700 ಕೋಟಿ ಹಣ ಖರ್ಚಾಗಿದೆ. 120 ಕೋಟಿ ನೀಡಿದ್ದಾರೆ.ಮುಂದಿನ ತಿಂಗಳು ಡೀಸೆಲ್ ಹಾಕಿಸಲು ಹಾಗೂ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ. ಕೆಪಿಟಿಸಿಎಲ್ ಸಾವಿರರು ಕೋಟಿ ನಷ್ಟದಲ್ಲಿದೆ. ಈಗಲೇ ವಿದ್ಯುತ್ ಬಿಲ್ ಕಟ್ಟುತ್ತಿಲ್ಲ. ಈಗಿನಿಂದ ಗೊತ್ತಾಗುತ್ತದೆ. ಇವರು ಭರವಸೆ ನೀಡಿದ್ದಾರೆ ಕೊಡಬೇಕು. ಸರ್ಕಾರ ಬಂದು ಮೂರು ತಿಂಗಳಾಗಿದೆ ಅದರ ಬಗ್ಗೆ ಮಾತನಾಡುವುದು ಬಿಟ್ಟು ಅದನ್ನು ಡೈವರ್ಟ್ ಮಾಡುವ ಉದ್ದೇಶದಿಂದ ನನ್ನ ವಿವಾದವನ್ನು ಎಳೆಯುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಾಳೆಬೈಲು ರಾಘವೇಂದ್ರ, ಕಾಸರವಳ್ಳಿ ಶ್ರೀನಿವಾಸ, ನಾಗರಾಜ್ ಶೆಟ್ಟಿ, ಕುಕ್ಕೆ ಪ್ರಶಾಂತ್, ಚಂದವಳ್ಳಿ ಸೋಮಶೇಖರ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next