Advertisement

Congress Party; ನಾನು ಕಾಂಗ್ರೆಸ್ ನೌಕರನಲ್ಲ..: ಆಚಾರ್ಯ ಪ್ರಮೋದ್ ಕೃಷ್ಣಂ ಟೀಕೆ

06:16 PM Feb 11, 2024 | Team Udayavani |

ನವದೆಹಲಿ: ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಭಾನುವಾರ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದು, “ನಾನು ಎಂದಿಗೂ ಅದರ ನೌಕರನಲ್ಲ ಮತ್ತು ಅದರೊಳಗೆ ಸ್ಥಾನವನ್ನು ಹುಡುಕಲಿಲ್ಲ” ಎಂದು ಪ್ರತಿಪಾದಿಸಿದ್ದಾರೆ. ಅವರನ್ನು ಪಕ್ಷದಿಂದ ಹೊರಹಾಕಿದ ನಂತರ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.

Advertisement

ಆಚಾರ್ಯ ಪ್ರಮೋದ್ ಕೃಷ್ಣಂ ಅವರು “ಮುಖ್ಯ ಕಾಂಗ್ರೆಸ್ ಪಕ್ಷ ಕಾ ನೌಕರ್ ನಹೀ ಥಾ, ಔರ್ ಮೈನೆ ನೌಕ್ರಿ ಭಿ ನಹಿ ಮಾಂಗೀ ಥಿ.” ನನ್ನನ್ನು ಪಕ್ಷದಿಂದ ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ ಕಾಂಗ್ರೆಸ್ ನಾಯಕರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದರು.

ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕೃಷ್ಣಂ, ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುವ ಉತ್ಸಾಹದಲ್ಲಿ ಕಾಂಗ್ರೆಸ್ ಪಕ್ಷವು ರಾಷ್ಟ್ರದ ಬಗ್ಗೆಯೇ ದ್ವೇಷವನ್ನು ಬೆಳೆಸಲು ಪ್ರಾರಂಭಿಸಿದೆ ಎಂದು ಹೇಳಿದರು.

“ರಾಮರಾಜ್ಯದ ಕನಸನ್ನು ಕಂಡ ಮೊದಲ ವ್ಯಕ್ತಿ ಮಹಾತ್ಮ ಗಾಂಧಿ. ಪ್ರಧಾನಿ ಮೋದಿ ಅವರ ಕನಸುಗಳನ್ನು ಈಡೇರಿಸುತ್ತಿದ್ದಾರೆ. ಪ್ರಧಾನಿ ಮೋದಿ ದೇಶದ ಕಲ್ಯಾಣಕ್ಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರೆ ಅದನ್ನು ಮೆಚ್ಚಬೇಕು ಆದರೆ ಕಾಂಗ್ರೆಸ್ ಪಕ್ಷವು ಪ್ರಧಾನಿ ಮೋದಿಯನ್ನು ಈಗ ತುಂಬಾ ದ್ವೇಷಿಸುತ್ತಿದೆ. ಅವರು ಇಡೀ ದೇಶವನ್ನು ದ್ವೇಷಿಸಲು ಪ್ರಾರಂಭಿಸಿದ್ದಾರೆ, ಈಗ ಅವರು ‘ಸನಾತನ’ವನ್ನು ಅಳಿಸಲು ಬಯಸುತ್ತಾರೆ, ಅವರು ಪ್ರಧಾನಿ ಮೋದಿಯನ್ನು ಎಷ್ಟು ದ್ವೇಷಿಸುತ್ತಾರೆ ಎಂದರೆ ಅವರು ಅವರನ್ನು ಭೇಟಿಯಾದ ಎಲ್ಲರನ್ನೂ ದ್ವೇಷಿಸಲು ಪ್ರಾರಂಭಿಸುತ್ತಾರೆ” ಎಂದು ಆಚಾರ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next