ಎಂದಷ್ಟೇ ಉತ್ತರಿಸಿ ಮುಗುಳ್ನಕ್ಕರು.
Advertisement
ಬಿಜೆಪಿಗೆ ಫ್ರೆಶ್ಶರ್ ಆದರೂ ಅನುಭವ ದೊಡ್ಡದಲ್ಲವೇ ಎಂಬ ಮತ್ತೂಂದು ಪ್ರಶ್ನೆಗೆ, ಬಿಜೆಪಿಯಲ್ಲಿ ಮಾರ್ಗದರ್ಶನ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ಅವರು ಯೋಗ್ಯ ಮಾರ್ಗದರ್ಶನ ಮಾಡುತ್ತಾರೆ.ಈಗ ತಾನೇ ಬಿಜೆಪಿಗೆ ಒಬ್ಬ ವಿನಮ್ರ ಕಾರ್ಯಕರ್ತನಾಗಿ ಸೇರಿದ್ದೇನೆ ಅಷ್ಟೆ ಎಂದರು. ಸೋಮವಾರ ತಮ್ಮ 76ನೇ ಹುಟ್ಟುಹಬ್ಬ ಆಚರಿಸಿಕೊಂಡ ಸಂದರ್ಭದಲ್ಲಿ ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಿಕ್ಕಟ್ಟು ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. ಬಿಕ್ಕಟ್ಟಿನಿಂದ ಪಕ್ಷಕ್ಕೆ ಹಾನಿಯಾಗುವು
ದಿಲ್ಲವೇ ಎಂಬ ಪ್ರಶ್ನೆಗೆ, ತನಗೆ ಒಳ್ಳೆಯದಾಗಲಿ ಎಂದು ಹಾರೈಸಲು ನೀವೆಲ್ಲಾ ಬಂದಿದ್ದೀರಿ. ಬಾಯಿ ಸಿಹಿ ಮಾಡಿಕೊಂಡು ಹೋಗಿ. ಈ ಜಂಜಾಟದಲ್ಲಿ ತನ್ನನ್ನು ಎಳೆದಾಡುವ ಪ್ರಯತ್ನ ಮಾಡಬೇಡಿ ಎಂದರು.
ಸೋತಿರಬಹುದು. ಆದರೆ, ಎರಡು ಕ್ಷೇತ್ರದ ಉಪ ಚುನಾವಣೆಗಳು ರಾಜ್ಯ ಅಥವಾ ದೇಶದ ರಾಜಕಾರಣವನ್ನು
ನಿರ್ಧರಿಸುವುದಿಲ್ಲ. ಮುಂದಿನ ವರ್ಷದ ಚುನಾವಣೆ ರಾಜ್ಯದ ಭವಿಷ್ಯ ನಿರ್ಧಾರದ ಚುನಾವಣೆ. ಅದರಲ್ಲಿ ಬಿಜೆಪಿ ಗೆಲ್ಲಲಿದೆ
ಎಂದು ವಿಶ್ವಾಸ ವ್ಯಕ್ತಪಡಿಸಿದರು.
**
“2019ರಲ್ಲೂ ಮೋದಿ ಪ್ರಧಾನಿ ಮಾಡಲು ಅರ್ಪಿಸಿಕೊಳ್ಳುವೆ’
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ 2019ರ ಲೋಕಸಭೆ ಚುನಾವಣೆಯಲ್ಲೂ ನಿಚ್ಚಳ ಬಹುಮತದಿಂದ ಆರಿಸಿ ದೇಶ ಮುನ್ನಡೆಸಿಕೊಂಡು ಹೋಗುವ ಶಕ್ತಿ, ಸಾಮರ್ಥ್ಯ ತಂದುಕೊಡಲು ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಿರುವುದಾಗಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಹೇಳಿದ್ದಾರೆ. ಸೋಮವಾರ ತಮ್ಮ 76ನೇ ಜನ್ಮದಿನ
ಆಚರಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶಾಂಗ ಸಚಿವ ನಾಗಿ ಹತ್ತಾರು ದೇಶಗಳಿಗೆ ಹೋಗಿದ್ದೇನೆ. ಆದರೆ, ಮೋದಿ ಅಧಿಕಾರಾವಧಿಯ ಕಳೆದ 3 ವರ್ಷದಲ್ಲಿ ಭಾರತದ ಬಗ್ಗೆ ವಿದೇಶದಲ್ಲಿ ವಿಶೇಷ ಅಭಿಮಾನ, ನಿರೀಕ್ಷೆ ಇದೆ. ವಿಶ್ವದ ಅಗ್ರಮಾನ್ಯ ನಾಯಕರ ಶ್ರೇಣಿಯಲ್ಲಿ ಮೋದಿ ಸ್ವಾಭಾವಿಕವಾಗಿ ಸೇರಿಹೋಗಿದ್ದಾರೆ. 114 ಕೋಟಿ ಜನರ ಪ್ರತಿನಿಧಿ, ನಾಯಕರಾಗಿರುವ ಅವರನ್ನು ಸುಲಭವಾಗಿ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅಮೆರಿಕ, ಚೀನಾ, ರಷ್ಯಾ ಮತ್ತಿತರ ರಾಷ್ಟ್ರಗಳು ಅವರ ನಾಯಕತ್ವಕ್ಕೆವಿಶೇಷ ಗೌರವ ಕೊಡುತ್ತಿದೆ ಎಂಬುದನ್ನು ತನ್ನ ಹತ್ತಾರು ವರ್ಷಗಳ ಅನುಭವದ ಮೂಸೆಯಿಂದ ಹೇಳುತ್ತಿದ್ದೇನೆ ಎಂದರು.