Advertisement

ಅಂಬೇಡ್ಕರ್‌ ಸಂವಿಧಾನದಿಂದಲೇ ನಾನು ಶಾಸಕನಾಗಿದ್ದೇನೆ

11:52 AM Jan 27, 2021 | Team Udayavani |

ನೆಲಮಂಗಲ: ಎಚ್‌.ಡಿ.ಕುಮಾರಸ್ವಾಮಿ ಅವರ ಸಹಕಾರ ದಿಂದ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ, ನಗರದ ಕೆಲವು ಮುಖಂಡರು ವಿರೋಧ ಮಾಡುತ್ತಿರುವುದು ಸರಿಯಲ್ಲ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಹೇಳಿದರು. ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

Advertisement

ತಾಲೂಕಿನ ಅನೇಕ ಸಮಸ್ಯೆಗಳಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ ಪರಿಹಾರ ನೀಡಿದ್ದಾರೆ. ಬಹಳ ದಿನಗಳ ಬೇಡಿಕೆ ಯಾದ ನಗರಸಭೆ ಕನಸು ನನಸು ಮಾಡಿದ್ದಾರೆ. ಆದರೆ ಪುರಸ ಭೆಯೇ ಬೇಕು ಎನ್ನುವುದು ಸರಿಯಲ್ಲ ಎಂದು ತಿಳಿಸಿದರು. ಡಾ.ಬಿ.ಆರ್‌.ಅಂಬೇಡ್ಕರ್‌ ಒಂದೇ ಜಾತಿ ಸಮುದಾಯಕ್ಕೆ ಸಂವಿಧಾನ ನೀಡದೇ ಭಾರತದ ಪ್ರತಿಯೊಬ್ಬ ಪ್ರಜೆಗೂಸಮಾನ ಹಕ್ಕು ಸಿಗುವ ಮಹಾನ್‌ ಗ್ರಂಥ ನೀಡಿದ  ದಿನವಿದು. ಅವರು ನೀಡಿದ ಸಂವಿಧಾನದಿಂದ ತಾನು ಇಂದು ಶಾಸಕನಾಗಲು ಸಾಧ್ಯವಾಗಿದೆ ಎಂದರು.

ತಹಶೀಲ್ದಾರ್‌ ಮಂಜುನಾಥ್‌ ಮಾತನಾಡಿ, ಸಂವಿಧಾನಕ್ಕೆ ನಾವೆಲ್ಲರೂ ಗೌರವ ನೀಡುವುದನ್ನು ಎಂದಿಗೂ ಮರೆಯುವಂತಿಲ್ಲ. ತಾಲೂಕಿನ ಇತಿಹಾಸ ಪ್ರಸಿದ್ಧ ಮಣ್ಣೆ, ಶಿವಗಂಗೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ:ಕೊಳಚೆ ನೀರು ಹರಿಸುವವರಿಗೆ “ನೋಟಿಸ್‌’ಬಿಸಿ !

ಸಾಂಸ್ಕೃತಿಕ ಕಾರ್ಯಕ್ರಮ: ತಾಲೂಕಿನ ಬಸವನಹಳ್ಳಿ ಸರ್ಕಾರಿ ಶಾಲೆಯ ಬೈರವಿ ತಂಡ, ಶಿವಗಂಗಾ ಪಬ್ಲಿಕ್‌ ಶಾಲೆ, ವಿನಾಯಕ ವಿದ್ಯಾನಿಕೇತನ, ಪ್ರತೀಕ್ಷಾ ಶಾಲೆ ಸೇರಿದಂತೆ ವಿವಿಧ ಶಾಲೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರೆ ನಗರದ ಪ್ರೌಢಶಾಲೆಗಳು, ಸ್ಕೌಡ್ಸ್‌ ಅಂಡ್‌ ಗೈಡ್ಸ್‌ ವಿದ್ಯಾರ್ಥಿಗಳು, ಎನ್‌ಸಿಸಿ ವಿದ್ಯಾರ್ಥಿಗಳು ಪರೇಡ್‌ನಲ್ಲಿ ಭಾಗವಹಿಸಿದ್ದರು.

Advertisement

ಸನ್ಮಾನ: ಕೊರೊನಾ ವಾರಿಯರ್ಗಳಾದ ಕಮಲಮ್ಮ, ಲಕ್ಷಮ್ಮ, ಸವಿತಾ, ಶೈಲಜಾ, ಲಕ್ಷ್ಮೀದೇವಿ, ಗರುಡಪ್ಪ, ಮಹೇಶ್‌, ರಂಗಸ್ವಾಮಿ, ಆಂಜಿನಪ್ಪ, ಶಿಕ್ಷಣ ಕ್ಷೇತ್ರದ ಅಂಬಿಕಾಶಾಸ್ತ್ರಿ, ಸಿದ್ದಪ್ಪ, ರವಿ, ಪತ್ರಕರ್ತರಾದ ಲಕ್ಷ್ಮೀಕಾಂತ್‌, ವೀರಸಾಗರ ಭಾನುಪ್ರಕಾಶ್‌ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಮಾಡಲಾಯಿತು.

ಸನಾತನ ಚಾರಿಟಬಲ್‌ ಟ್ರಸ್ಟ್‌ನ ಎ.ವಿ.ಶ್ರೀನಿವಾಸನ್‌ಸ್ವಾಮೀಜಿ, ಉಪತಹಶೀಲ್ದಾರ್‌ ರಮೇಶ್‌, ಎನ್‌ಡಿಎ ಅಧ್ಯಕ್ಷ ಮಲ್ಲಯ್ಯ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಬಿ ರಂಗ ನಾಥ್‌, ಬಿಇಒ ಕೆ.ಸಿ.ರಮೇಶ್‌, ಪೌರಾಯುಕ್ತ ಮಂಜು ನಾಥಸ್ವಾಮಿ, ತಾಪಂ ಇಒ ಲಕ್ಷ್ಮೀನಾರಾಯಣಸ್ವಾಮಿ, ಶಿರಸ್ತೇದಾರ್‌ ಮಂಜುನಾಥ್‌, ಶ್ರೀನಿವಾಸಮೂರ್ತಿ, ದೈಹಿಕ ಶಿಕ್ಷಣ ಪರಿವೀಕ್ಷಕ ನಾರಾಯಣ್‌, ಕಸಾಪ ಅಧ್ಯಕ್ಷ ಕೇಶವಮೂರ್ತಿ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ನಾಗೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next