Advertisement

ರಾಹುಲ್‌ ಮದುವೆ ಆಗಿದೆಯಂತೆ!

11:04 AM Aug 15, 2018 | Team Udayavani |

ಹೈದರಾಬಾದ್‌: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಈಗಾಗಲೇ ಮದುವೆ ಆಗಿದ್ದಾರಂತೆ! ಹೀಗೆಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. 2 ದಿನಗಳ ಹೈದರಾಬಾದ್‌ ಭೇಟಿಯಲ್ಲಿದ್ದ ಅವರು ಮಂಗಳವಾರ ಸಂಪಾದಕರ ಜತೆ ನಡೆದ ಸಂವಾದ ದಲ್ಲಿ ಈ ವಿಚಾರ ಬಹಿರಂಗಪಡಿಸಿದ್ದಾರೆ. ಸಂವಾದದ ವೇಳೆ ಮದುವೆ ಕುರಿತು ಪ್ರಶ್ನಿಸಿದಾಗ ರಾಹುಲ್‌, “ನನಗೀಗಾಗಲೇ ಮದುವೆ ಆಗಿದೆ. ಕಾಂಗ್ರೆಸ್‌ ಪಕ್ಷವನ್ನೇ ನಾನು ವರಿಸಿದ್ದೇನೆ’ ಎಂದು ಹೇಳಿದ್ದಾರೆ.

Advertisement

ಇದೇ ವೇಳೆ, 2019ರ ಚುನಾವಣೆ ಬಳಿಕ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲು ಸಾಧ್ಯವೇ ಇಲ್ಲ ಎಂದೂ ಹೇಳಿದ್ದಾರೆ. ಭಾರತೀಯ ಜನತಾ ಪಕ್ಷ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 230 ಕ್ಷೇತ್ರಗಳನ್ನೂ ಗೆದ್ದುಕೊಳ್ಳಲು ಸಾಧ್ಯವೇ ಇಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next