Advertisement

ಸ್ಥಳೀಯನಾಗಿದ್ದು ನಾನು ಕೂಡಾ ನೇಕಾರ ಶಾಸಕ: BJP ಸಿದ್ದು ಸವದಿ

06:44 PM Apr 13, 2023 | Team Udayavani |

ರಬಕವಿ-ಬನಹಟ್ಟಿ: ನಾನು ಸ್ಥಳೀಯನಾಗಿದ್ದು, ಕಳೆದ ಇಪ್ಪತ್ತು ವರ್ಷಗಳಿಂದ ಇಲ್ಲಿಯೇ ಇದ್ದೇನೆ. ನಾನು ನೇಕಾರ ಶಾಸಕ, ನನ್ನನ್ನು ನೇಕಾರರ ಶಾಸಕ ಎಂದೇ ಕ್ಷೇತ್ರದಲ್ಲಿ ಗುರುತಿಸುತ್ತಾರೆ. ನೇಕಾರರ ಸಲುವಾಗಿ ಹೆಚ್ಚು ಕಾರ್ಯ ಮಾಡಿದ್ದೇನೆ. ನೇಕಾರರ ಒಲವು ನನ್ನ ಮೇಲಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

Advertisement

ಗುರುವಾರ ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, ಕಳೆದ ಬಾರಿಗಿಂತ ಹೆಚ್ಚಿನ ಮತಗಳ ಅಂತರದಿಂದ ಜಯ ಸಾಧಿಸುತ್ತೇನೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಕ್ಷೇತ್ರದಲ್ಲಿ ಮತದಾರರಿಂದ ಯಾವುದೆ ವಿರೋಧವಿಲ್ಲ. ಮತದಾರರು ಅಪಾರ ಪ್ರಮಾಣದಲ್ಲಿ ಬೆಂಬಲ ಸೂಚಿಸಿದ್ದಾರೆ. ಈಗಾಗಲೇ ಒಂದು ಸುತ್ತಿನ ಪ್ರಚಾರ ಮುಗಿಸಿದ್ದು, ಮುಂದಿನ ದಿನಗಳಲ್ಲಿಯೂ ಕ್ಷೇತ್ರದ ಪ್ರತಿಯೊಂದು ನಗರ ಮತ್ತು ಗ್ರಾಮೀಣ ಪ್ರದೇಶಗಳ ಮತದಾರರ ಮನೆ ಮನೆಗೆ ತೆರಳಿ ಮತದಾರರ ಆಶೀರ್ವಾದ ಪಡೆಯಲಿದ್ದೇವೆ. ಕ್ಷೇತ್ರದ ಜನತೆ ಬಿಜೆಪಿ ಪಕ್ಷವನ್ನು ಬೆಂಬಲಿಸಲು ಸಿದ್ಧರಾಗಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸವಿದೆ. ಇದೇ 19 ಇಲ್ಲವೆ 20 ರಂದು ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರ ಜೊತೆಗೂಡಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಶಾಸಕ ಸವದಿ ತಿಳಿಸಿದರು.

ನಾಲ್ಕನೇ ಬಾರಿ ವಿಧಾನಸೌಧ ಪ್ರವೇಶಿಸಲು ನಾಮಪತ್ರ ಸಲ್ಲಿಸುತ್ತಿದ್ದು ಅತ್ಯಧಿಕ ಬಹುಮತದಿಂದ ಗೆಲ್ಲುವ ವಿಶ್ವಾಸ ನನಗಿದೆ. ತೇರದಾಳ ಕ್ಷೇತ್ರದ ಜನತೆಗೂ ನನಗೂ ಅವಿನಾಭಾವ ಸಂಬಂಧವಿದೆ. ಈ ಸಂಬಂಧವನ್ನು ಕಡೆಗಣಿಸಲು ಯಾವ ಶಕ್ತಿಗೂ ಸಹ ಸಾಧ್ಯವಿಲ್ಲ. ನನಗೆ ಪ್ರತಿಸ್ಪರ್ಧೆ ಕಾಣುತ್ತಿಲ್ಲವೆಂದರು. ಕಳೆದ ೫ ವರ್ಷಗಳ ಅವಧಿಯಲ್ಲಿ ಕ್ಷೇತ್ರಾದ್ಯಂತ ಹೆಚ್ಚಿನ ಕಾರ್ಯಗಳು ನಡೆದಿವೆ. ಇವೇ ನನಗೆ ಶ್ರೀರಕ್ಷೆಯಾಗಲಿದ್ದು, ಜನತೆ ನನಗೆ ಆಶೀರ್ವಾದ ಮಾಡಲಿದ್ದಾರೆಂದು ಸವದಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪುಂಡಲೀಕ ಪಾಲಭಾವಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸವಪ್ರಭು ಹಟ್ಟಿ, ಪ್ರಾಚಾರ್ಯ ಬಸವರಾಜ ಕೊಣ್ಣೂರ, ಸಿದ್ದನಗೌಡ ಪಾಟೀಲ, ಧರೆಪ್ಪ ಉಳ್ಳಾಗಡ್ಡಿ, ಶ್ರೀಶೈಲ ಯಾದವಾಡ, ಸಿದ್ದು ಅಮ್ಮಣಗಿ, ಗೋವಿಂದ ಡಾಗಾ, ರಮೇಶ ಎಕ್ಸಂಬಿ, ವರ್ಧಮಾನ ಕೋರಿ, ರವಿ ಸಂಪಗಾವಿ, ದಿನೇಶ ಮೂರಾಬಟ್ಟಿ, ಸಂಜು ಸಿದ್ದಾಪೂರ, ಎಸ್. ಎಸ್. ಸಲಬನ್ನವರ, ಮಹಾಂತೇಶ ಪದಮಗೊಂಡ, ಕಿರಣ ಕುಳ್ಳಿ, ನೇಮಣ್ಣ ಮಾಂಗ, ಪಾಂಡುರಂಗ ಸಾಲ್ಗುಡೆ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next