ಬ್ರಹ್ಮಾವರ: ನನಗಿನ್ನೂ 61 ವರ್ಷ. 75 ವರ್ಷದ ತನಕ ಯುವಕನೇ. ದೇವರ ದಯೆ, ರಾಜ್ಯದ ಜನತೆಯ ಆಶೀರ್ವಾದವಿದ್ದರೆ ನಾನು ಸಿಎಂ ಆಗುತ್ತೇನೆ ಎಂದು ಅರಣ್ಯ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ವಿ. ಕತ್ತಿ ಹೇಳಿದರು.
ಅವರು ನೀಲಾವರದಲ್ಲಿ ಕೀರ್ತಿಶೇಷ ಪೇಜಾವರ ಶ್ರೀಗಳ ಸ್ಮೃತಿ ವನಕ್ಕೆ ಭೂಮಿಪೂಜೆ ನೆರವೇರಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ನಾನು ಸಿಎಂ ಆಗುವ ಅವಸರದಲ್ಲಿಲ್ಲ. ಪದವಿ ಬೇಕು ಎಂದು ಕೇಳುವುದಿಲ್ಲ. ಸಿಎಂ ಆಗಿ ಜವಾಬ್ದಾರಿ ನಿಭಾಯಿಸುವ ಸಾಮರ್ಥ್ಯ ನನಗಿದೆ ಎಂದರು.
ನಾನು ಸೀನಿಯರ್ ಎಂಎಲ್‌ಎ. 10 ಚುನಾವಣೆಗಳಲ್ಲಿ ಸ್ಪರ್ಧಿಸಿ 9 ಬಾರಿ ಗೆದ್ದು ಎಂಟು ಅವಧಿಗೆ ಅಧಿಕಾರ ಚಲಾಯಿಸಿದ್ದೇನೆ. ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಟ್ಟಿಲ್ಲ. ಅದಾಗಿಯೇ ಬಂದರೆ ನೋಡೋಣ ಎಂದು ಹೇಳಿದರು.