ಬೆಂಗಳೂರು: ಹುಂಡೈ ಮೋಟಾರ್ ಇಂಡಿಯಾ ಪ್ರೈ.ಲಿ. ವರ್ಷಾಂತ್ಯದ ವಿಶೇಷ ಕೊಡುಗೆ ಜತೆಗೆ ತನ್ನ ಗ್ರಾಹಕರಿಗಾಗಿ ದೇಶಾದ್ಯಂತ “ಹುಂಡೈ ಸ್ಮಾರ್ಟ್ ಕೇರ್ ಕ್ಲಿನಿಕ್’ಗೆ ಶನಿವಾರ ಚಾಲನೆ ನೀಡಿದೆ.
ಹುಂಡೈ ಸ್ಮಾರ್ಟ್ ಕೇರ್ ಕ್ಲಿನಿಕ್‌ಗೆ ಚಾಲನೆ ನೀಡಿ ಮಾತನಾಡಿದ ಮಾರಾಟ ಮಾರ್ಕೆಟಿಂಗ್ ಮತ್ತು ಸೇವೆಗಳ ನಿರ್ದೇಶಕ ತರುಣ್ ಗಾರ್ಗ್, ಹುಂಡೈ ಮೋಟಾರ್ 2021ರಲ್ಲಿ ಹೊಸ ಮೈಲುಗಲ್ಲು ನಿರ್ಮಿಸಿದೆ. 25 ವರ್ಷಗಳ ಸಂಭ್ರಮಾಚರಣೆ ಯಲ್ಲಿರುವ ನಮ್ಮ ಸಂಸ್ಥೆಯು ದೇಶಾದ್ಯಂತ 10 ಮಿಲಿಯನ್ ಕಾರು ಬಳಕೆದಾರರನ್ನು ಹೊಂದಿದೆ.
ಈ ಸಂಭ್ರಮವನ್ನು ವಿಸ್ತರಿಸಲು ಗ್ರಾಹಕರಿಗಾಗಿ ವಿಶೇಷವಾದ ಸೌಲಭ್ಯ ಹಾಗೂ ಸೇವೆಗಳನ್ನು ನೀಡಲು ಹುಂಡೈ ಸ್ಮಾರ್ಟ್ ಕೇರ್ ಕ್ಲಿನಿಕ್ ತೆರೆಯಲಾಗಿದೆ. ಹುಂಡೈ ಮೋಟಾರ್ ಗ್ರಾಹಕರ ಕೇಂದ್ರಿತ ಬ್ರಾಂಡ್ ಆಗಿದ್ದು, ಗ್ರಾಹಕರಿಗೆ ವಿಶೇಷವಾದ ಕೊಡುಗೆ ಹಾಗೂ ಆಯ್ಕೆ ನೀಡುತ್ತಾ ಬಂದಿದೆ ಎಂದರು. ಹುಂಡೈ ತನ್ನ ಗ್ರಾಹಕರಿಗಾಗಿ ಹುಂಡೈ ಸ್ಮಾರ್ಟ್ ಕೇರ್ ಕ್ಲಿನಿಕ್ ನಲ್ಲಿ ಮೆಕಾನಿಕಲ್ ಭಾಗಗಳ ಮೇಲೆ ಶೇ.10, ಮೆಕಾನಿಕಲ್ ಲೇಬರ್ ಶುಲ್ಕದ ಮೇಲೆ ಶೇ.20, ಸ್ಯಾನಿಟೈಸೇಶನ್ ಮೇಲೆ ಶೇ.20ರಷ್ಟು ರಿಯಾಯಿತಿ ಸಿಗಲಿದೆ.
ಇದನ್ನೂ ಓದಿ;- ಒಂಟೆ ಸವಾರಿ ವಿಡಿಯೋ ಹಂಚಿಕೊಂಡ ಸಚಿವ ಕಿರಣ್ ರಿಜಿಜು
ಜತೆಗೆ ಪ್ರತಿಯೊಂದು ಮಾದರಿ ಖರೀದಿಯ ಮೇಲೆ ವಿಶೇಷ ಪ್ರಯೋಜನವನ್ನು ಪಡೆಯ ಬಹುದಾಗಿದೆ. ಸಂಸ್ಥೆಯು ಗ್ರಾಹಕರಿಗೆ 360ಡಿಗ್ರಿಯಲ್ಲಿ ಡಿಜಿಟಲ್ ಹಾಗೂ ಸಂಪರ್ಕ ಕಡಿಮೆ ವ್ಯವಸ್ಥೆಯನ್ನು ಕಲ್ಪಿಸಿದೆ. ಆನ್‌ಲೈನ್ ಸೇವಾ ಬುಕಿಂಗ್, ವಾಹನದ ಸ್ಥಿತಿ ನವೀಕರಣ, ಮನೆ-ಕಚೇರಿಯಿಂದ ಆನ್‌ಲೈನ್ ಪಾವತಿ ಸೌಲಭ್ಯ, ಪಿಕ್ ಆ್ಯಂಡ್ ಡ್ರಾಪ್, ಗ್ರಾಹಕರು ಬಯಸಿದಾಗ ಸೇವೆಯನ್ನು ನೀಡಲು ಸಿದ್ಧವಾಗಿದೆ.
ಜತೆಗೆ ಗ್ರಾಹಕರು ಹೊಸ ವಾಹನ ನೋಡಲು, ಟೆಸ್ಟ್ ಡ್ರೈವ್ ಬುಕಿಂಗ್‌ಗೆ, ವಾಹನಗಳ ಸೇವೆಯನ್ನು ನಿಗದಿ ಪಡಿಸಲು ಹುಂಡೈ ಚಾಟ್‌ಬಾಟ್ ಬಳಸಬಹುದಾಗಿದೆ. 1360 ವರ್ಕ್ ಶಾಪ್‌ಗ್ಳನ್ನು ಹೊಂದಿದ್ದು, ಪ್ರಬಲ ನೆಟ್‌ವರ್ಕ್ ಹೊಂದಿದೆ. ವಿಸ್ತೃತವಾದದ ವಾರೆಂಟಿ, ಹುಂಡೈ ಶೀಲ್ಡ್ ಆಫ್ ಟ್ರಸ್ಟ್ ಮತ್ತು ರೋಡ್‌ಸೈಡ್ ಅಸಿಸ್ಟೆನ್ಸ್ ಪ್ರೋಗ್ರಾಂ ಅಂತಹ ಕೊಡುಗೆಗಳನ್ನು ಕೈಗೆಟುಕುವ ವೆಚ್ಚದಲ್ಲಿ ತನ್ನ ಗ್ರಾಹಕರಿಗೆ ನೀಡಲಿದೆ.