Advertisement

ಹ್ಯುಂಡೈನಿಂದ ರಸ್ತೆ ಸುರಕ್ಷತಾ ಸಪ್ತಾಹ

11:39 AM Apr 25, 2018 | |

ನವದೆಹಲಿ: ದೇಶದ 2ನೇ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆ ಹ್ಯುಂಡೈ ಮೋಟಾರ್‌ ಇಂಡಿಯಾ ಏ.23ರಿಂದ 30ರವರೆಗೆ ದೇಶಾದ್ಯಂತ ರಸ್ತೆ ಸುರಕ್ಷಾ ಸಪ್ತಾಹ ಹಮ್ಮಿಕೊಂಡಿದೆ. ಸಪ್ತಾಹದಲ್ಲಿ ರಸ್ತೆ ಸುರಕ್ಷತೆ ಉಪಕ್ರಮಗಳು, ಟ್ರಾಫಿಕ್‌ ನಿಯಮಗಳು ಹಾಗೂ ಸುರಕ್ಷಿತ ಚಾಲನಾ ಪದ್ಧತಿಯನ್ನು ಉತ್ತೇಜಿಸುವ ಗುರಿ ಸಂಸ್ಥೆಯದಾಗಿದೆ.

Advertisement

ಈ ಸಂದರ್ಭದಲ್ಲಿ ಹ್ಯುಂಡೈ ಮೋಟಾರ್‌ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವೈ.ಕೆ. ಕೂØ ಮಾತನಾಡಿ, ಹ್ಯುಂಡೈ ಸಾಮಾಜಿಕ ಜವಾಬ್ದಾರಿಯುಳ್ಳ ಸಂಸ್ಥೆಯಾಗಿದೆ. ಒಂದು ವಾರ ಕಾಲ ನಮ್ಮ ಎಲ್ಲ 1300 ವರ್ಕ್‌ಶಾಪ್‌ಗ್ಳಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳನ್ನು ಪಾಲಿಸುವ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ.

ಈ ಕಾರ್ಯವನ್ನು 2015ರಿಂದಲೂ ಮಾಡುತ್ತಾ ಬಂದಿದೆ. ರಸ್ತೆ ಸುರಕ್ಷತಾ ಜ್ಞಾನವು ಜೀವನದ ಒಂದು ಪ್ರಮುಖ ಕೌಶಲ್ಯವಾಗಿದೆ. ಇದನ್ನು ಮಕ್ಕಳು, ಯುವಕರು ಸೇರಿದಂತೆ ಎಲ್ಲರಿಗೂ ತಿಳಿಯಪಡಿಸುವ ಮೂಲಕ ರಸ್ತೆ ಮತ್ತು ಚಾಲನಾ ನಡವಳಿಕೆಗಳ ಬಗ್ಗೆ ಜಾಗೃತಿ ಉಂಟುಮಾಡುವುದು ಕಾರ್ಯಕ್ರಮದ ಉದ್ದೇಶ ಎಂದರು. 

ಮಕ್ಕಳಿಗೆ ಸ್ಪರ್ಧೆ: ವಾರಾಂತ್ಯದವರೆಗೆ ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳು, ವಸತಿ ಸಮುದಾಯಗಳ ಬಳಿ ಹ್ಯುಂಡೈ ಮಾರಾಟ ಮತ್ತು ಸರ್ವೀಸ್‌ ಶಿಬಿರ ಆಯೋಜಿಸುತ್ತಿದ್ದು, ಇದೇ ವೇಳೆ ಮಕ್ಕಳಿಗೆ ಸಂಚಾರ ಸುರಕ್ಷತೆ ವಿಷಯದ ಬಗ್ಗೆ ಚಿತ್ರಕಲೆ ಮತ್ತು ಸ್ಲೋಗನ್‌ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಅಲ್ಲದೆ, ಸಪ್ತಾಹದ ಅವಧಿಯಲ್ಲಿ ಗ್ರಾಹಕರು ತಮ್ಮ ಹ್ಯುಂಡೈ ಕಾರನ್ನು 20 ಪಾಯಿಂಟ್‌ ಸೇಫ್ಟಿ ಚೆಕ್‌ ಅಪ್‌ ಮಾಡಿಸಿಕೊಳ್ಳುವ ಅವಕಾಶಕ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next