Advertisement
ಇದರ ನಡುವೆಯೇ ಈಗ ಗ್ರಾಂಡ್ ಐ10 ನಿಯೋಸ್, ಹೊಸ ರೂಪದೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದೆ. ಹುಂಡೈ ಎಂದರೆ ಅದರ ಸ್ಟೆಲ್ ಗೆ ಹೆಸರು. ಈ ಕಾರು ಅದೇ ರೀತಿಯಲ್ಲೇ ಬಂದಿದೆ. ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಮಾದರಿಗಳಲ್ಲಿ ನಿಯೋಸ್ ಕಾರನ್ನು ಬಿಡುಗಡೆ ಮಾಡಲಾಗಿದ್ದು, ಕಾರಿನ ಹೊರಾಂಗಣ ಮತ್ತು ಒಳಾಂಗಣ ಗಮನ ಸೆಳೆಯುತ್ತಿವೆ.
ಬೇರೆ ಕಾರು ಕಂಪನಿಗಳ ರೀತಿಯಲ್ಲಿ ಮೂರು ಸಿಲಿಂಡರ್ ಹಾಕಿ, ಹೆಚ್ಚು ಮೈಲೇಜ್ ಕೊಡುತ್ತೇವೆ ಎಂಬ ಜಿದ್ದಿಗೆ ಬಿದ್ದಿಲ್ಲ. ಹೀಗಾಗಿಯೇ 4 ಸಿಲಿಂಡರ್‌ಗಳ ಮತ್ತು 1197 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಕಾರಿಗೆ ಪ್ರತಿ ಲೀಟರ್ ಗೆ 20 ಕಿ.ಮೀ. ಮೈಲೇಜ್ ಕೊಡುತ್ತೇವೆ ಎಂದು ಹೇಳಿಕೊಂಡಿದೆ. ಸಿಟಿಯಲ್ಲಿ ಓಡಿಸುವಾಗ ಹಾಗೂ ಹೀಗೂ ಇದು 14-15 ಕಿ.ಮೀ. ಬರಬಹುದು ಎಂಬ ಅಂದಾಜು ಇರಿಸಿಕೊಳ್ಳಬಹುದು. ಆದರೆ, ಡೀಸೆಲ್ ಎಂಜಿನ್ ನಲ್ಲಿ ಕೊಂಚ ಸಾಮರ್ಥ್ಯ ಇಳಿಕೆ ಮಾಡಿ, ಪ್ರತಿ ಲೀ. ಡೀಸೆಲ್ ಗೆ 26 ಕಿ.ಮೀ.ಗಿಂತ ಹೆಚ್ಚು ಮೈಲೇಜ್ ನೀಡುತ್ತೇವೆ ಎಂದು ಕಂಪನಿ ಹೇಳಿಕೊಂಡಿದೆ. ಕ್ಲಾಸ್ ಡಿಸೈನ್
ಹೊರಾಂಗಣ ಮತ್ತು ಒಳಾಂಗಣ ವಿನ್ಯಾಸದ ವಿಚಾರದಲ್ಲಿ ಹುಂಡೈ ಮಾರುಕಟ್ಟೆಯಲ್ಲಿ ತುಸು ಮುಂದೆಯೇ ಇರುತ್ತದೆ. ನಿಯೋಸ್ ನ ಡಿಸೈನ್ ಕೂಡ ಗ್ರಾಂಡ್ ಆಗಿಯೇ ಇದೆ. ಒಳಾಂಗಣದಲ್ಲಿ ಸೀಟು, ಡಿಜಿಟಲ್ ಸ್ಕ್ರೀನ್ ಹೊಂದಿರುವ ಮ್ಯೂಸಿಕ್ ಸಿಸ್ಟಮ್ ಆಂಡ್ರಾಯ… ಆಟೋ ಮತ್ತು ಆಪಲ್ ಏರ್ ಪ್ಲೇ ಆಪ್ಶನ್… ರಿವರ್ಸ್ ಸ್ಕ್ರೀನ್… ವೈರ್‌ಲೆಸ್ ಚಾರ್ಜರ್… ಹೀಗೆ ಒಳ್ಳೇ ಫೀಚರ್‌ಗಳಿವೆ. ಅಂತೆಯೇ ಬ್ಯಾಕ್ ಸೀಟಿನಲ್ಲಿ ಆರಾಮಾಗಿ ಕುಳಿತುಕೊಳ್ಳಬಹುದು.
Related Articles
ಇದರ ಜತೆಯಲ್ಲಿ ಈ ಕಾರಿಗೆ ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯ ಸ್ವಿಫ್ಟ್ ಸರಣಿ, ನೆಕ್ಸಾದ ಬಲೆನೋ, ಟಾಟಾದ ಟಿಯಾಗೋ ಮತ್ತು ಟಿಗೋರ್, ತನ್ನದೇ ಕಂಪನಿಯ ಸ್ಯಾಂಟ್ರೋ ಸೇರಿದಂತೆ ಹಲವಾರು ಕಾರುಗಳ ಸ್ಪರ್ಧೆ ಉಂಟು.
Advertisement
ಪೆಟ್ರೋಲ್‌ಗಿಂತ ಡೀಸೆಲ್ ಸೂಪರ್ಮೈಲೇಜ್ ಮತ್ತು ಸಾಮರ್ಥ್ಯದ ಲೆಕ್ಕಾಚಾರದಲ್ಲಿ ಪೆಟ್ರೋಲ್ ಗಿಂತ ಡೀಸೆಲ್ ಮಾದರಿಯ ಕಾರು ಕೊಂಚ ಓಕೆ ಎಂಬುದು ಆಟೋಮೊಬೈಲ್ ಮಾರುಕಟ್ಟೆಯ ವಿಶ್ಲೇಷಕರ ಅಂಬೋಣ. ಮೈಲೇಜ್ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಪೆಟ್ರೋಲ್ ಗೆ 20.7 ಕಿ.ಮೀ., ಆದರೆ, ಡೀಸೆಲ್ 26.2 ಕಿ.ಮೀ. ನೀಡುತ್ತದೆ ಎಂದು ಕಂಪನಿಯೇ ಹೇಳಿಕೊಂಡಿರುವುದರಿಂದ ಸಿಟಿ ರೈಡ್ ನಲ್ಲಿ ಅಂದಾಜು 18-20 ಕೊಡಬಹುದು ಎಂದು ಹೇಳಲಾಗುತ್ತಿದೆ. ಸುರಕ್ಷತಾ ಸವಲತ್ತುಗಳು
– ಏರ್ ಬ್ಯಾಗ್
– ಪ್ಯಾಸೆಂಜರ್ ಏರ್ ಬ್ಯಾಗ್
– ಎ ಬಿ ಎಸ್
– ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪೋಗ್ರಾಮ್
– ಚೈಲ್ಡ… ಸೆಫ್ಟಿ ಲಾಕ್
– ಪವರ್ ಡೋರ್ ಲಾಕ್
– ಸೆಂಟ್ರಲ್ ಲಾಕಿಂಗ್ (ಎರಾ ಸರಣಿ+ ಮ್ಯಾಗ್ನಾ ಸರಣಿ)
– ರೇರ್ ವೈಪರ್(ಎರಾ-ಮ್ಯಾಗ್ನಾ+ ಆಸ್ತಾ ಸರಣಿ) -ಸೋಮಶೇಖರ ಸಿ.ಜೆ.