ಬೆಂಗಳೂರು:”ಸ್ಮಾರ್ಟ್ ಮೊಬಿಲಿಟಿ ಪರಿಹಾರಗಳನ್ನು ಒದಗಿಸುವ’ ದೇಶದ ಮೊದಲ ಸಂಸ್ಥೆಯಾಗಿರುವ ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಫನ್ ಡ್ರೈವಿಂಗ್ ಅನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲು ಭಾರತಕ್ಕಾಗಿ “ಎನ್ ಲೈನ್’ ಮಾಡೆಲ್‌ನ ನೂತನ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಎನ್ ಲೈನ್ ಕಾರ್ ಗ್ರಾಹಕರಿಗೆ ಕ್ರೀಡೆ ಮತ್ತು ಸಾಹಸಗಳಿಗೆ ಪ್ರೇರಣೆ ನೀಡಲಿದೆ. ಈ ಎನ್ ಲೈನ್ ಮಾಡಲ್ ಪರಿಚಯಿಸುವ ಮೂಲಕ ಹುಂಡೈ ಭಾರತದಲ್ಲಿ ತನ್ನ ಗ್ರಾಹಕರಬಗೆಗಿನ ತನ್ನ ಬದ್ಧತೆಯನ್ನು ಮರು ವ್ಯಾಖ್ಯಾನಿಸಿದೆ.
ಈ ಕುರಿತು ಅನಿಸಿಕೆಗಳನ್ನು ಹಂಚಿಕೊಂಡಿರುವ ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎಸ್.ಎಸ್.ಕಿಮ್, ದೇಶದ ಮುಂಚೂಣಿ ಕಂಪೆನಿಯಾಗಿರುವ ಹುಂಡೈ, ಗ್ರಾಹಕರ ಆಕಾಂಕ್ಷೆಗಳನ್ನು ಹೊಸತನದ ಎತ್ತರಕ್ಕೆ ತೆಗೆದುಕೊಂಡು ಹೋಗುವ ಬದ್ಧತೆಯನ್ನು ತೋರಿಸಿದೆ. ಭಾರತದಲ್ಲಿ ಎನ್ ಲೈನ್ ಪರಿಚಯಿಸುವ ಮೂಲಕಇಲ್ಲಿನಗ್ರಾಹಕರಲ್ಲಿಕ್ರೀಡಾಅನುಭವಗಳನ್ನು ಪ್ರೇರೇಪಿಸಲಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಫೈಟರ್ ಸಾವು ಪ್ರಕರಣ: ದೂರು ದಾಖಲಾಗುತ್ತಿದ್ದಂತೆ ನಿರ್ಮಾಪಕ ಗುರು ದೇಶಪಾಂಡೆ ನಾಪತ್ತೆ ?
ಗ್ರಾಹಕರ ಸಂತೋಷವನ್ನು ಇಮ್ಮಡಿಗೊಳಿಸಲು 2021ರಲ್ಲಿ ಹೊಸ ಎನ್ ಲೈನ್ ಮಾಡಲ್ ಕಾರು ಪರಿಚಯಿಸಲಾಗಿದೆ. ಮುಂದಿನ ಕೆಲ ವರ್ಷಗಳಲ್ಲಿ ಭಾರತದ ಗ್ರಾಹಕರಿಗೆ ಹೆಚ್ಚುವರಿ ಎನ್ ಲೈನ್ ಮಾಡಲ್‌ಗಳನ್ನು ಪರಿಚಯಿಸಲಾಗುವುದು ಎಂದು ಕಿಮ್ ಹೇಳಿದರು.