Advertisement

ಹೈಪರ್‌ಕ್ರೋಮ್‌ ವಾಚುಗಳು

01:13 PM Dec 02, 2017 | |



Advertisement

ಹೆಸರಾಂತ ಅಂತಾರಾಷ್ಟ್ರೀಯ ವಾಚು ತಯಾರಕ ಸಂಸ್ಥೆ, ಸ್ವಿಝರ್‌ಲೆಂಡ್‌ ಮೂಲದ ರಾಡೊ, ಇತ್ತೀಚಿಗಷ್ಟೆ ಬೆಂಗಳೂರಿನಲ್ಲಿ ತನ್ನ ನೂತನ “ಹೈಪರ್‌ಕ್ರೋಮ್‌’ ಶ್ರೇಣಿಯ ವಾಚುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತು. ಸಂಸ್ಥೆಯ ರಾಯಭಾರಿ, ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಅದಕ್ಕೆಂದೇ ನಗರಕ್ಕೆ ಆಗಮಿಸಿದ್ದರು.

ನಗರದ ಯು.ಬಿ. ಸಿಟಿ ಮಾಲ್‌ನಲ್ಲಿರುವ ರಾಡೊ ಮಳಿಗೆಯಲ್ಲಿ ಸಮಾರಂಭ ಏರ್ಪಾಡಾಗಿತ್ತು. ಅತ್ಯಾಧುನಿಕ ತಂತ್ರಜ್ಞಾನ, ಉತ್ಕೃಷ್ಟ ಗುಣಮಟ್ಟದ ಈ ಶ್ರೇಣಿ ಗ್ರಾಹಕರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸ ಸಂಸ್ಥೆಯದು. ಬೆಲೆಯೂ ದುಬಾರಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ನವೀನ ಶ್ರೇಣಿಯ ವಾಚುಗಳನ್ನು ಧರಿಸಲಿಚ್ಛಿಸುವವರು ಮಳಿಗೆಗೆ ಭೇಟಿ ನೀಡಿ ಖರೀದಿಸಬಹುದಾಗಿದೆ.

ಎಲ್ಲಿ?: 108, ದಿ ಕಲೆಕ್ಷನ್‌, ಯು.ಬಿ. ಸಿಟಿ ಮಾಲ್‌

Advertisement

Udayavani is now on Telegram. Click here to join our channel and stay updated with the latest news.

Next