Advertisement

Mangaluru: ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಸಂಚಾರ: ಅಪಘಾತಕ್ಕೆ ಆಹ್ವಾನ

03:37 PM Oct 18, 2024 | Team Udayavani |

ಮಹಾನಗರ: ಹೆದ್ದಾರಿಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನಗಳನ್ನು ಚಲಾಯಿಸುವ ಪರಿಪಾಠ ಹೆಚ್ಚಿನ ಕಡೆಗಳಲ್ಲಿ ಕಂಡು ಬರುತ್ತಿದ್ದು, ಅಡ್ಯಾರ್‌, ಕಣ್ಣೂರು ಭಾಗದಲ್ಲಿಯೂ ಇದು ಸಾಮಾನ್ಯವಾಗಿದೆ. ಹಗಲು ಮಾತ್ರವಲ್ಲದೆ ರಾತ್ರಿ ವೇಳೆಯಲ್ಲೂ ರಾಂಗ್‌ ಸೈಡ್‌ನ‌ಲ್ಲಿ ವಾಹನ ಚಲಾಯಿಸಿ ಅಪಘಾತಗಳಿಗೆ ಕಾರಣವಾಗುತ್ತಿವೆ.

Advertisement

ಒಳ ರಸ್ತೆಗಳಿಂದ ಬರುವ ವಾಹನಗಳು ನಿಗದಿತ ಸ್ಥಳಗಳಿಗೆ ತಲುಪಲು ವಿರುದ್ಧ ದಿಕ್ಕಿನಲ್ಲಿಯೇ ಸಂಚರಿಸುತ್ತವೆ. ಕಣ್ಣೂರು ಹಳೆ ಚೆಕ್‌ಪೋಸ್ಟ್‌ ಬಿಟ್ಟರೆ ಅಡ್ಯಾರ್‌ಕಟ್ಟೆ, ಅಲ್ಲಿಂದ ಮುಂದಕ್ಕೆ ಸಹ್ಯಾದ್ರಿ ಕಾಲೇಜು ಹೀಗೆ ಹೆದ್ದಾರಿಯಲ್ಲಿ ಡಿವೈಡರ್‌ಗಳು ಸಾಕಷ್ಟು ಅಂತರದಲ್ಲಿ ಇವೆ. ಆದ್ದರಿಂದ ವಾಹನ ಸವಾರರು ಡಿವೈಡರ್‌ಗಳನ್ನು ಬಳಸಿ ಸಾಗುವ ಬದಲು ವಿರುದ್ಧ ದಿಕ್ಕಿನಲ್ಲಿಯೇ ಸಂಚರಿಸುತ್ತಾರೆ.

ದ್ವಿಚಕ್ರ ವಾಹನಗಳು, ಆಟೋಗಳು, ಕಾರು ಹೀಗೆ ಬಹುತೇಕ ಲಘು ವಾಹನಗಳನ್ನು ವಿರುದ್ಧ ದಿಕ್ಕಿನಲ್ಲಿ ಸಾಗುತ್ತವೆ. ದ್ವಿಚಕ್ರ ವಾಹನಗಳಂತೂ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದು ಸಾಮಾನ್ಯ ಎನ್ನುವಂತಾಗಿದೆ. ಕೆಲವರು ಹೆಲ್ಮೆಟ್‌ ಧರಿಸದೆ, ರಾತ್ರಿ ವೇಳೆಯಲ್ಲಿ ಪ್ರಖರ ಹೆಡ್‌ಲೈಟ್‌ ಹಾಕಿಕೊಂಡು ವಾಹನ ಚಲಾಯಿಸುತ್ತಾರೆ. ಇದರಿಂದ ಸರಿಯಾದ ಪಥದಲ್ಲಿ ಬರುವ ವಾಹನಗಳಿಗೆ ಸಮಸ್ಯೆಯಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಯ ಕಣ್ಣೂರು, ಅಡ್ಯಾರ್‌, ಪಡೀಲ್‌ ಪ್ರದೇಶಗಳು ಈಗಾಗಲೇ ಅಪಘಾತ ವಲಯಗಳಾಗಿ ಮಾರ್ಪಾಡಾಗಿದೆ. ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದು ಕೂಡ ಅಪಘಾತಗಳಿಗೆ ಕಾರಣವಾಗುವ ಸಾಧ್ಯತೆಯಿದೆ. ಈ ರೀತಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಾಹನ ಸವಾರರು, ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next