Advertisement

ಕಲ್ಯಾಣಿ, ಕೆರೆಗಳ ಅಭಿವೃದ್ಧಿಗೆ ಜಲಾಭಿಷೇಕ ಯೋಜನೆ

11:13 PM Jan 24, 2020 | Lakshmi GovindaRaj |

ಮಂಗಳೂರು: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಸೇರಿದ ದೇವಾಲಯಗಳ ಕಲ್ಯಾಣಿ, ಕೊಳ, ಕೆರೆ, ಸರೋವರಗಳನ್ನು ಅಭಿವೃದ್ಧಿಪಡಿಸಲು ಜಲಾಭಿಷೇಕ ಯೋಜನೆ ರೂಪಿಸಲಾ ಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Advertisement

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಈ ಯೋಜನೆಗೆ ತಗಲುವ ವೆಚ್ಚಗಳನ್ನು ಆಯಾಯ ದೇವಾಲಯಗಳ ನಿಧಿ ಮತ್ತು ವಿವಿಧ ಖಾಸಗಿ ಉದ್ದಿಮೆಗಳ ಸಿಎಸ್‌ಆರ್‌ ನಿಧಿಯಡಿ, ಸಾರ್ವಜನಿಕರ ದೇಣಿಗೆ, ಶ್ರಮದಾನದ ಮೂಲಕ ಭರಿಸಲಾಗುವುದು ಎಂದರು.

ಮದ್ಯದಂಗಡಿಗಳಿಗೆ ದೇವರ ಹೆಸರಿಡದಂತೆ ಮನವಿ: ಬಾರ್‌, ಮದ್ಯದಂಗಡಿಗಳಿಗೆ ದೇವರ ಹೆಸರನ್ನು ಇಡುವುದಕ್ಕೆ ಅವಕಾಶ ನೀಡಬಾರದೆಂದು ಕೆಲವರು ಮನವಿ ಮಾಡಿಕೊಂಡಿ ರುವ ಹಿನ್ನಲೆಯಲ್ಲಿ ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಅಬಕಾರಿ-ಕಾನೂನು ಇಲಾಖೆಗೆ ಸೂಚಿಸಿದ್ದೆ.

ಅದು ಪರಿಶೀಲನೆಯಲ್ಲಿದೆ. ಬಾರ್‌, ಮದ್ಯದಂಗಡಿಗಳಿಗೆ ದೇವರ ಹೆಸರು ಇಡಬಾರದು ಹಾಗೂ ಅಂತಹ ಹೆಸರುಗಳಿದ್ದರೆ ಸ್ವಯಂಪ್ರೇರಿತವಾಗಿ ತೆರವುಗೊಳಿಸಬೇಕು ಎಂದು ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next