Advertisement

Hyderabad ;ಡ್ರೋನ್‌ ವಿರೋಧಿ ವ್ಯವಸ್ಥೆಗೆ ಇಂದ್ರಜಾಲ

09:34 PM Sep 04, 2023 | Team Udayavani |

ಕೃತಕ ಬುದ್ಧಿಮತ್ತೆ(ಎಐ)ಯಿಂದ ಚಾಲಿತ ಡ್ರೋನ್‌ ವಿರೋಧಿ ವ್ಯವಸ್ಥೆಯನ್ನು ಹೈದರಾಬಾದ್‌ ಮೂಲಕದ ರೋಬೋಟಿಕ್ಸ್‌ ಕಂಪನಿ “ಗ್ರೆನೆ ರೋಬೋಟಿಕ್ಸ್‌’ ಅಭಿವೃದ್ಧಿಪಡಿಸಿದೆ. ಇದಕ್ಕೆ “ಇಂದ್ರಜಾಲ’ ಎಂದು ನಾಮಕರಣ ಮಾಡಲಾಗಿದೆ.

Advertisement

“ಇಂದ್ರಜಾಲ’ವು ಪರಮಾಣು ಘಟಕಗಳು, ತೈಲ ಬಾವಿಗಳು ಸೇರಿದಂತೆ ಇಡೀ ನಗರವನ್ನು ವಿವಿಧ ರೀತಿಯ ಡ್ರೋನ್‌ಗಳಿಂದ ರಕ್ಷಿಸಲಿದೆ. ಈ ರೀತಿ ಎಐ ಚಾಲಿತ ಡ್ರೋನ್‌ ವಿರೋಧಿ ವ್ಯವಸ್ಥೆಯನ್ನು ಭಾರತದಲ್ಲಿ ಅಭಿವೃದ್ಧಿಪಡಿಸಿರುವುದು ಇದೇ ಮೊದಲು.

ಅಲ್ಲದೇ ಇದು ವಿಶ್ವದ ಏಕೈಕ ವಿಶಾಲ ಪ್ರದೇಶದ ಮಾನವರಹಿತ ವಿಮಾನ ವ್ಯವಸ್ಥೆ ವಿರೋಧಿ ತಂತ್ರಜ್ಞಾನವಾಗಿದೆ.

“ಇಂದ್ರಜಾಲ’ವು ಸ್ಥಿರ ರಕ್ಷಣಾ ವ್ಯವಸ್ಥೆಯೊಂದಿಗೆ ಸಮಗ್ರ ಭದ್ರತೆಯನ್ನು ಒದಗಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next