Advertisement

ಒಮ್ಮೆ ತಿಂದರೆ ಮತ್ತೆ ಬೇಕೆನ್ನಿಸುವ ಹೈದರಾಬಾದ್ ಚಿಕನ್ ಬಿರಿಯಾನಿ . . . 

05:00 PM Aug 27, 2022 | ಶ್ರೀರಾಮ್ ನಾಯಕ್ |

ಬಿರಿಯಾನಿ ಎಂದಾಗ ಎಲ್ಲರ ಬಾಯಿಯಲ್ಲಿ ನೀರು ಬಂದೆ ಬರುತ್ತದೆ . ಅದರಲ್ಲೂ ನಾನ್ ವೆಜ್ ಪ್ರಿಯರು ಬಿರಿಯಾನಿ ತುಂಬಾ ಇಷ್ಟಪಡುತ್ತಾರೆ. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇಷ್ಟವಾಗುವ ಅಡುಗೆಯಲ್ಲಿ ಮೊದಲ ಪ್ರಾಶಸ್ತ್ಯ ಬಿರಿಯಾನಿಗಿದೆ. ಹಲವಾರು ಬಗೆಯ ಬಿರಿಯಾನಿಗಳನ್ನು ನಾವು ತಿಂದಿರುತ್ತೇವೆ ಅದರಲ್ಲಿ ಮುಖ್ಯವಾಗಿ ಚಿಕನ್ ಬಿರಿಯಾನಿ, ಚಿಕನ್ ಧಮ್ ಬಿರಿಯಾನಿ, ದೊನ್ನೆ ಬಿರಿಯಾನಿ, ಮಟನ್ ಬಿರಿಯಾನಿ… ಆದರೆ ನಾವಿವತ್ತು ಮಾಡಲು ಹೊರಟಿರುವುದು “ಹೈದ್ರಾಬಾದಿ ಚಿಕನ್ ಬಿರಿಯಾನಿ”. ಹಾಗಾದರೆ ಇನ್ನೇಕೆ ತಡ ರುಚಿ ರುಚಿಯಾದ ಹೈದರಾಬಾದ್ ಚಿಕನ್ ಬಿರಿಯಾನಿ ಮಾಡುವ ವಿಧಾನವನ್ನು ನೋಡೋಣ ಬನ್ನಿ…

Advertisement

ಬೇಕಾಗುವ ಸಾಮಗ್ರಿಗಳು
ಚಿಕನ್ 1/2 ಕೆಜಿ , ಬಾಸುಮತಿ ಅಕ್ಕಿ 2ಕಪ್ ,ಈರುಳ್ಳಿ 3 ,ಟೊಮೆಟೋ 1, ಪುದೀನಾ 1/2 ಕಟ್ಟು , ಕೊತ್ತಂಬರಿ ಸೊಪ್ಪು 1/2 ಕಟ್ಟು ಹಸಿ ಮೆಣಸು 4 ರಿಂದ 5, ಶುಂಠಿ-ಬೆಳ್ಳುಳ್ಳಿ ಪೇಸ್ಟ್ 3 ಚಮಚ , ಮೊಸರು 1/2 ಕಪ್ , ಚಕ್ಕೆ , ಲವಂಗ , ಪಲಾವ್ ಎಲೆ, ಜೀರಿಗೆ ಸ್ವಲ್ಪ, ಅರಿಶಿನ ಪುಡಿ ಸ್ವಲ್ಪ ಖಾರದ ಪುಡಿ 2 ಚಮಚ ,ಲಿಂಬೆ ರಸ ಹಾಗೂ ಫುಡ್ ಕಲರ್ ಸ್ವಲ್ಪ,ತುಪ್ಪ /ಎಣ್ಣೆ 5 ಚಮಚ ,ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ :

-ಚಿಕನ್ ಅನ್ನು ನೀರಿನಲ್ಲಿ ತೊಳೆದು ನಿಮಗೆ ಬೇಕಾಗುವ ರೀತಿಯಲ್ಲಿ ಕಟ್ ಮಾಡಿ  ಒಂದು ಬೌಲ್ ಗೆ ಹಾಕಿ, ಮೊಸರು ಅರಿಶಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ,ಖಾರದ ಪುಡಿ ಹಾಗೂ ಉಪ್ಪನ್ನು ಸೇರಿಸಿ ಸುಮಾರು 15 ನಿಮಿಷ ಗಳ ಕಾಲ ಹಾಗೇ ಬಿಡಿ.

– ಅಕ್ಕಿಯನ್ನು ತೊಳೆದು ನೀರಿನಲ್ಲಿ 15ನಿಮಿಷಗಳ ಕಾಲ ನೆನೆಸಿರಿ.

Advertisement

– ಪುದೀನಾ, ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸನ್ನು ಮಿಕ್ಸಿಗೆ ಹಾಕಿ ರುಬ್ಬಿಟ್ಟುಕೊಳ್ಳಿ .

– ಒಂದು ಕುಕ್ಕರಿಗೆ ತುಪ್ಪ /ಎಣ್ಣೆ ಯನ್ನು ಹಾಕಿ ಚಕ್ಕೆ ,ಲವಂಗ ,ಪಲಾವ್ ಎಲೆ ,ಏಲಕ್ಕಿ ,ಜೀರಿಗೆ ಹಾಕಿ ಫ್ರೈ ಮಾಡಿಕೊಳ್ಳಿ .

-ತದನಂತರ ಈರುಳ್ಳಿ ,ಟೊಮೆಟೋ ಹಾಕಿ ಸ್ವಲ್ಪ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಫ್ರೈ ಮಾಡಿಕೊಳ್ಳಿ .

-ನಂತರ ಮಿಕ್ಸ್ ಮಾಡಿಕೊಂಡಿದ್ದ ಚಿಕನ್ ಗೆ ಲಿಂಬೆ ರಸ ಹಾಗೂ ಫುಡ್ ಕಲರ್ ಹಾಕಿ ,ಜೊತೆಗೆ ರುಬ್ಬಿಟ್ಟುಕೊಂಡಿದ್ದ ಮಸಾಲವನ್ನು ಹಾಕಿ ಮಿಕ್ಸ್ ಮಾಡಿ ಸುಮಾರು 10 ನಿಮಿಷಗಳ ಕಾಲ ಬೇಯಿಸಿರಿ .

-ನಂತರ ನೆನೆಸಿಟ್ಟ ಅಕ್ಕಿಯನ್ನು ಹಾಕಿ ಅದರ ಜೊತೆಗೆ 3 ಕಪ್ ನೀರನ್ನು ಸೇರಿಸಿ ಒಂದು ಕುದಿ ಬಂದ ನಂತರ ಕುಕ್ಕರಿನ ಮುಚ್ಚಳವನ್ನು ಹಾಕಿ ಎರಡು ವಿಷಲ್ ತೆಗೆಯಿರಿ .

-ಬಿಸಿ-ಬಿಸಿಯಾದ ಹೈದರಾಬಾದ್ ಚಿಕನ್ ಬಿರಿಯಾನಿ ಮೊಸರು ಸಲಾಡ್ ನೊಂದಿಗೆ ಸವಿಯಲು ಸಿದ್ದ.

 

Advertisement

Udayavani is now on Telegram. Click here to join our channel and stay updated with the latest news.

Next