Advertisement

 ಹೈದರಾಬಾದ್‌ ಮೃಗಾಲಯ : 8 ಸಿಂಹಗಳಿಗೆ ಕೋವಿಡ್

11:16 PM May 04, 2021 | Team Udayavani |

ಹೈದರಾಬಾದ್‌: ಇಲ್ಲಿನ ನೆಹರೂ ಮೃಗಾಲಯದಲ್ಲಿರುವ ಎಂಟು ಸಿಂಹಗಳಿಗೆ ಕೋವಿಡ್ ಸೋಂಕು ತಗಲಿದೆ.

Advertisement

ದೇಶದಲ್ಲಿ ಪ್ರಾಣಿಗಳಿಗೆ  ಕೋವಿಡ್ ಸೋಂಕು ಹರಡಿರುವ ಪ್ರಕರಣ ವರದಿಯಾಗಿರುವುದು ಇದೇ ಮೊದಲು. ಎ. 29ರಂದು ಮೃಗಾಲಯದ ಸಿಂಹಗಳಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸಲಾಗಿದ್ದು, ವರದಿ ಪಾಸಿಟಿವ್‌ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮೃಗಾಲಯದ ನಿರ್ದೇಶಕರು ಈ ಸುದ್ದಿಯನ್ನು ಖಚಿತಪಡಿಸಲು ನಿರಾಕರಿಸಿದ್ದಾರೆ.

ಸಿಂಹಗಳಿಗೆ ಕೊರೊನಾದಂಥ ಲಕ್ಷಣಗಳು ಕಂಡು ಬಂದಿತ್ತು. ಹೀಗಾಗಿ ಪರೀಕ್ಷೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ಮಾಡಿಸಿದ್ದೆವು. ನನಗೆ ಇನ್ನೂ ವರದಿ ತಲುಪಿಲ್ಲವಾದ್ದರಿಂದ ಈ ಬಗ್ಗೆ ಖಚಿತವಾಗಿ ಹೇಳಲಾಗದು. ಸಿಂಹಗಳು ಚೇತರಿಸಿಕೊಳ್ಳುತ್ತಿವೆ ಎಂದು ಹೇಳಿದ್ದಾರೆ.

ಈ ಮೃಗಾಲಯದಲ್ಲಿ ಒಟ್ಟು 12 ಸಿಂಹಗಳಿವೆ. ಕೆಲವು ಸಿಂಹಗಳಿಗೆ ಶೀತ, ಕೆಮ್ಮು ರೀತಿಯ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಕೋವಿಡ್‌ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಸಿಂಹಗಳಿಗೆ ಕೊರೊನಾ ದೃಢಪಟ್ಟಿದೆ ಎಂದು ಮೃಗಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹಿಂದೆ ಹಾಂಕಾಂಗ್‌ನಲ್ಲಿ ನಾಯಿ ಮತ್ತು ಬೆಕ್ಕುಗಳಿಗೆ ಕೊರೊನಾ ಹರಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next