Advertisement

ಹೈದರಾಬಾದ್‌ಗೆ 7 ವಿಕೆಟ್‌ ಗೆಲುವು

12:15 PM May 09, 2017 | Team Udayavani |

ಹೈದರಾಬಾದ್‌: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್‌ ಸನ್‌ರೈಸರ್ ಹೈದರಾಬಾದ್‌ ತಂಡವು ಸೋಮವಾರದ ಐಪಿಎಲ್‌ ಪಂದ್ಯದಲ್ಲಿ ಅಂಕಪಟ್ಟಿಯ ಅಗ್ರಸ್ಥಾನಿ ಮುಂಬೈ ಇಂಡಿಯನ್ಸ್‌ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ನಾಲ್ಕನೇ ಸ್ಥಾನವನ್ನು ಭದ್ರಪಡಿಸಿತು.

Advertisement

ನಿಖರ ದಾಳಿಯಿಂದ ಮುಂಬೈ ಮೊತ್ತವನ್ನು 7 ವಿಕೆಟಿಗೆ 138 ರನ್ನಿಗೆ ನಿಯಂತ್ರಿಸಿದ್ದ ಹೈದರಾಬಾದ್‌ ತಂಡವು ಆಬಳಿಕ ಶಿಖರ್‌ ಧವನ್‌ ಅವರ ಅರ್ಧಶತಕದಿಂದಾಗಿ 18.2 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟದಲ್ಲಿ 140 ರನ್‌ ಪೇರಿಸಿ ಗೆಲುವು ದಾಖಲಿಸಿತು.

ಡೇವಿಡ್‌ ವಾರ್ನರ್‌ ಬೇಗನೇ ಔಟಾದ ಬಳಿಕ ಧವನ್‌ ಮತ್ತು ಮೊಸಸ್‌ ಹೆನ್ರಿಕ್ಸ್‌ ಅವರು ದ್ವಿತೀಯ ವಿಕೆಟಿಗೆ 91 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡದ ಗೆಲುವು ಖಚಿತಪಡಿಸಿದರು. ಹೆನ್ರಿಕ್ಸ್‌ 44 ರನ್‌ ಗಳಿಸಿ ಔಟಾಗದರೆ ಧವನ್‌ 62 ರನ್‌ ಗಳಿಸಿ ಅಜೇಯರಾಗಿ ಉಳಿದರು. 46 ಎಸೆತ ಎದುರಿಸಿದ ಅವರು 4 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದರು. ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಈ ಮೊದಲು ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ಮುಂಬೈ ಆರಂಭದಲ್ಲಿಯೇ ಎಡವಿತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮುಂಬೈ ಈಗಾಗಲೇ ಪ್ಲೇ ಆಫ್ಗೆ ತೇರ್ಗಡೆಯಾಗಿದ್ದು ಈ ಪಂದ್ಯದಲ್ಲಿ ನೀರಸವಾಗಿ ಆಡಿತು. ಆದರೆ ರೋಹಿತ್‌ ಶರ್ಮ ಅವರ ತಾಳ್ಮೆಯ ಅರ್ಧಶತಕದಿಂದಾಗಿ ತಂಡ ಸಾಧಾರಣ ಮೊತ್ತ ಪೇರಿಸಿತು. 
ಲೆಂಡ್ಲ್ ಸಿಮನ್ಸ್‌ ಈ ಪಂದ್ಯದಲ್ಲಿ 1 ರನ್‌ ಗಳಿಸಿದರೆ ನಿತೀಶ್‌ ರಾಣ 9 ರನ್ನಿಗೆ ಔಟಾದರು. ಪಾರ್ಥಿವ್‌ ಪಟೇಲ್‌ 17 ಎಸೆತಗಳಿಂದ 23 ರನ್‌ ಹೊಡೆದರು. 
ಹಾರ್ದಿಕ್‌ ಮತ್ತು ರೋಹಿತ್‌ ನಾಲ್ಕನೇ ವಿಕೆಟಿಗೆ 50 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡಿರುವುದು ಈ ಪಂದ್ಯದ ಗರಿಷ್ಠ ಜತೆ ಯಾಟವಾಗಿದೆ. ಹಾರ್ದಿಕ್‌ 24 ಎಸೆತ ಎದುರಿಸಿ 14 ರನ್‌ ಮಾತ್ರ ಹೊಡೆದರು. ತಾಳ್ಮೆಯ ಆಟವಾಡಿದ ರೋಹಿತ್‌ 45 ಎಸೆತ ಎದುರಿಸಿ 67 ರನ್‌ ಹೊಡೆದರು.

ಸ್ಕೋರ್‌ ಪಟ್ಟಿ
ಮುಂಬೈ ಇಂಡಿಯನ್ಸ್‌
ಲೆಂಡ್ಲ್ ಸಿಮನ್ಸ್‌    ಬಿ ಮೊಹಮ್ಮದ್‌ ನಬಿ    1
ಪಾರ್ಥಿವ್‌ ಪಟೇಲ್‌    ಸಿ ವಾರ್ನರ್‌ ಬಿ ಕೌಲ್‌    23
ನಿತೀಶ್‌ ರಾಣ    ಸಿ ಕುಮಾರ್‌ ಬಿ ಕೌಲ್‌    9
ರೋಹಿತ್‌ ಶರ್ಮ    ಬಿ ಕೌಲ್‌    67
ಹಾರ್ದಿಕ್‌ ಪಾಂಡ್ಯ    ಸಿ ಹೆನ್ರಿಕ್ಸ್‌ ಬಿ ರಶೀದ್‌    15
ಕೈರನ್‌ ಪೋಲಾರ್ಡ್‌    ಸಿ ಶಂಕರ್‌ ಬಿ ಕುಮಾರ್‌    5
ಕಣ್‌ì ಶರ್ಮ    ಸಿ ಓಜಾ ಬಿ ಕುಮಾರ್‌    5
ಹರ್ಭಜನ್‌ ಸಿಂಗ್‌    ಔಟಾಗದೆ    1
ಮೆಕ್ಲೆನಗನ್‌    ಔಟಾಗದೆ    2
ಇತರ:        10
ಒಟ್ಟು  (20 ಓವರ್‌ಗಳಲ್ಲಿ 7 ವಿಕೆಟಿಗೆ)    138
ವಿಕೆಟ್‌ ಪತನ: 1-4, 2-22, 3-36, 4-96, 5-126, 6-132, 7-136
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌    4-0-29-2
ಮೊಹಮ್ಮದ್‌ ನಬಿ        4-0-13-1
ಮೊಹಮ್ಮದ್‌ ಸಿರಾಜ್‌        3-0-32-0
ಸಿದಾ§ರ್ಥ್ ಕೌಲ್‌        4-0-24-3
ರಶೀದ್‌ ಖಾನ್‌        4-0-22-1
ಮೊಸಸ್‌ ಹೆನ್ರಿಕ್ಸ್‌        1-0-15-0
ಸನ್‌ರೈಸರ್ ಹೈದರಾಬಾದ್‌ 
ಡೇವಿಡ್‌ ವಾರ್ನರ್‌    ಎಲ್‌ಬಿಡಬ್ಲ್ಯು ಬಿ ಮೆಕ್ಲೆನಗನ್‌    6
ಶಿಖರ್‌ ಧವನ್‌    ಔಟಾಗದೆ    62
ಮೊಸಸ್‌ ಹೆನ್ರಿಕ್ಸ್‌    ಸಿ ರೋಹಿತ್‌ ಬಿ ಬುಮ್ರಾ    44
ಯುವರಾಜ್‌ ಸಿಂಗ್‌    ಸಿ ಪಾಂಡ್ಯ ಬಿ ಮಾಲಿಂಗ    9
ವಿಜಯ್‌ ಶಂಕರ್‌    ಔಟಾಗದೆ    15
ಇತರ:        4
ಒಟ್ಟು (18.2 ಓವರ್‌ಗಳಲ್ಲಿ 3 ವಿಕೆಟಿಗೆ)    140
ವಿಕೆಟ್‌ ಪತನ: 1-7, 2-98, 3-112
ಬೌಲಿಂಗ್‌: ಹರ್ಭಜನ್‌ ಸಿಂಗ್‌      4-0-23-0
ಮಿಚೆಲ್‌ ಮೆಕ್ಲೆನಗನ್‌        4-0-26-1
ಲಸಿತ ಮಾಲಿಂಗ        4-0-33-1
ಜಸ್‌ಪ್ರೀತ್‌ ಬುಮ್ರಾ        3.2-0-24-1
ಕಣ್‌ì ಶರ್ಮ        2-0-19-0
ಹಾರ್ದಿಕ್‌ ಪಾಂಡ್ಯ        1-0-13-0
ಪಂದ್ಯಶ್ರೇಷ್ಠ: ಶಿಖರ್‌ ಧವನ್‌

Advertisement

Udayavani is now on Telegram. Click here to join our channel and stay updated with the latest news.

Next