Advertisement

Hyderabad: ಮಹಿಳೆ ಮೇಲೆ ಕಾರಿನಲ್ಲಿ ರಾತ್ರಿಯಿಡೀ ಅತ್ಯಾಚಾರ

11:49 PM Jul 04, 2024 | Team Udayavani |

ಹೈದರಾಬಾದ್‌: ರಿಯಲ್‌ ಎಸ್ಟೇಟ್‌ನ ಇಬ್ಬರು ಸೇಲ್ಸ್‌ಮೆನ್‌ಮಹಿಳೆಯೊಬ್ಬರ ಮೇಲೆ ಕಾರಿನಲ್ಲಿ ರಾತ್ರಿಯಿಡೀ ಅತ್ಯಾಚಾರ ಮಾಡಿ ದೌರ್ಜನ್ಯವೆಸಗಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಜೂ. 30ರಂದು ಸಂತ್ರಸ್ತೆ ಸೇಲ್ಸ್‌ವುಮೆನ್‌ ಕೆಲಸಕ್ಕಾಗಿ ಅವರ ಬಳಿ ಬಂದಿದ್ದರು. ಇಬ್ಬರೂ ಆರೋಪಿಗಳು ಸಂತ್ರಸ್ತೆ ಯನ್ನು ಅವರ ಹಾಸ್ಟೆಲ್‌ನಿಂದ ಯಾದಗಿರಿಗುಟ್ಟಾಗೆ ಕರೆದೊ ಯ್ದಿದ್ದಾರೆ. ಸಂತ್ರಸ್ತೆಗೆ ತಂಪು ಪಾನೀಯದಲ್ಲಿ ಮತ್ತೇರುವ ಅಂಶ ಸೇರಿಸಿ ಎಚ್ಚರ ತಪ್ಪಿಸಿ ಅತ್ಯಾಚಾರ ಎಸಗಿ, ಹಲ್ಲೆ ನಡೆಸಿದ್ದಾರೆ. ಬಳಿಕ ಆಕೆಯನ್ನು ಹಾಸ್ಟೆಲ್‌ ಬಳಿ ಬಿಟ್ಟು ಪರಾರಿಯಾಗಿದ್ದರು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next