Advertisement

Shivamogga: ಕಾರಿನ ಮೇಲೆ ಮಗುಚಿ ಬಿದ್ದ ಬಸ್… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

03:22 PM Jul 03, 2024 | Team Udayavani |

ಶಿವಮೊಗ್ಗ: ಶಿರಾಳಕೊಪ್ಪದ ದೇವಿಕೊಪ್ಪ ಬಳಿ ಖಾಸಗಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಬಸ್‌ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Advertisement

ಖಾಸಗಿ ಬಸ್ ಆನವಟ್ಟಿಯಿಂದ ಶಿವಮೊಗ್ಗ ಕಡೆ ಬರುತ್ತಿದ್ದು ಕಾರು ಶಿವಮೊಗ್ಗ ಕಡೆಯಿಂದ ಆನವಟ್ಟಿ ಕಡೆಗೆ ಹೊರಟಿತ್ತು. ಅತಿ ವೇಗವಾಗಿ ಬಂದ ಬಸ್ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡಿದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಡಿಕ್ಕಿ ರಭಸಕ್ಕೆ ಕಾರು ಛಿದ್ರವಾಗಿದೆ. ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಲು ಪೊಲೀಸರು ಹರಸಾಹಸಪಟ್ಟರು. ಕಾರು ಚಾಲಕನ ಗುರುತು ಇನ್ನಷ್ಟೆ ತಿಳಿಯಬೇಕಿದೆ.

ಇದನ್ನೂ ಓದಿ: Koo: ದಿನಂಪ್ರತಿ ‘ಕೂ’ ಹೇಳುತ್ತಿದ್ದ ಹಕ್ಕಿ ಮೌನವಾಯಿತು, ಸಾಮಾಜಿಕ ಮಾಧ್ಯಮ ಕೂ ಆ್ಯಪ್ ಸ್ಥಗಿತ

Advertisement

Udayavani is now on Telegram. Click here to join our channel and stay updated with the latest news.

Next