Advertisement

RCB–SRH ಎಲಿಮಿನೇಟರ್ ಪಂದ್ಯ: ಟಾಸ್ ಗೆದ್ದ ವಾರ್ನರ್ ಪಡೆ ಬೌಲಿಂಗ್ ಆಯ್ಕೆ: ತಂಡ ಇಂತಿದೆ !

07:09 PM Nov 06, 2020 | Mithun PG |

ಅಬುಧಾಬಿ: ಐಪಿಎಲ್ 13ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ವಾರ್ನರ್ ಪಡೆ ಬೌಲಿಂಗ್ ಆಯ್ದುಕೊಂಡಿದೆ.

Advertisement

ಇಂದು ನಡೆಯುವ ಪಂದ್ಯ ಎರಡೂ ತಂಡಗಳಿಗೂ ನಿರ್ಣಾಯಕವಾಗಿರಲಿದ್ದು, ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ. ಗೆದ್ದ ತಂಡ 2ನೇ ಕ್ವಾಲಿಫೈಯರ್ ಗೆ ಅರ್ಹತೆ ಪಡೆಯಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಫೈನಲ್ಗೇರಲು ಸೆಣಸಾಡಲಿದೆ.

ಈಗಾಗಲೇ ಸತತ ನಾಲ್ಕು ಸೋಲು ಕಂಡರೂ ಫ್ಲೇ ಆಫ್ ಗೆ ನುಸುಳುವಲ್ಲಿ ಕೊಹ್ಲಿ ನೇತೃತ್ವದ ಬೆಂಗಳೂರು ತಂಡ ಯಶಸ್ವಿಯಾಗಿದ್ದು, ಫೈನಲ್ಗೇರಬೇಕಾದರೇ ಇಂದಿನ ಪಂದ್ಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಬೆಂಗಳೂರು ತಂಡ ಕೊಹ್ಲಿ, ಪಡಿಕ್ಕಲ್  ಹಾಗೂ ಎಬಿಡಿ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ.  ಸ್ಪಿನ್ನರ್ ಚಹಲ್  ಕೂಡ ಪಂದ್ಯವನ್ನೂ ಯಾವ ಸಮಯದಲ್ಲಾದರೂ,  ಗೆಲುವಿನತ್ತ ತಿರುಗಿಸುವ ಸಾಮರ್ಥ್ಯ ಹೊಂದಿದ್ದಾರೆ.

ಮತ್ತೊಂದೆಡೆ ಲೀಗ್ ಹಂತದ ಅಂತಿಮ ಘಟ್ಟದಲ್ಲಿ ಸನ್ ರೈಸರ್ಸ್ ಗೆಲುವಿನ ನಗೆ ಬೀರಿದ್ದು ಅತ್ಮವಿಶ್ವಾಸದ ಅಲೆಯಲ್ಲಿ  ತೇಲಾಡುತ್ತಿದೆ.  ನಾಯಕ ವಾರ್ನರ್ ತಂಡಕ್ಕೆ ಆಧಾರವಾಗಿದ್ದು,  ಬೌಲಿಂಗ್ ಪಡೆಯೂ  ಬಲಿಷ್ಠವಾಗಿದೆ.

ಆಡುವ ಹನ್ನೊಂದರ ಬಳಗ

Advertisement

ಸನ್‌ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಶ್ರೀವತ್ಸ್ ಗೋಸ್ವಾಮಿ, ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಪ್ರಿಯಮ್ ಗರ್ಗ್, ಜೇಸನ್ ಹೋಲ್ಡರ್, ಅಬ್ದುಲ್ ಸಮದ್, ರಶೀದ್ ಖಾನ್, ಶಹಬಾಜ್ ನದೀಮ್, ಸಂದೀಪ್ ಶರ್ಮಾ, ಟಿ ನಟರಾಜನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆ್ಯರನ್ ಫಿಂಚ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಮೊಯೀನ್ ಅಲಿ, ವಾಷಿಂಗ್ಟನ್ ಸುಂದರ್, ಶಿವಂ ದುಬೆ, ನವದೀಪ್ ಸೈನಿ, ಆಡಮ್ ಜಂಪಾ, ಮೊಹಮ್ಮದ್ ಸಿರಾಜ್, ಯುಜುವೇಂದ್ರ ಚಹಲ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next