Advertisement

ಕೋವಿಡ್: ವೀಸಾ ನಿಯಮ ಉಲ್ಲಂಘನೆ-ತಬ್ಲಿಘಿ ಜಮಾತ್ ಸಭೆಗೆ ಹಾಜರಾದ 46 ವಿದೇಶಿಯರು ಜೈಲಿಗೆ

09:12 AM Apr 16, 2020 | Nagendra Trasi |

ಪಾಟ್ನ: ಕಳೆದ 15 ದಿನಗಳಿಂದ ಶೋಧ ಕಾರ್ಯ ನಡೆಸಿದ ನಂತರ ದೆಹಲಿಯ ತಬ್ಲಿಘಿ ಜಮಾತ್ ನಲ್ಲಿ ಪಾಲ್ಗೊಂಡಿದ್ದ ಕಿರ್ಗಿಸ್ತಾನ, ಮಲೇಶಿಯಾ ಮತ್ತು ಬಾಂಗ್ಲಾದೇಶದ 46 ಮಂದಿಯನ್ನು ಪತ್ತೆ ಹಚ್ಚಿ ಅವರನ್ನು ವೀಸಾ ಉಲ್ಲಂಘನೆ ಆರೋಪದ ಮೇಲೆ ಜೈಲಿಗೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಬಿಹಾರದ ಅರಾರಿಯಾ ಪ್ರದೇಶದಲ್ಲಿ 18 ಮಂದಿ ವಿದೇಶಿಯರನ್ನು ಹಾಗೂ ಬಕ್ಸರ್ ಜಿಲ್ಲೆಯಲ್ಲಿ 10 ಹಾಗೂ ಉಳಿದವರನ್ನು ಇತರೆಡೆ ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದರು.

ಪ್ರವಾಸಿ ವೀಸಾ ಪಡೆದು ದಿಲ್ಲಿಯ ತಬ್ಲಿಘಿ ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಬಿಹಾರ್ ಗೆ ಆಗಮಿಸಿದ್ದು, ಇವರ ವಿರುದ್ಧ ವಿದೇಶಿ ಕಾಯ್ದೆ 1946ರ ಸೆಕ್ಷನ್ 14ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಅವರನ್ನೆಲ್ಲಾ ಜೈಲಿಗೆ ಕಳುಹಿಸಲಾಗಿದೆ.

ಆರೋಪಿಗಳನ್ನು ಬಕ್ಸರ್, ಪಾಟ್ನ ಮತ್ತು ಅರಾರಿಯಾ ಜೈಲಿಗೆ ಕಳುಹಿಸುವ ಮುನ್ನ ಎಲ್ಲಾ 46 ಮಂದಿ ವಿದೇಶಿ ಪ್ರಜೆಗಳ ಪಾಸ್ ಪೋರ್ಟ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next