Advertisement

ಹೈದರಾಬಾದ್‌ ಟೆಸ್ಟ್‌: ಗೆಲುವಿನ ಕ್ಷಣಗಣನೆಯಲ್ಲಿ ಭಾರತ

03:45 AM Feb 13, 2017 | Team Udayavani |

ಹೈದರಾಬಾದ್‌: ಭಾರತದಲ್ಲಿ ಮೊದಲ ಟೆಸ್ಟ್‌ ಆಡುತ್ತಿರುವ ಬಾಂಗ್ಲಾದೇಶ ಸೋಲು ಹೊತ್ತು ನಡೆಯುವ ಸೂಚನೆ ನೀಡಿದೆ. ಗೆಲುವಿಗೆ 459 ರನ್ನುಗಳ ಅಸಾಧ್ಯ ಗುರಿ ಪಡೆದಿರುವ ರಹೀಂ ಪಡೆ 4ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 103 ರನ್‌ ಗಳಿಸಿದೆ.

Advertisement

ಅಂತಿಮ ದಿನವಾದ ಸೋಮವಾರದ ಆಟದಲ್ಲಿ ಉಳಿದ 7 ವಿಕೆಟ್‌ಗಳ ನೆರವಿನಿಂದ 356 ರನ್‌ ತೆಗೆಯುವುದು ಬಾಂಗ್ಲಾಕ್ಕೆ ಅಸಾಧ್ಯ. ಆದರೆ ಏಳರಲ್ಲಿ ಕೆಲವಾದರೂ ವಿಕೆಟ್‌ಗಳನ್ನು ಉಳಿಸಿಕೊಂಡು ಪಂದ್ಯವನ್ನು ಡ್ರಾ ಮಾಡಿಕೊಂಡೀತೇ ಎಂಬುದೊಂದು ದೂರದ ನಿರೀಕ್ಷೆ. ಕ್ರೀಸಿನಲ್ಲಿರುವ ಮಹಮದುಲ್ಲ, ಶಕಿಬ್‌ ಅಲ್‌ ಹಸನ್‌, ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿ ಕಪ್ತಾನನ ಆಟವಾಡಿದ ಮುಶ್ಫಿಕರ್‌ ರಹೀಂ, ಶಬ್ಬೀರ್‌ ರೆಹಮಾನ್‌, ಮೆಹೆದಿ ಹಸನ್‌ ಮಿರಾಜ್‌ ಅವರ ಬ್ಯಾಟಿಂಗನ್ನು ಬಾಂಗ್ಲಾ ಅವಲಂಬಿಸಿದೆ.

ಹೈದರಾಬಾದ್‌ ಟ್ರ್ಯಾಕ್‌ ಸಾಧಾರಣ ಮಟ್ಟದ ತಿರುವು ಪಡೆಯಲಾರಂಭಿಸಿದ್ದು, ಅಶ್ವಿ‌ನ್‌-ಜಡೇಜ ಜೋಡಿಯ ದಾಳಿಯನ್ನು ಎದುರಿಸಿ ನಿಲ್ಲುವುದು ಬಾಂಗ್ಲಾಕ್ಕೆ ಸುಲಭ ಸವಾಲೇನಲ್ಲ. ಹೀಗಾಗಿ ಭಾರತ ದೊಡ್ಡ ಅಂತರದಿಂದಲೇ ಗೆಲ್ಲುವುದು ಬಹುತೇಖ ಖಚಿತ ಎನ್ನಲಡ್ಡಿಯಿಲ್ಲ.

ಕ್ಷಿಪ್ರ ಗತಿಯ ಬೆಳವಣಿಗೆ
ಪಂದ್ಯದ 4ನೇ ದಿನವಾದ ರವಿವಾರ ಕ್ಷಿಪ್ರ ಗತಿಯ ಆಟದಿಂದ ಗಮನ ಸೆಳೆಯಿತು. 6ಕ್ಕೆ 322 ರನ್ನಿನಿಂದ ಬ್ಯಾಟಿಂಗ್‌ ಮುಂದುವರಿಸಿದ ಬಾಂಗ್ಲಾದೇಶ 388ಕ್ಕೆ ಮೊದಲ ಇನ್ನಿಂಗ್ಸ್‌ ಮುಗಿಸಿತು. ಭಾರತ 299 ರನ್ನುಗಳ ಬೃಹತ್‌ ಮುನ್ನಡೆ ಗಳಿಸಿತಾದರೂ ಫಾಲೋಆನ್‌ ಹೇರಲಿಲ್ಲ. ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿ ಬಿರುಸಿನ ಆಟಕ್ಕೆ ಮುಂದಾಯಿತು. 29 ಓವರ್‌ಗಳಲ್ಲಿ 4 ವಿಕೆಟಿಗೆ 159 ರನ್‌ ಗಳಿಸಿ ಡಿಕ್ಲೇರ್‌ ಮಾಡಿತು. ಬಳಿಕ 75 ರನ್‌ ಆಗುವಷ್ಟರಲ್ಲಿ ಬಾಂಗ್ಲಾದ 3 ವಿಕೆಟ್‌ ಉರುಳಿಸಿ ನಿಶ್ಚಿತ ಗುರಿಯತ್ತ ಮುನ್ನುಗ್ಗತೊಡಗಿತು. ಈ ಮೂರೂ ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾಗಿವೆ. ಅಶ್ವಿ‌ನ್‌ 2, ಜಡೇಜ ಒಂದು ವಿಕೆಟ್‌ ಉರುಳಿಸಿದ್ದಾರೆ.

ಆಟ ಮುಗಿಸಿದವರೆಂದರೆ ತಮಿಮ್‌ ಇಕ್ಬಾಲ್‌ (3), ಸೌಮ್ಯ ಸರ್ಕಾರ್‌ (42) ಮತ್ತು ಮೊಮಿನುಲ್‌ ಹಕ್‌ (27). ಕ್ರೀಸಿನಲ್ಲಿ ಉಳಿದವರು ಮಹಮದುಲ್ಲ (9) ಮತ್ತು ಶಕಿಬ್‌ (21). ಮೊದಲ 3 ದಿನ ಕೇವಲ 12 ವಿಕೆಟ್‌ ಉರುಳಿದರೆ (3, 4 ಹಾಗೂ 5), 4ನೇ ದಿನವೊಂದರಲ್ಲೇ 11 ವಿಕೆಟ್‌ ಬಿದ್ದಿದೆ.

Advertisement

ರಹೀಂ ಶತಕ ಸಂಭ್ರಮ
ನಾಯಕ, ಕೀಪರ್‌ ಮುಶ್ಫಿಕರ್‌ ರಹೀಂ ಅವರ ಶತಕ ಎನ್ನುವುದು ಬಾಂಗ್ಲಾಕ್ಕೆ ಸಂಕಟದಲ್ಲೂ ಸಮಾಧಾನ ಮೂಡಿಸಿತು. 81 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ರಹೀಂ 127 ರನ್‌ ಮಾಡಿ ಕೊನೆಯವರಾಗಿ ಔಟಾದರು. 262 ಎಸೆತಗಳನ್ನು ಎದುರಿಸಿದ ಬಾಂಗ್ಲಾ ಕಪ್ತಾನ 16 ಬೌಂಡರಿ, 2 ಸಿಕ್ಸರ್‌ ಸಿಡಿಸಿ ಭಾರತದ ಬೌಲರ್‌ಗಳನ್ನು ದಂಡಿಸಿದರು.

ಇದು 52ನೇ ಟೆಸ್ಟ್‌ನಲ್ಲಿ ರಹೀಂ ಹೊಡೆದ 5ನೇ ಶತಕ, ಭಾರತದ ವಿರುದ್ಧ ಎರಡನೆಯದು. ಇದಕ್ಕೂ ಮುನ್ನ 2010ರ ಚಿತ್ತಗಾಂಗ್‌ ಟೆಸ್ಟ್‌ನಲ್ಲಿ 101 ರನ್‌ ಮಾಡಿದ್ದರು. ಅವರೀಗ ಭಾರತದೆದುರು 2 ಸೆಂಚುರಿ ಹೊಡೆದ ಬಾಂಗ್ಲಾದ ಮೊದಲ ಕ್ರಿಕೆಟಿಗನಾಗಿದ್ದಾರೆ.

ಮತ್ತೂಬ್ಬ ನಾಟೌಟ್‌ ಬ್ಯಾಟ್ಸ್‌ಮನ್‌ ಮಿರಾಜ್‌ ಅವರನ್ನು ಭುವನೇಶ್ವರ್‌ ಕುಮಾರ್‌ ದಿನದ 4ನೇ ಎಸೆತದಲ್ಲೇ ಉರುಳಿಸಿದರು. ಆಗ ಬಾಂಗ್ಲಾ ಹಿಂದಿನ ದಿನದ ಮೊತ್ತದಲ್ಲೇ ಇತ್ತು. ಆದರೆ ಉಳಿದವರ ನೆರವಿನಿಂದ ರಹೀಂ ಹೋರಾಟ ಜಾರಿಯಲ್ಲಿರಿಸಿದರು. ಕೊನೆಯ 3 ವಿಕೆಟ್‌ಗಳಿಂದ 66 ರನ್‌ ಒಟ್ಟುಗೂಡಿಸಿದರು.

ಭಾರತದ ಎಲ್ಲ 5 ಮಂದಿ ಬೌಲರ್‌ಗಳು ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾದರು. 84ಕ್ಕೆ 3 ವಿಕೆಟ್‌ ಕಿತ್ತ ಉಮೇಶ್‌ ಯಾದವ್‌ ಹೆಚ್ಚಿನ ಯಶಸ್ಸು ಸಾಧಿಸಿದರು. ಲಂಚ್‌ ವೇಳೆಗೆ ಸರಿಯಾಗಿ ಬಾಂಗ್ಲಾ ಆಲೌಟ್‌ ಆಯಿತು.

ಭಾರತ ಬಿರುಸಿನ ಆಟ
ದ್ವಿತೀಯ ಇನ್ನಿಂಗ್ಸಿನಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸುವುದು ಭಾರತದ ಇರಾದೆಯಾಗಿತ್ತು. ಇದರಲ್ಲಿ ಯಶಸ್ವಿಯಾಯಿತಾದರೂ ಆರಂಭಕಾರ ರಾಹುಲ್‌ (10) ಮತ್ತೆ ವಿಫ‌ಲರಾದರು. ಮೊದಲ ಸರದಿಯಲ್ಲಿ 108 ರನ್‌ ಮಾಡಿದ್ದ ಮುರಳಿ ವಿಜಯ್‌ ಏಳೇ ರನ್ನಿಗೆ ನಿರ್ಗಮಿಸಿದರು.

3ನೇ ವಿಕೆಟಿಗೆ ಜತೆಗೂಡಿದ ಪೂಜಾರ-ಕೊಹ್ಲಿ ಸಿಡಿದು ನಿಂತರು. 11.1 ಓವರ್‌ಗಳಿಂದ 67 ರನ್‌ ಬಂತು. ಬಾಂಗ್ಲಾ ಬೌಲರ್‌ಗಳನ್ನು ಪುಡಿಗುಟ್ಟಿದ ಪೂಜಾರ 58 ಎಸೆತಗಳಿಂದ 54 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಸಿಡಿಸಿದ್ದು 6 ಬೌಂಡರಿ, ಒಂದು ಸಿಕ್ಸರ್‌. ಕೊಹ್ಲಿ 40 ಎಸೆತಗಳಿಂದ 38 ರನ್‌, ರಹಾನೆ 35 ಎಸೆತಗಳಿಂದ 28 ರನ್‌ ಹೊಡೆದರು. ಇಬ್ಬರಿಂದಲೂ ತಲಾ 2 ಬೌಂಡರಿ, ಒಂದು ಸಿಕ್ಸರ್‌ ಸಿಡಿಯಲ್ಪಟ್ಟಿತು. ಜಡೇಜ ಗಳಿಕೆ ಅಜೇಯ 16 ರನ್‌. ಟೀ ವಿರಾಮದ ತನಕ ಬ್ಯಾಟಿಂಗ್‌ ನಡೆಸಿದ ಭಾರತ ಬಳಿಕ ಡಿಕ್ಲೇರ್‌ ಮಾಡಿತು.

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌
6 ವಿಕೆಟಿಗೆ ಡಿಕ್ಲೇರ್‌        687
ಬಾಂಗ್ಲಾದೇಶ ಪ್ರಥಮ ಇನ್ನಿಂಗ್ಸ್‌
(ನಿನ್ನೆ 6 ವಿಕೆಟಿಗೆ 322)
ಮುಶ್ಫಿಕರ್‌ ರಹೀಂ    ಸಿ ಸಾಹಾ ಬಿ ಅಶ್ವಿ‌ನ್‌    127
ಮೆಹೆದಿ ಹಸನ್‌ ಮಿರಾಜ್‌    ಬಿ ಭುವನೇಶ್ವರ್‌    51
ತೈಜುಲ್‌ ಇಸ್ಲಾಮ್‌    ಸಿ ಸಾಹಾ ಬಿ ಯಾದವ್‌    10
ತಸ್ಕಿನ್‌ ಅಹ್ಮದ್‌    ಸಿ ರಹಾನೆ ಬಿ ಜಡೇಜ    8
ಕಮ್ರುಲ್‌ ಇಸ್ಲಾಂ ರಬ್ಬಿ    ಔಟಾಗದೆ    0
ಇತರ        15
ಒಟ್ಟು  (ಆಲೌಟ್‌)        388
ವಿಕೆಟ್‌ ಪತನ: 7-322, 8-339, 9-378.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        21-7-52-1
ಇಶಾಂತ್‌ ಶರ್ಮ        20-5-69-1
ಆರ್‌. ಅಶ್ವಿ‌ನ್‌        28.5-7-98-2
ಉಮೇಶ್‌ ಯಾದವ್‌        25-6-84-3
ರವೀಂದ್ರ ಜಡೇಜ        33-8-70-2

ಭಾರತ ದ್ವಿತೀಯ ಇನ್ನಿಂಗ್ಸ್‌
ಮುರಳಿ ವಿಜಯ್‌    ಸಿ ರಹೀಂ ಬಿ ತಸ್ಕಿನ್‌    7
ಕೆ.ಎಲ್‌. ರಾಹುಲ್‌    ಸಿ ರಹೀಂ ಬಿ ತಸ್ಕಿನ್‌    10
ಚೇತೇಶ್ವರ್‌ ಪೂಜಾರ    ಔಟಾಗದೆ    54
ವಿರಾಟ್‌ ಕೊಹ್ಲಿ    ಸಿ ಮಹಮದುಲ್ಲ ಬಿ ಶಕೀಬ್‌    38
ಅಜಿಂಕ್ಯ ರಹಾನೆ    ಬಿ ಶಕಿಬ್‌    28
ರವೀಂದ್ರ ಜಡೇಜ    ಔಟಾಗದೆ    16
ಇತರ        6
ಒಟ್ಟು  (4 ವಿಕೆಟಿಗೆ ಡಿಕ್ಲೇರ್‌)        159
ವಿಕೆಟ್‌ ಪತನ: 1-12, 2-23, 3-90, 4-128.
ಬೌಲಿಂಗ್‌:
ತೈಜುಲ್‌ ಇಸ್ಲಾಂ        6-1-29-0
ತಸ್ಕಿನ್‌ ಅಹ್ಮದ್‌        7-0-43-2
ಶಕಿಬ್‌ ಅಲ್‌ ಹಸನ್‌        9-0-50-2
ಮೆಹೆದಿ ಹಸನ್‌ ಮಿರಾಜ್‌        7-0-32-0

ಬಾಂಗ್ಲಾದೇಶ ದ್ವಿತೀಯ ಇನ್ನಿಂಗ್ಸ್‌
(ಗೆಲುವಿನ ಗುರಿ 459 ರನ್‌)
ತಮಿಮ್‌ ಇಕ್ಬಾಲ್‌    ಸಿ ಕೊಹ್ಲಿ ಬಿ ಅಶ್ವಿ‌ನ್‌    3
ಸೌಮ್ಯ ಸರ್ಕಾರ್‌    ಸಿ ರಹಾನೆ ಬಿ ಜಡೇಜ    42
ಮೊಮಿನುಲ್‌ ಹಕ್‌    ಸಿ ರಹಾನೆ ಬಿ ಅಶ್ವಿ‌ನ್‌    27
ಮಹಮದುಲ್ಲ    ಬ್ಯಾಟಿಂಗ್‌    9
ಶಕಿಬ್‌ ಅಲ್‌ ಹಸನ್‌    ಬ್ಯಾಟಿಂಗ್‌    21
ಇತರ        1
ಒಟ್ಟು  (3 ವಿಕೆಟಿಗೆ)        103
ವಿಕೆಟ್‌ ಪತನ: 1-11, 2-71, 3-75.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        5-2-14-0
ಆರ್‌. ಅಶ್ವಿ‌ನ್‌        16-6-34-2
ಇಶಾಂತ್‌ ಶರ್ಮ        3-0-19-0
ಉಮೇಶ್‌ ಯಾದವ್‌        3-0-9-0
ರವೀಂದ್ರ ಜಡೇಜ        8-2-27-1

Advertisement

Udayavani is now on Telegram. Click here to join our channel and stay updated with the latest news.

Next