Advertisement
ಹೈದರಾಬಾದ್‌ನ ಲಂಗರ್ ಹೌಜ್ ಮೂಲದ ಸೈಯದ್ ಮಜಾಹಿರ್ ಅಲಿ ಅವರು ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಲು ಯುನೈಟೆಡ್ ಸ್ಟೇಟ್ಸ್‌ನ ಇಂಡಿಯಾನಾ ವೆಸ್ಲಿಯನ್ ವಿಶ್ವವಿದ್ಯಾಲಯಕ್ಕೆ ದಾಖಲಾಗಿದ್ದರು ಈ ವೇಳೆ ತನ್ನ ಮನೆಗೆ ತೆರಳುವ ಸಂದರ್ಭ ಶಸ್ತ್ರಸಜ್ಜಿತ ನಾಲ್ವರು ದರೋಡೆಕೋರರು ವಿದ್ಯಾರ್ಥಿಯನ್ನು ಅಟ್ಟಾಡಿಸಿಕೊಂಡು ಬಂದು ಹಲ್ಲೆ ನಡೆಸಿ ಆತನ ಬಳಿಯಿದ್ದ ಮೊಬೈಲ್ ಫೋನ್ ಕಸಿದು ಪರಾರಿಯಾಗಿದ್ದಾರೆ.
ಇತ್ತ ತನ್ನ ಪತಿಯಾ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ವಿಚಾರ ಗೊತ್ತಾಗುತ್ತಿದ್ದಂತೆ ಕಳವಳ ವ್ಯಕ್ತಪಡಿಸಿದ ಸೈಯದ್ ಮಜಾಹಿರ್ ಅಲಿ ಪತ್ನಿ ಭಾರತದ ವಿದೇಶಾಂಗ ಸಚಿವರಿಗೆ ಪತ್ರ ಬರೆದು ತನ್ನ ಪತಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ ಅಲ್ಲದೆ ಅವರ ಪತ್ನಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಸಂಪರ್ಕಿಸಿ, ಅಮೆರಿಕಕ್ಕೆ ಪ್ರಯಾಣಿಸಲು ನೆರವು ಕೋರಿದ್ದಾರೆ.
Related Articles
Advertisement
ತಿಂಗಳ ಅಂತರದಲ್ಲಿ ನಾಲ್ವರು ಭಾರತೀಯರ ಹತ್ಯೆ ಕಳೆದ ಒಂದು ತಿಂಗಳ ಅಂತರದಲ್ಲಿ ನಾಲ್ವರು ಭಾರತೀಯ ವಿದ್ಯಾರ್ಥಿಗಳನ್ನು ಹತ್ಯೆ ಮಾಡಲಾಗಿದೆ ಅಲ್ಲದೆ ಓರ್ವ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಲಾಗಿದ್ದು ಇದರಿಂದ ಭಾರತೀಯ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಅಮರಿಕಾಕ್ಕೆ ಹೋಗಲು ಹಿಂದೆಮುಂದೆ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: MP: ಪಟಾಕಿ ಕಾರ್ಖಾನೆ ದುರಂತ: ಮಿತಿಗಿಂತ ಹೆಚ್ಚಿನ ಸ್ಪೋಟಕ ಸಂಗ್ರಹಿಸಲಾಗಿತ್ತು, ಮಾಲೀಕರ ಬಂಧನ