ಹೈದರಾಬಾದ್: ಅನೈತಿಕ ಸಂಬಂಧ ಹೊಂದಿದಕ್ಕಾಗಿ, ವ್ಯಕ್ತಿಯೊಬ್ಬ ತನ್ನ ಪತ್ನಿಯ ತಲೆಯನ್ನೇ ಕಡಿದು, ಆಕೆಯ ಪ್ರಿಯತಮನ ಮನೆಯ ಬಾಗಿಲಿನಲ್ಲಿ ರುಂಡವನ್ನಿರಿಸಿದ ಬೆಚ್ಚಿಬೀಳುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ಅನಂತಸಾಗರ್ ಗ್ರಾಮದಲ್ಲಿ ವಾಸವಿದ್ದ ಜುರ್ರು ಸಾಹಿಲು ಎಂಬ ವ್ಯಕ್ತಿ, ತನ್ನ ಪತ್ನಿಯಾದ ಅಂಶಮ್ಮ(35) ಎಂಬಾಕೆಯ ಶಿರಚ್ಛೇಧ ಮಾಡಿದ್ದಾನೆ. ಮಾತ್ರವಲ್ಲದೆ ಆ ಗ್ರಾಮದಿಂದ 5 ಕಿ.ಮೀ ದೂರದಲ್ಲಿರುವ ನಾರಾಯಣ್ ಖೇಡ್ ಗ್ರಾಮಕ್ಕೆ ದ್ವಿಚಕ್ರ ವಾಹನದ ಮೂಲಕ ಶಿರವನ್ನು ಕೊಂಡೊಯ್ದಿದ್ದಾನೆ. ಬಳಿಕ ರುಂಡವನ್ನು ಅಂಶಮ್ಮ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯ ಮನೆಯ ಬಾಗಿಲಲ್ಲಿ ಇರಿಸಿದ್ದಾನೆ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ನಾರಾಯಣ್ ಖೇಡ್ ಪೊಲೀಸ್ ಇನ್ಸ್ ಪೆಕ್ಟರ್ ರವೀಂದ್ರ ರೆಡ್ಡಿ, ಜರ್ರು ಸಾಹಿಲುವಿಗೆ ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಅನುಮಾನವಿತ್ತು. ಇದಕ್ಕಾಗಿ ಪ್ರತಿನಿತ್ಯ ಅವರ ನಡುವೆ ಜಗಳವಾಗುತ್ತಿತ್ತು. ಆದರೇ ಕಳೆದ ಬುಧವಾರ (ಅ. 15) ರಾತ್ರಿ ಮಾತಿನ ಚಕಮಕಿ ನಡೆದು, ಸಾಹಿಲು ಹರಿತವಾದ ಕೊಡಲಿಯನ್ನು ಬಳಸಿ ಪತ್ನಿಯ ಕತ್ತನ್ನು ಕತ್ತರಿಸಿದ್ದಾನೆ.
ಇದನ್ನೂ ಓದಿ: ಭಾರತಕ್ಕಿಂತ ಪಾಕಿಸ್ಥಾನವೇ ಉತ್ತಮವಾಗಿ ಕೋವಿಡ್ ನಿಯಂತ್ರಣ ಮಾಡಿದೆ: ಶಶಿ ತರೂರ್
ಬಳಿಕ ಮುಂಡವನ್ನು ಮನೆಯ ಸಮೀಪವಿರುವ ಪೊದೆಯೊಂದರಲ್ಲಿ ಎಸೆದು, ರುಂಡವನ್ನು ನಾರಾಯಣ್ ಖೇಡ್ ಗ್ರಾಮಕ್ಕೆ ಕೊಂಡೊಯ್ದು ಪತ್ನಿಯ ಪ್ರಿಯಕರನ ಮನೆಯ ಬಾಗಿಲಿನಲ್ಲಿರಿಸಿದ್ದಾನೆ. ಕೊನೆಯಲ್ಲಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪೊಲೀಸ್,ಅಧಿಕಾರಿಗಳ ಸಮ್ಮುಖದಲ್ಲೇ ವ್ಯಕ್ತಿಯ ಗುಂಡಿಟ್ಟು ಹತ್ಯೆ ಪ್ರಕರಣ: ಮುಖ್ಯ ಆರೋಪಿ ಬಂಧನ