Advertisement
ಹೌದು ಹೈದರಾಬಾದ್ ನ ಅಂಬರ್‌ಪೇಟೆಯ ಡಿಡಿ ಕಾಲೋನಿಯ ಕುಟುಂಬವೊಂದು ಭಾನುವಾರ ಎಲ್ಲರೂ ಜೊತೆಯಾಗಿದ್ದಾರೆ ಎಂದುಕೊಂಡು ಬಿರಿಯಾನಿ ತಿನ್ನುವ ತವಕದಲ್ಲಿದ್ದರು ಅದರಂತೆ ಆನ್ ಲೈನ್ ಮೂಲಕ ಅಲ್ಲಿನ ಸ್ಥಳೀಯ ಹೋಟೆಲ್ ಒಂದರಲ್ಲಿ ಬಿರಿಯಾನಿ ಹಾಗೂ ಇತರ ಆಹಾರವನ್ನು ಆರ್ಡರ್ ಮಾಡಿದ್ದಾರೆ. ಆರ್ಡರ್ ಮಾಡಿದ ಕೆಲವೇ ಹೊತ್ತಿನಲ್ಲಿ ಮನೆಗೆ ಫುಡ್ ಪಾರ್ಸೆಲ್ ಬಂದಿದೆ. ಇನ್ನೇಕೆ ತಡ ಊಟ ಮಾಡುವ ಎಂದು ಬಿರಿಯಾನಿ ಬಾಕ್ಸ್ ಓಪನ್ ಮಾಡಿ ಪ್ಲೇಟಿಗೆ ಹಾಕಿದರೆ ಬಿರಿಯಾನಿ ಜೊತೆ ಒಂದು ಸತ್ತ ಹಲ್ಲಿ ಕೂಡ ಪತ್ತೆಯಾಗಿದೆ ಇದನ್ನು ಕಂಡ ಮನೆ ಮಂದಿ ಗಾಬರಿಗೊಂಡಿದ್ದಾರೆ.
ಹೋಟೆಲ್ ಸಿಬ್ಬಂದಿಗಳ ಅಜಾಗರೂಕತೆಯ ಪರಿಣಾಮ ಬಿರಿಯಾನಿಯಲ್ಲಿ ಹಲ್ಲಿ ಬಿದ್ದಿದೆ ಆದರೆ ಮನೆಮಂದಿಯ ಆಯುಷ್ಯ ಗಟ್ಟಿ ಇತ್ತು ಹಾಗಾಗಿ ತಿನ್ನುವ ಮೊದಲು ಕಣ್ಣಿಗೆ ಬಿತ್ತು ಇಲ್ಲದಿದ್ದರೆ ಬಿರಿಯಾನಿ ತಿಂದು ಮನೆಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗುವ ಸಂಭವ ಇತ್ತು. ಹಾಗಾಗಿ ಯಾವುದಕ್ಕೂ ಆಹಾರವನ್ನು ಸರಿಯಾಗಿ ಪರಿಶೀಲಿಸಿ ತಿನ್ನುವುದು ಎಲ್ಲರಿಗೂ ಒಳಿತು.
Related Articles
Advertisement