ಹೈದರಾಬಾದ್: ದುಬೈನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ತನ್ನ ಮಗ ಅಜ್ಮತುಲ್ಲಾ ಶರೀಫ್ನನ್ನು ಹುಡುಕಲು ಹೈದರಾಬಾದ್ ನಿವಾಸಿಯೊಬ್ಬರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಮನವಿ ಮಾಡಿದ್ದಾರೆ.
ದುಬೈನಲ್ಲಿ ಉದ್ಯೋಗ ನಿಮಿತ್ತ ತೆರಳಿದ್ದ, ಅಜ್ಮತುಲ್ಲಾ ಎಂಬವರು 2019ರ ಫೆಬ್ರವರಿಯಲ್ಲಿ ನಾಪತ್ತೆಯಾಗಿದ್ದಾನೆ. ಆದರೆ ಒಂದು ವರ್ಷ ಕಳೆದರೂ ಮಗ ಇಂದು ಬರುತ್ತಾನೆ, ನಾಳೆ ಬರುತ್ತಾನೆ ಎಂಬ ನಂಬಿಕೆಯಿಂದ ದಿನ ದೂಡಿದ್ದಾರೆ. ಇದೀಗ ಕಾಣೆಯಾಗಿ ವರ್ಷವಾದರೂ ಬಾರದೇ ಇರುವುದನ್ನು ಕಂಡು ಹೆತ್ತವರು ಕಡೆಯ ಪ್ರಯತ್ನವಾಗಿ ಸರಕಾರದ ಮೊರೆ ಹೋಗಿದ್ದಾರೆ.
ನನ್ನ ಮಗ ಅಜ್ಮತುಲ್ಲಾ 2009ರಲ್ಲಿ ಕೆಲಸಕ್ಕಾಗಿ ದುಬೈಗೆ ಹೋದನು ಮತ್ತು ಅಂದಿನಿಂದ ಅಲ್ಲಿಯೇ ಇದ್ದನು. ನಾವು ವರ್ಷಗಳಲ್ಲಿ ನಿಯಮಿತವಾಗಿ ಸಂಪರ್ಕದಲ್ಲಿದ್ದೆವು.. 2015ರಲ್ಲಿ ಅಜ್ಮತುಲ್ಲಾ ರಜೆಯ ಮೇಲೆ ಭಾರತಕ್ಕೆ ಬಂದು ಅನಂತರ ದುಬೈಗೆ ಮರಳಿದ್ದರು. ಕಳೆದ ವರ್ಷ ನನಗೆ ಅಪಘಾತ ಸಂಭವಿಸಿತ್ತು. ಈ ಸಂದರ್ಭ ನನ್ನನ್ನು ನೋಡಲು ಬರುತ್ತೇನೆ ಎಂದು ಹೊರಟವ ಇನ್ನೂ ಬಂದಿಲ್ಲ ಎಂದು ತಂದೆ ಅಸದುಲ್ಲಾ ಎಎನ್‌ಐಗೆ ಹೇಳಿದ್ದಾರೆ.
ನಾವು ಅವರು ಕೆಲಸ ನಿರ್ವಹಿಸುತ್ತಿದ್ದ ಸಂಸ್ಥೆಯನ್ನು ಸಂಪಕಿಸಿ ಮಾಹಿತಿ ಪಡೆಯಲು ಪ್ರಯತ್ನಿಸಿದ್ದೇವೆ. ಆದರೆ ಅವನು ಕೆಲಸಕ್ಕೆ ಬಾರದೇ ಹಲವು ಸಮಯಗಳೇ ಕಳೆದವು ಎಂಬ ಎತ್ತರ ಬರುತ್ತದೆ ಎಂದು ಕುಟುಂಬ ಹೇಳಿದೆ.ಫೆಬ್ರವರಿ 2019ರಲ್ಲಿ ನಾಪತ್ತೆಯಾಗಿದ್ದು, ಅಂದಿನಿಂದ ಅವನ ಕರೆಗಾಗಿ ಖಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಎಲ್ಲಿದ್ದಾರೆ ಮತ್ತು ಅವರು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದು ನಮಗೆ ತಿಳಿದಿಲ್ಲ ಎಂದು ತಂದೆ ಬೇಸರ ವ್ಯಕ್ತಪಡಿಸಿದರು.
ಅಜ್ಮತುಲ್ಲಾರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಭಾರತಕ್ಕೆ ಕರೆತರುವಂತೆ ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಸರಕಾರವನ್ನು ಕುಟುಂಬ ಒತ್ತಾಯಿಸಿದೆ.