Advertisement
ಆರೋಪಿಗಳನ್ನು ಘಟನಾ ಸ್ಥಳದ ಮಹಜರು ನಡೆಸಲು ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ನಾಲ್ವರು ಆರೋಪಿಗಳು ಪೊಲೀಸರ ಮೇಲೆಯೇ ದಾಳಿ ನಡೆಸಲು ಮುಂದಾಗಿದ್ದ ಕಾರಣ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಗಳತ್ತ ಗುಂಡು ಹಾರಿಸಿದ್ದಾರೆ ಮತ್ತು ಈ ಸಂದರ್ಭದಲ್ಲಿ ನಾಲ್ವರೂ ಆರೋಪಿಗಳು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸ್ ಕಮಿಷನರ್ ಸಜ್ಜನರ್ ಅವರು ನೀಡಿದ್ದಾರೆ.
1. ನಾಲ್ವರು ಅತ್ಯಾಚಾರ ಆರೋಪಿಗಳನ್ನು ಸೈಬರಾಬಾದ್ ಪೊಲೀಸರು ಶುಕ್ರವಾರ ಬೆಳ್ಳಂಬೆಳಿಗ್ಗೆ ಘಟನಾ ಸ್ಥಳಕ್ಕೆ ಮಹಜರಿಗಾಗಿ ಕರೆದುಕೊಂಡು ಹೋಗುತ್ತಾರೆ. ಆರೋಪಿಗಳು ಪೊಲೀಸ್ ಬಸ್ಸಿನಲ್ಲಿರುತ್ತಾರೆ ಮತ್ತು ಪೊಲೀಸರು ಜೀಪಿನಲ್ಲಿರುತ್ತಾರೆ.
Related Articles
2. ತನಿಖೆಯ ಭಾಗವಾಗಿ ಕೃತ್ಯದ ಮರು ರೂಪಣೆಗಾಗಿ ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಬರಲಾಗುತ್ತದೆ. ಈ ಸಂದರ್ಭದಲ್ಲೇ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
Advertisement
3. ಸ್ಥಳದಲ್ಲಿದ್ದ ಪೊಲೀಸರಿಂದ ಬಂದೂಕು ಕಸಿದುಕೊಂಡು ತಪ್ಪಿಸಿಕೊಳ್ಳಲು ನಾಲ್ವರೂ ಆರೋಪಿಗಳೂ ಪ್ರಯತ್ನಿಸಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಆರೋಪಿಗಳು ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದಾಗಲೇ ಅವರ ಮೇಲೆ ಗುಂಡು ಹಾರಿಸುತ್ತಾರೆ.
4. ಒಬ್ಬೊಬ್ಬರಾಗಿ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಗಳನ್ನು ಒಂದಷ್ಟು ದೂರ ಬೆನ್ನಟ್ಟಿಕೊಂಡು ಹೋದ ಪೋಲೀಸರು ಫೈರಿಂಗ್ ಓಪನ್ ಮಾಡಿ ನಾಲ್ಕೂ ಜನರನ್ನು ಎನ್ ಕೌಂಟರ್ ಮಾಡಿ ಸಾಯಿಸುತ್ತಾರೆ. ನವಂಬರ್ 28ರ ಗುರುವಾರ ಬೆಳಿಗ್ಗೆ 22 ವರ್ಷದ ಪಶುವೈದ್ಯೆಯ ಶವ ಸುಟ್ಟ ಸ್ಥಿತಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದರ ಅಡಿಯಲ್ಲಿ ಪತ್ತೆಯಾಗಿತ್ತು. ಈಕೆಯನ್ನು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿ ಬಳಿಕ ಸುಟ್ಟು ಕೊಂದಿದ್ದಾರೆಂಬ ವಿಚಾರ ಬಳಿಕ ಪೊಲೀಸ್ ತನಿಖೆಯಿಂದ ಬಯಲಾಗಿತ್ತು. ಈ ಘಟನೆಗೆ ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಮಾತ್ರವಲ್ಲದೇ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಜನಸಾಮಾನ್ಯರು ಮಾತ್ರವಲ್ಲದೇ ಸಂಸತ್ತಿನಲ್ಲೂ ಸಹ ಈ ಘಟನೆಗೆ ಸಂಸದರು ಪಕ್ಷಬೇಧ ಮರೆತು ತೀವ್ರ ರೋಷ ವ್ಯಕ್ತಪಡಿಸಿದ್ದರು ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒಕ್ಕೊರಲ ಆಗ್ರಹ ಕೇಳಿಬಂದಿತ್ತು. ಕೃಪೆ: ಝೀ ನ್ಯೂಸ್