Advertisement

ಹೈದರಾಬಾದ್‌ ಏರ್‌ಪೋರ್ಟ್‌ಗೆ ಕಾಂಟ್ಯಾಕ್ಟ್ ಲೆಸ್‌ ಕಾರ್‌ ಪಾರ್ಕಿಂಗ್‌

09:14 AM Jul 11, 2020 | Hari Prasad |

ಹೈದರಾಬಾದ್‌: ಕೋವಿಡ್ 19 ಸಾಂಕ್ರಾಮಿಕವನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶಿಷ್ಟ ಹೆಜ್ಜೆಯನ್ನಿಟ್ಟಿರುವ ಹೈದರಾಬಾದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಜಿಎಚ್‌ಐಎಎಲ್‌) ಆಡಳಿತ ಮಂಡಳಿ, ನಿಲ್ದಾಣದ ಸಮೀಪವಿರುವ ಕಾರ್‌ ಪಾರ್ಕಿಂಗ್‌ ವ್ಯವಸ್ಥೆಯನ್ನು ಸಂಪೂರ್ಣ ಸ್ಪರ್ಶ ರಹಿತ (ಕಾಂಟ್ಯಾಕ್ಟ್ ಲೆಸ್‌) ತಂತ್ರ ಜ್ಞಾನಕ್ಕೆ ಉನ್ನತೀಕರಿಸಿದೆ. ದೇಶದಲ್ಲಿ ಇಂಥ ಪ್ರಯತ್ನವಾಗಿರುವುದು ಇದೇ ಮೊದಲು.

Advertisement

ನ್ಯಾಷನಲ್‌ ಎಲೆಕ್ಟ್ರಾನಿಕ್‌ ಟೋಲ್‌ ಕಲೆಕ್ಷನ್‌ (ಎನ್‌ಇಟಿಸಿ) ಹಾಗೂ ನ್ಯಾಷ ನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್ ಇಂಡಿಯಾ (ಎನ್‌ಪಿಸಿಐ) ಸಂಸ್ಥೆಗಳ ಜೊತೆಗೆ ಕೈ ಜೋಡಿಸಿರುವ ಜಿಎಚ್‌ಐಎಎಲ್‌ ಈ ವ್ಯವಸ್ಥೆಯನ್ನು ಜಾರಿಗೊಳಿಸಿದೆ.

ಎನ್‌ಇಟಿಸಿ ಅಡಿಯಲ್ಲಿ ಫಾಸ್ಟ್‌ಟ್ಯಾಗ್‌ಗಳನ್ನು ನೀಡುವ ದೇಶದ 10 ಬ್ಯಾಂಕುಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಈ ವಿಮಾನ ನಿಲ್ದಾಣಕ್ಕೆ ಬರುವ ಗ್ರಾಹಕರು ತಮ್ಮ ಕಾರುಗಳಿಗೆ ಪ್ರೀ-ಪೇಯ್ಡ ಫಾಸ್ಟ್‌ಟ್ಯಾಗ್‌ ಅಳವಡಿಕೆ ಕಡ್ಡಾಯವಾಗಿರುತ್ತದೆ.

ಆ ಟ್ಯಾಗ್‌ಗಳುಳ್ಳ ವಾಹನಗಳನ್ನು ಪಾರ್ಕಿಂಗ್‌ ಪ್ರಾಂತ್ಯದಲ್ಲಿ ಕೊಂಡೊಯ್ದು ನಿಲ್ಲಿಸಬಹುದು. ಪಾರ್ಕಿಂಗ್‌ ಪ್ರಾಂತ್ಯಕ್ಕೆ ತೆರಳಲು ಹಾಗೂ ಮತ್ತೆ ಹಿಂದಕ್ಕೆ ಬರಲು ವಿಶೇಷ ಸ್ಕ್ಯಾನರ್‌ಗಳು ಇರುವ ದ್ವಾರಗಳ ಮೂಲಕ ವಾಹನಗಳು ಹಾದು ಹೋಗಬೇಕಿರುತ್ತದೆ.

ಅಲ್ಲಿ ಟ್ಯಾಗ್‌ಗಳನ್ನು ಸ್ಕ್ಯಾನ್‌ ಮಾಡುವ ಯಂತ್ರಗಳನ್ನು ಅಳವಡಿಸ ಲಾಗಿದೆ. ವಾಹನಗಳು ನಿಲುಗಡೆಯಾದ ಅವಧಿಯ ಲೆಕ್ಕದಲ್ಲಿ ಹಣ ಕಡಿತ ಮಾಡಿಕೊಳ್ಳಲಾಗುತ್ತದೆ.

Advertisement

2019ರ ನವೆಂಬರ್‌ನಲ್ಲಿ ಜಿಎಚ್‌ಐಎಎಲ್‌ ಇಂಥ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿತ್ತು. ಕೋವಿಡ್ 19 ಹಿನ್ನೆಲೆಯಲ್ಲಿ ಆ ವ್ಯವಸ್ಥೆ ವಿಸ್ತರಿಸಲಾಗಿದೆ. ಟೋಲ್‌ ಕೌಂಟರ್‌ ಇರುವ ಪಾರ್ಕಿಂಗ್‌ ವ್ಯವಸ್ಥೆಯನ್ನೂ ಹಾಗೇ ಉಳಿಸಿಕೊಳ್ಳಲಾಗಿದೆ ಎಂದು ಜಿಎಚ್‌ಐಎಎಲ್‌ ಸಿಇಒ ಪ್ರದೀಪ್‌ ಪಣಿಕರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next