Advertisement

ಊಟ ಬಿಟ್ಟು ವಲಸೆ ನಿರಾಶ್ರಿತರ ಪ್ರತಿಭಟನೆ

03:12 PM Apr 16, 2020 | Naveen |

ಹೂವಿನಹಡಗಲಿ: ಕೋವಿಡ್ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ವಲಸೆ ನಿರಾಶ್ರಿತರಿಗೆ ವಸತಿ ಸೌಕರ್ಯ ಏರ್ಪಡಿಸಲಾಗಿತ್ತು. ಪ್ರತಿದಿನ ಅವರಿಗೆ ಊಟ ಇತರೆ ಮೂಲ ಸೌಕರ್ಯಗಳನ್ನು ನೀಡಲಾಗುತ್ತಿದ್ದು, ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಗದಗ, ಕಲಬುರಗಿ, ನರಗುಂದ ಪ್ರದೇಶಗಳಿಗೆ ತೆರಳುತ್ತಿದ್ದ ಜನತೆ ಹಡಗಲಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು.

Advertisement

ಸರ್ಕಾರದ ನಿಯಮದಂತೆ ಇವರನ್ನು ಇಲ್ಲಿಯೇ 14 ದಿವಸಗಳ ಕಾಲ ನಿಗಾ ವಹಿಸಲಾಗಿದ್ದು ಬುಧವಾರಕ್ಕೆ 14 ದಿನಗಳು ಪೂರೈಸಿವೆ. ಇಂದು ಇವರು ನಮ್ಮನ್ನು ಊರಿಗೆ ಕಳುಹಿಸಿ ಕೊಡಿ ಎಂದು ಬೆಳಗ್ಗೆಯಿಂದಲೇ ಉಪಹಾರ ಊಟ ಬಿಟ್ಟು ಪ್ರತಿಭಟನಾ ರೂಪದಲ್ಲಿ ಹಠ ಹಿಡಿದಿದ್ದರು. ನಮ್ಮನ್ನು ಇಲ್ಲಿ ಕೂಡಿ ಹಾಕಿ 14 ದಿನಗಳು ಮುಗಿದಿದೆ. ನಮಗೆ ಯಾವುದೇ ರೀತಿಯಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದಿಲ್ಲ. ಇನ್ನೆಷ್ಟು ದಿವಸ ನಮ್ಮನ್ನು ಇಲ್ಲಿ ಕೂಡಿ ಹಾಕುತ್ತೀರಿ? ನಮ್ಮ ಮನೆಯಲ್ಲಿ ಸೊಸೆ ಹೆರಿಗೆ ಆಗಿದೆ. ಅಲ್ಲಿ ಬಾಣಂತನ ಮಾಡಲು ದಿಕ್ಕಿಲ್ಲದಂಗ ಆಗೈತೆ ಎಂದು ನರಗುಂದದ ಮಹಿಳೆ ಕಣ್ಣೀರು ಈಡುತ್ತಾಳೆ.

ಇನ್ನೂ ಹನುಮಂತಪ್ಪ ನಮ್ಮ ಮನೆಯಲ್ಲಿ ವಯಸ್ಸಾದ ತಂದೆ ಇದ್ದಾನೆ ಅವರಿಗೆ ಆರೋಗ್ಯ ಸರಿಯಿಲ್ಲ. ಅವರನ್ನು ಮನೆಯಲ್ಲಿ ನೊಡಿಕೊಳ್ಳುವವರು ಯಾರೂ ಇಲ್ಲದಾಗಿದೆ. ನಮ್ಮನ್ನು ಇನ್ನೂ ಎಷ್ಟು ದಿನ ಅಂತ ಇಲ್ಲಿ ಕೂಡಿ ಹಾಕುತ್ತೀರಿ ಎಂದು ತಮ್ಮ ಆಳಲನ್ನು ತೋಡಿಕೊಂಡರು. ಒಟ್ಟಾರೆಯಾಗಿ ಇಲ್ಲಿರುವ ಸುಮಾರು 27 ಜನರದು ಒಂದೊಂದು ಕತೆಯಾಗಿದೆ. ನಮಗೆ ಯಾವುದೇ ಕಾಯಿಲೆ ಲಕ್ಷ್ಮಣ ಕಂಡು ಬಾರದಿದ್ದರೂ ನಮ್ಮನ್ನು ಇಲ್ಲಿ ಯಾಕೆ ಕೂಡಿ ಹಾಕಿದ್ದಾರೆಯೋ ಒಂದು ತಿಳಿಯುತ್ತಿಲ್ಲ ಎನ್ನುತ್ತಾರೆ. ಸ್ಥಳಕ್ಕೆ ತಾಪಂ ಇಒ ಸೋಮಶೇಖರ್‌, ಸಿಪಿಐ ಮಾಲತೇಶ್‌ ಕೋನಬೇವು ಅಲ್ಲದೆ ಡಿವೈಎಸ್‌ಪಿ ಹೊಸಮನಿ ಆಗಮಿಸಿ ಮೇಲಾಧಿಕಾರಿಗಳ ಜೊತೆಯಲ್ಲಿ ಮಾತನಾಡಿ ನಿಮ್ಮ ಸಮಸ್ಯೆ ಬಗೆಹರಿಸುವುದಾಗಿ ಅವರ ಮನವೊಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next