Advertisement

ದಿಗಂತ್‌ಗೆ ಹುಟ್ಟುಹಬ್ಬದ ಶುಭಾಶಯಗಳು

04:55 PM Apr 21, 2019 | Lakshmi GovindaRaju |

ಮದುವೆ ಬಳಿಕ ಜಾಲಿಯಾಗಿ ಸುತ್ತಾಡಿಕೊಂಡಿದ್ದ ದಿಗಂತ್‌ ಈಗ ಮತ್ತೆ ಸಿನಿಮಾ ಮೂಡ್‌ಗೆ ಬಂದಿದ್ದಾರೆ. ಅದು ಹೊಸ ಸಿನಿಮಾ ಒಪ್ಪಿಕೊಳ್ಳುವ ಮೂಲಕ. ಹೌದು, ದಿಗಂತ್‌ ಈಗ ಸದ್ದಿಲ್ಲದೇ, ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅದು “ಹುಟ್ಟುಹಬ್ಬದ ಶುಭಾಶಯಗಳು’.

Advertisement

ಇದು ದಿಗಂತ್‌ ಅವರ ಹೊಸ ಸಿನಿಮಾದ ಟೈಟಲ್‌. ನಾಗರಾಜ್‌ ಬೇತೂರ್‌ ಈ ಸಿನಿಮಾದ ನಿರ್ದೇಶಕರು. ಇವರಿಗಿದು ಚೊಚ್ಚಲ ಸಿನಿಮಾ. ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿದ್ದ ನಾಗರಾಜ್‌, ಈಗ ದಿಗಂತ್‌ಗೆ ಹುಟ್ಟುಹಬ್ಬದ ಶುಭಾಶಯ ಹೇಳುತ್ತಿದ್ದಾರೆ.

ಒಂದರ ಹಿಂದೊಂದರಂತೆ ಸಿನಿಮಾ ನಿರ್ಮಿಸುತ್ತಿರುವ ಕ್ರಿಸ್ಟಲ್‌ ಪಾರ್ಕ್‌ನ ಟಿ.ಆರ್‌.ಚಂದ್ರಶೇಖರ್‌ ಈ ಚಿತ್ರದ ನಿರ್ಮಾಪಕರು. ಈಗಾಗಲೇ “ಚಮಕ್‌’, “ಅಯೋಗ್ಯ’, “ಬೀರ್‌ಬಲ್‌’ ಚಿತ್ರಗಳನ್ನು ನಿರ್ಮಿಸಿರುವ ಚಂದ್ರಶೇಖರ್‌, ಸದ್ಯ ಉಪೇಂದ್ರ, ಅಜೇಯ್‌ ಹಾಗೂ ರಾಜ್‌ ಬಿ ಶೆಟ್ಟಿ ಜೊತೆ ಸಿನಿಮಾ ಮಾಡುತ್ತಿದ್ದಾರೆ.

ಈಗ ದಿಗಂತ್‌ ಜೊತೆ “ಹುಟ್ಟುಹಬ್ಬದ ಶುಭಾಶಯಗಳು’ ಮಾಡಲು ಹೊರಟಿದ್ದಾರೆ. ಈ ಚಿತ್ರದ ಟೈಟಲ್‌ ಡಿಸೈನ್‌ ನೋಡಿದಾಗ ಇದೊಂದು ಥ್ರಿಲ್ಲರ್‌ ಸಿನಿಮಾ ಎಂಬುದು ಗೊತ್ತಾಗುತ್ತದೆ. ರಕ್ತ, ಕತ್ತಿ, ಸುತ್ತಿಗೆಯನ್ನು ಬಳಸಿ ಟೈಟಲ್‌ ಡಿಸೈನ್‌ ಮಾಡಲಾಗಿದೆ. ಚಿತ್ರಕ್ಕೆ ಮಿಥುನ್‌ ಮುಕುಂದನ್‌ ಸಂಗೀತವಿದೆ. ಮೇ 1 ರಿಂದ ಚಿತ್ರೀಕರಣ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next