Advertisement

ಮಾಸಿಕ 4 ಲಕ್ಷ ಜೀವನಾಂಶ: ಸಿರಿವಂತ ಪತಿಗೆ ಆದೇಶ

07:05 AM Aug 28, 2017 | Team Udayavani |

ನವದೆಹಲಿ: ಅಚ್ಚರಿಯಾದರೂ ನೀವಿದನ್ನು ನಂಬಲೇಬೇಕು. ಪರಿತ್ಯಕ್ತ ಪತ್ನಿಗೆ ಪ್ರತಿ ತಿಂಗಳು ಬರೋಬ್ಬರಿ 4 ಲಕ್ಷ ರೂ.ಗಳಂತೆ ಜೀವನಾಂಶ ನೀಡಬೇಕು ಎಂದು ವ್ಯಕ್ತಿಯೊಬ್ಬನಿಗೆ ದೆಹಲಿ ಕೋರ್ಟ್‌ ಆದೇಶಿಸಿದೆ.

Advertisement

ಇದನ್ನು ಕೇಳಿ ಆತನೇನೂ ತಲೆ ತಿರುಗಿ ಬಿದ್ದಿರಲಿಕ್ಕಿಲ್ಲ. ಕಾರಣ, ಅವನಿಗೆ ಈ 4 ಲಕ್ಷ ರೂ. ದೊಡ್ಡ ಸಂಗತಿಯೇನೂ ಅಲ್ಲ. ಏಕೆಂದರೆ, ಅವನು “ಸೂಪರ್‌ ರಿಚ್‌’ ಪತಿ. ಒಂದು ಸಾವಿರ ಕೋಟಿ ರೂ. ಮೌಲ್ಯದ ಉದ್ದಿಮೆ ಹೊಂದಿರುವ ಈತನ ಹೆಸರು ಬ್ಯುಸಿನೆಸ್‌ ವರ್ಲ್x ಮ್ಯಾಗಜಿನ್‌ನ “ಅತಿ ಶ್ರೀಮಂತರ ಪಟ್ಟಿ’ಯಲ್ಲಿದೆ. ಇದನ್ನೇ ಪರಿಗಣಿಸಿ, ಕೋರ್ಟ್‌ ಆತನಿಗೆ ಇಷ್ಟೊಂದು ದೊಡ್ಡ ಮೊತ್ತದ ಜೀವನಾಂಶ ನೀಡು ವಂತೆ ಸೂಚಿಸಿದೆ. ಈತ ತನ್ನ ಪತ್ನಿ ಮತ್ತು ಮಗಳನ್ನು ಬಿಟ್ಟು ಹೋಗಿದ್ದು, ಆಕೆ ಜೀವನಾಂಶ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದಳು. 4 ಲಕ್ಷ ರೂ. ಜೀವನಾಂಶ ಕೊಡುವುದರ ಜೊತೆಗೆ, ಪ್ರತಿ ವರ್ಷವೂ ಈ ಮೊತ್ತದಲ್ಲಿ ಶೇ.15ರಷ್ಟು ಏರಿಕೆ ಮಾಡಬೇಕು ಎಂದೂ ಕೋರ್ಟ್‌ ಈತನಿಗೆ ತಾಕೀತು ಮಾಡಿದೆ. ಆದರೆ, ಆತ, “ನನ್ನ ತಿಂಗಳ ವರಮಾನ ಕೇವಲ 90 ಸಾವಿರ ರೂ.’ ಎಂದು ಅಲವತ್ತುಕೊಂಡಿದ್ದ.

Advertisement

Udayavani is now on Telegram. Click here to join our channel and stay updated with the latest news.

Next