Advertisement

ಪತಿಗೆ ಪ್ರೇಯಸಿ ಇದ್ದಳಾ?

12:15 PM May 30, 2018 | Harsha Rao |

ಅಪ್ಸರೆ ಮತ್ತು ಸುರಸುಂದರಾಂಗ ನನ್ನ ಮುಂದೆ ಕುಳಿತ್ತಿದ್ದರು. ಮದುವೆಯಾಗಿ, ಮೂರು ವರ್ಷಗಳಾದರೂ, ದಂಪತಿಯ ನಡುವೆ ಸಂಭೋಗ ನಡೆದಿಲ್ಲ. ಗೆಳತಿಯರೆಲ್ಲಾ, ಗಂಡನ ತುಂಟಾಟದ/ ಪಲ್ಲಂಗದ ಕಥೆಗಳನ್ನು ಹರಿಯಬಿಡುತ್ತಿದ್ದರೆ, ಹೊಟ್ಟೆಯಲ್ಲಿ ಕಿಚ್ಚು. ಇವಳಿಗೆ ಅನುಭವವೇ ಇಲ್ಲ. ಆ ಅನುಭವಕ್ಕೆ ಇನ್ನೆಷ್ಟು ದಿನ ಕಾಯೋದು ಗೊತ್ತಿಲ್ಲ. ಇಪ್ಪತ್ತಾರು ವರ್ಷದ ಆಕೆ ಖನ್ನತೆಗೆ ಜಾರಿದ್ದಳು.

Advertisement

ಮಕ್ಕಳಾಗದೇ ಇರುವುದಕ್ಕೆ, ಮಗ ಕಾರಣ ಅಂತ ಅತ್ತೆ- ಮಾವನಿಗೆ ಗೊತ್ತಿಲ್ಲ. ಅತ್ತೆ, ಇವಳ ತಾಯಿಗೆ ಫೋನ್‌ ಮಾಡಿ ಮಗಳನೊಮ್ಮೆ ವಿಚಾರಿಸಿ ಎಂದಿ¨ªಾರೆ. ತವರಿಗೆ ದೂರು ಕೊಟ್ಟಿದ್ದಕ್ಕೆ ಇವಳಿಗೆ ಕೋಪ. ಅಮ್ಮನ ತನಿಖೆಗೆ ನಿಜವನ್ನು ಹೇಳಲು, ಕುಟುಂಬದಲ್ಲಿ ಗುÇÉಾಗಿದೆ. ಗಂಡನಿಗೆ ಇವಳು ನಿಜ ಹೇಳಿದ್ದಕ್ಕೆ ಅಸಮಾಧಾನ. ರಾತ್ರಿ ಮನೆಗೆ ಬರುವುದು ಲೇಟ್‌ ಮಾಡಿ¨ªಾನೆ. ಮಾತೇ ಆಡುತ್ತಿಲ್ಲ. ವಿಚಾರಿಸಿದರೆ, “ಕೆಲಸದೊತ್ತಡ’ ಎನ್ನುತ್ತಾನೆ. ಪತಿಗೆ ಪ್ರೇಯಸಿ ಇರಬಹುದೇನೋ ಎಂದು ಪತ್ನಿಗೆ ಅನುಮಾನ.

ಕಡೆಗೆ ವಿಚ್ಛೇದನದವರೆಗೂ ಮಾತು ತಿರುಗಿದಾಗ ಕೌಟುಂಬಿಕ ಸಲಹಾ ಚಿಕಿತ್ಸೆಗಾಗಿ ನನ್ನಲ್ಲಿಗೆ ಬಂದಿದ್ದರು. ಹಿಂದೂ ವಿವಾಹ ಕಾಯ್ದೆಯ ಪ್ರಕಾರ, ನಿರಾಸಕ್ತಿ, ನಪುಂಸಕತ್ವ ಅಥವಾ ಇನ್ನಾÂವುದೇ ಕಾರಣಕ್ಕೆ ಗಂಡ- ಹೆಂಡತಿಯ ನಡುವೆ ಸಂಭೋಗವಾಗದೆ, ಮದುವೆ ಪರಿಪೂರ್ಣವಾಗದಿದ್ದ ಪಕ್ಷದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಆ ಮದುವೆ ಊರ್ಜಿತವಾಗುವುದಿಲ್ಲ.  ನೊಂದ ವ್ಯಕ್ತಿ, (ಈ ಸಂದರ್ಭದಲ್ಲಿ, ಹೆಂಡತಿ) ಮೊಕ್ಕದ್ದಮೆ ಹೂಡಿ, ತಮ್ಮಿಬ್ಬರ ನಡುವಿನ ಮದುವೆ, ಶೂನ್ಯ ವಿವಾಹ ಎಂದು ಘೋಷಣೆ ಮಾಡಬೇಕೆಂದು ನ್ಯಾಯಾಲಯದ ಮೊರೆ ಹೋಗಬಹುದು.

ಮೊದಲು, ಮದುವೆಗಿರುವ ಕಾನೂನಿನ ಚೌಕಟ್ಟಿನ ಬಗ್ಗೆ ತಿಳಿಸಿ, ನಂತರ, urologist ಹಾಗೂ gynaecologist ಬಳಿ ವೈದ್ಯಕೀಯ ಪರೀಕ್ಷೆಗೆ ಕಳಿಸಿದೆ. ಇಬ್ಬರಲ್ಲೂ ಯಾವ ಸಮಸ್ಯೆಯೂ ಇರಲಿಲ್ಲ. ತದನಂತರ ಇಬ್ಬರಿಗೂ ಸಹಜವಾದ ಲೈಂಗಿಕ ಆಸಕ್ತಿ ಇರುವುದನ್ನು ವೈಜ್ಞಾನಿಕ ಪ್ರಶ್ನಾವಳಿಯ ಮುಖೇನ, ಖಚಿತಪಡಿಸಿಕೊಂಡೆ. ಸಾಕಷ್ಟು ಚರ್ಚೆ ನಡೆಸಿದೆ. ಮನಃಸ್ತಾಪ ಕಡಿಮೆಯಾಯಿತು.

ಇವನ ಹಿಂಜರಿಕೆಗೆ ಕಾರಣ: ಡೈವೋರ್ಸು ಪಡೆದು ಮನೆಯಲ್ಲಿದ್ದ ತಂಗಿ. ಹೆಂಡತಿಯೊಡನೆ ಸರಸ- ಸÇÉಾಪ ಮಾಡಿದರೆ ತಂಗಿ ನೊಂದುಕೊಳ್ಳಬಹುದು ಎಂಬ ಹೆಂಗರುಳು. ತಂಗಿಯ ಬಗ್ಗೆ ಸಂಕಟ ಮತ್ತು ಉದ್ವಿಘ್ನತೆ. ತಂಗಿಗಿಲ್ಲದ ಸುಖ ತನಗೂ ಬೇಡ ಎಂದುಕೊಂಡುಬಿಟ್ಟಿದ್ದ. ಜೊತೆಗೆ, ಮದುವೆಯಾದ ತಕ್ಷಣ ಸಂಭೋಗ ಬೇಡಾ, ಹುಡುಗಿ ಸ್ವಭಾವ ನೋಡೋಣ ಎಂದು ತಾಯಿಯ ಸಲಹೆ. ತಂಗಿಯ ಕಾಳಜಿಯಲ್ಲಿ ಹೆಂಡತಿಯನ್ನು ಮರೆತಿದ್ದ. ಈಗ ಮಗು ಆಗಿದೆ. ಬೇರೆ ಊರಿಗೆ ವರ್ಗ ಆಗಿದೆ. ಸುಖವಾಗಿದೆ ಸಂಸಾರ.

Advertisement

“Sex is your legal right”. ಹಸಿವು- ಬಾಯಾರಿಕೆಗಳಂತೆ, ಲೈಂಗಿಕ ಕ್ರಿಯೆ ಶರೀರದ ಸಹಜ ಕಾಮನೆ. ಸಂಬಂಧಕ್ಕೆ ಮಾನಸಿಕ ತೃಪ್ತಿ ನೀಡಿ ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ. ಪತಿಯಾಗಲೀ- ಪತ್ನಿಯಾಗಲೀ ವಿನಾಕರಣ ಲೈಂಗಿಕ ಕಾಮನೆಯನ್ನು ನಿರಾಕರಿಸುವುದೂ ದೌರ್ಜನ್ಯವೇ!

– ಶುಭಾ ಮಧುಸೂದನ್‌

Advertisement

Udayavani is now on Telegram. Click here to join our channel and stay updated with the latest news.

Next