Advertisement
ಘಟನೆಯ ವಿವರಫೆ. 19ರಂದು ಕಾರು ಕೊಡಿಸು ವಂತೆ ಚಂದ್ರಹಾಸನಲ್ಲಿ ಪತ್ನಿ ಭಾರತಿ ಒತ್ತಾಯಿಸಿದ್ದರು. ಅದೇ ವಿಚಾರಕ್ಕೆ ಸಂಬಂಧಿಸಿ ಅವರೊಳಗೆ ಜಗಳ ಶುರುವಾಯಿತು. ಈ ವೇಳೆ ಚಂದ್ರಹಾಸ ಪತ್ನಿಯ ಕಪಾಳಕ್ಕೆ ಬಲವಾಗಿ ಹೊಡೆದಿದ್ದು. ಹೊಡೆತದ ಪರಿಣಾಮ ಭಾರತಿ ತಲೆ ತಿರುಗಿ ಬಿದ್ದು ಮೃತಪಟ್ಟರು. ಅದರಿಂದ ಹೆದರಿದ ಚಂದ್ರಹಾಸ, ಪತ್ನಿಯ ದೇಹವನ್ನು ಹದಿನೈದು ತುಂಡುಮಾಡಿ, ನಾಲ್ಕು ಬ್ಯಾಗ್ಗಳಲ್ಲಿ ತುಂಬಿ ನಗರದ ರೈಲು ನಿಲ್ದಾಣ ರಸ್ತೆಯ ಎಲ್ಎಲ್ಸಿ ಕಾಲುವೆಯಲ್ಲಿ ಎಸೆದು ಹೋಗಿರುತ್ತಾನೆ ಎಂದು ಹೊಸಪೇಟೆ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಚಂದ್ರಹಾಸ, ಆಕೆಯ ತವರು ಮನೆಯವರಿಗೂ ಸುದ್ದಿಮುಟ್ಟಿಸಿದ್ದ. ಎಲ್ಲರೂ ಸೇರಿ ಹುಡುಕೋಣ, ಪೊಲೀಸ್ ಠಾಣೆಗೆ ದೂರು ಕೊಡುವುದು ಬೇಡ ಎಂದು ಕುಟುಂಬದವರನ್ನು ನಂಬಿಸಿ, ಕೆಲವು ದಿನಗಳ ಕಾಲ ಪತ್ನಿಯನ್ನು ಹುಡುಕಿದಂತೆ ನಟಿಸಿದ ಆತ ಬಳಿಕ ತಾನೇ ನಾಪತ್ತೆಯಾಗಿದ್ದ. ಅನುಮಾನಗೊಂಡ ಮೃತ ಮಹಿಳೆಯ ಅಣ್ಣ ಈ ಕುರಿತು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ಬೆನ್ನು ಬಿದ್ದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡರು. ಕಣ್ಮರೆಯಾಗಿದ್ದ ಚಂದ್ರಹಾಸನನ್ನ ಎ.5ರಂದು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣದ ನಿಜಾಂಶ ಬೆಳಕಿಗೆ ಬಂದಿದೆ.