Advertisement
ಫ್ರೆಜರ್‌ಟೌನ್ ನಿವಾಸಿ 39 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಪುಲಕೇಶಿನಗರ ಪೊಲೀಸರು ಆರೋಪಿ ಪತಿ ರಾಜು ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೊಬೈಲ್‌ನಲ್ಲಿ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಸೆರೆ ಹಿಡಿದು ಬೇರೆಯವರಿಗೆ ಕಳಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸಂತ್ರಸ್ತೆ 2019ರಲ್ಲಿ ರಾಜು ಎಂಬಾತನನ್ನು ಮದುವೆಯಾಗಿದ್ದು, ಅತ್ತಿಗುಪ್ಪೆಯ ಇಂದಿರಾ ಕಾಲೋನಿಯಲ್ಲಿ ವಾಸವಾಗಿದ್ದರು. ಆರಂಭದಲ್ಲಿ ದಂಪತಿ ಅನ್ಯೂನ್ಯವಾಗಿದ್ದರು. ಅನಂತರ ಪತಿ ರಾಜು ನಿತ್ಯ ಕುಡಿದು ಬಂದು ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ದೊಣ್ಣೆಯಿಂದ ಹಲ್ಲೆ ನಡೆಸುತ್ತಿದ್ದ. ಪತಿಯ ಕಿರುಕುಳವನ್ನು ಸಿಹಿಸಿಕೊಂಡು ಮಹಿಳೆ ಜೀವನ ಮಾಡುತ್ತಿದ್ದರು. ಆದರೆ, ಪರಪುರುಷನ ಜತೆ ಅಕ್ರಮ ಸಂಬಂಧ ಇಟ್ಟು ಕೊಂಡಿರುವುದಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಆಕೆಯ ಸಹೋದ್ಯೋಗಿಗಳಿಗೆ ಕರೆ ಮಾಡಿ “ನನ್ನ ಪತ್ನಿಗೆ ನಿಮಗೂ ಏನು ಸಂಬಂಧ’ ಎಂದು ಕೇಳುತ್ತಿದ್ದ. ಅಲ್ಲದೆ, ತನ್ನ ಮೊಬೈಲ್‌ನಲ್ಲಿ ಪತ್ನಿಯ ಅಶ್ಲೀಲ ಫೋಟೋ, ವಿಡಿಯೋಗಳನ್ನು ಸೆರೆ ಹಿಡಿದು ಇತರರಿಗೆ ಕಳುಹಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ. ಇದನ್ನೂ ಓದಿ:ಅಮಿತ್ ಶಾ ಭೇಟಿಗೆ ಸಮಯ ಕೇಳಿದ 15ಕ್ಕೂ ಹೆಚ್ಚು ಅತೃಪ್ತ ಶಾಸಕರು
Related Articles
ಮದುವೆ ಸಂದರ್ಭದಲ್ಲಿ ಸಂತ್ರಸ್ತೆ ಮನೆಯವರು ಆರೋಪಿಗೆ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ, ಪತ್ನಿಗೆ ಗೊತ್ತಿಲ್ಲದಂತೆ ಆರೋಪಿ ಕಾರು ಮಾರಾಟ ಮಾಡಿದ್ದ. ಅದನ್ನು ಕೇಳಿದ್ದಕ್ಕೆ ಮಹಿಳೆ ಕೊಲೆಗೆ ಯತ್ನಿಸಿದ್ದ. ದುಪ್ಪಟ್ಟದಿಂದ ಪತ್ನಿಯ ಕತ್ತನ್ನು ಬಿಗಿದು ಹತ್ಯೆಗೆ ಯತ್ನಿಸಿದ್ದ. ಆಕೆಗೆ ಉಸಿರಾಡಲು ಸಾಧ್ಯವಾಗದೇ ಕೈ, ಕಾಲು ಒದರುತ್ತಿದ್ದಾಗ ಅಡುಗೆ ಮನೆಯಲ್ಲಿದ್ದ ವಸ್ತುಗಳು ಕಾಲಿಗೆ ಸಿಕ್ಕಿ ಕೆಳಗೆ ಬಿದ್ದು ಜೋರಾಗಿ ಶಬ್ದ ಉಂಟಾಗಿತ್ತು. ಶಬ್ದ ಕೇಳಿ ಸ್ಥಳೀಯರು ಮನೆಗೆ ಬಂದಿದ್ದರು.ಆಗ ಆತಂಕಗೊಂಡ ಪತಿ, “ಇವತ್ತು ನೀನು ಬದುಕಿದೆ. ಮುಂದೆ ನಿನ್ನನ್ನು ಬಿಡುವುದಿಲ್ಲ’ ಎಂದು ಪ್ರಾಣ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
Advertisement
ಮೂರು ಮದುವೆಅನಂತರ ಆರೋಪಿಯ ಹಿನ್ನೆಲೆ ವಿಚಾರಿಸಿದಾಗ ಆರೋಪಿ ಈಗಾಗಲೇ ಮೂರು ಮದುವೆಯಾಗಿದ್ದು, ಮೂವರಿಗೆ ವಂಚಿಸಿದ್ದು, ತನ್ನನ್ನು ನಾಲ್ಕನೇ ಮದುವೆಯಾಗಿದ್ದಾನೆ ಎಂಬುದು ಗೊತ್ತಾಗಿದೆ. ಹೀಗಾಗಿ ಆರೋಪಿ ಪತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ದೂರು ನೀಡಿದ್ದಾರೆ.