Advertisement
ಬೇಕಾಗುವ ಸಾಮಗ್ರಿಗಳುಹುರುಳಿ ಕಾಳು-1ಕಪ್, ಹುಣಸೇ ಹುಳಿ-(1ನೆಲ್ಲಿ ಗಾತ್ರದಷ್ಟು), ಹಸಿಮೆಣಸು-3, ಒಣಮೆಣಸು-4, ಬೆಳ್ಳುಳ್ಳಿ-6 ರಿಂದ8 ಎಸಳು, ಎಣ್ಣೆ-4 ಚಮಚ, ಕರಿಬೇವು-ಸ್ವಲ್ಪ, ಸಾಸಿವೆ-ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ಮೊದಲಿಗೆ ಹುರುಳಿ ಕಾಳನ್ನು ಚೆನ್ನಾಗಿ ತೊಳೆದು ಒಂದು ಕುಕ್ಕರ್ ನಲ್ಲಿ ಹಾಕಿ,ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರನ್ನು ಸೇರಿಸಿ ಬೇಯಿಸಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಅದಕ್ಕೆ ಸಾಸಿವೆ, ಬೆಳ್ಳುಳ್ಳಿ, ಹಸಿಮೆಣಸು, ಒಣಮೆಣಸು ಮತ್ತು ಕರಿಬೇವಿನ ಎಲೆಯನ್ನು ಹಾಕಿ. ತದನಂತರ ಅದಕ್ಕೆ ಬೆಂದ ಹುರುಳಿ ಕಾಳನ್ನು ಸೇರಿಸಿ ಸ್ವಲ್ಪ ಹುಣಸೇ ಹುಳಿಯ ರಸವನ್ನು ಹಾಕಿ ಸ್ವಲ್ಪ ಹೊತ್ತು ಕುದಿಸಿದರೆ ಆರೋಗ್ಯಕರವಾದ ಹುರುಳಿ ಕಾಳಿನ ಸಾರು ರೆಡಿ…. *ಶ್ರೀರಾಮ್ ಜಿ. ನಾಯಕ್