ಶ್ರೀನಗರ: ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಸಂಘಟನೆಗಳಾದ ಹುರಿಯತ್ ಕಾನ್ಫರೆನ್ಸ್‌ನ ಎರಡೂ ಬಣಗಳು ಸದ್ಯದಲ್ಲೇ ನಿಷೇಧ ಕ್ಕೊಳಗಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1993ರಲ್ಲಿ ಅಸ್ತಿತ್ವಕ್ಕೆ ಬಂದ ಹುರಿಯತ್ ಕಾನ್ಫರೆನ್ಸ್, ಆಗಿನಿಂದಲೂ ಜಮ್ಮು ಕಾಶ್ಮೀರ ಪ್ರತ್ಯೇಕತಾ ಚಳುವಳಿಗಳನ್ನು ನಡೆಸುತ್ತಾ ಬಂದಿದೆ. ಈಗಾಗಲೇ ನಿಷೇಧಿಸಲ್ಪಟ್ಟಿರುವ ಜಮಾತ್-ಎ-ಇಸ್ಲಾಮಿ, ಜೆಕೆಎಲ್‌ಎಫ್ ಹಾಗೂ ದುಖಾ¤ರನ್-ಇ-ಮಿಲಾತ್‌ನಂಥ ಸಂಘಟನೆಗಳು ಸೇರಿ ಒಟ್ಟು 26 ಸಹವರ್ತಿ ಗುಂಪುಗಳನ್ನು ಹುರಿಯತ್ ಒಳಗೊಂಡಿದೆ.
ಇತ್ತೀಚೆಗೆ, ಕಾಶ್ಮೀರದ ಕೆಲವು ವಿದ್ಯಾರ್ಥಿಗಳಿಗೆ ಪಾಕಿಸ್ತಾನದ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ನೀಡಲಾಗಿದ್ದು, ಆ ವಿದ್ಯಾರ್ಥಿಗಳಿಂದ ಪಡೆದ ಹಣವನ್ನು ಹುರಿಯತ್ ಕಾನ್ಫರೆನ್ಸ್‌ನ ಅಂಗಸಂಸ್ಥೆಗಳಿಗೆ ದೇಣಿಗೆಯಾಗಿ ನೀಡಿರುವುದು ಪತ್ತೆಯಾಗಿದೆ.
ಇದನ್ನೂ ಓದಿ:‘ನಾನು ಕಾಮನ್ ಮ್ಯಾನ್’ : ಸಿಎಂ ಬೊಮ್ಮಾಯಿ ಸರಳತೆಗೆ ಅಪಾರ ಮೆಚ್ಚುಗೆ
ಆ ಹಣವನ್ನು ಹುರಿಯತ್ ಮುಖಂಡರು ಜಮ್ಮು ಕಾಶ್ಮೀರದಲ್ಲಿ ಉಗ್ರಚಟುವಟಿಕೆಗಳಿಗಾಗಿ ಬಳಸುವ ಬಗ್ಗೆಯೂ ತನಿಖೆ ವೇಳೆ ಗೊತ್ತಾಗಿದೆ. ಹಾಗಾಗಿ, ಹುರಿಯತ್‌ನ ಎರಡೂ ಬಣಗಳನ್ನು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ (ಯುಎಪಿಎ) ನಿಷೇಧಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.