Advertisement

ಉತ್ತರ ಧ್ರುವದಲ್ಲಿ ಮೊದಲ ಬಾರಿಗೆ ಸೆರೆಸಿಕ್ಕ ಚಂಡಮಾರುತ

02:29 AM Mar 04, 2021 | Team Udayavani |

ಹೊಸದಿಲ್ಲಿ: ಉತ್ತರ ಧ್ರುವದಲ್ಲಿ ಅಪರೂಪಕ್ಕೆ ಉಂಟಾಗುವ ಚಂಡಮಾರುತವನ್ನು (ಸ್ಪೇಸ್‌ ಹರಿಕೇನ್‌) ಇದೇ ಮೊದಲ ಬಾರಿಗೆ ಸೆರೆ ಹಿಡಿದಿರುವುದಾಗಿ ವಿಜ್ಞಾನಿಗಳು ಪ್ರಕಟಿಸಿದ್ದಾರೆ.

Advertisement

ಸಾಮಾನ್ಯವಾಗಿ ಇಂಥ ಚಂಡಮಾರುತಗಳು ಬಂದಾಗ, ವಾತಾವರಣದಲ್ಲಿ ಎಲೆಕ್ಟ್ರಾನ್‌ಗಳ ಮಳೆಯೇ ಆಗುತ್ತದೆ. ಸಾಮಾನ್ಯವಾಗಿ ಇಂಥ ಚಂಡಮಾರುತಗಳು ದಕ್ಷಿಣ ಧ್ರುವದಲ್ಲಿ ಕಂಡು ಬರುತ್ತಿದ್ದುದನ್ನು ವಿಜ್ಞಾನಿಗಳು ಗಮನಿಸಿ, ಅದನ್ನು ದಾಖಲಿಸಿಯೂ ಇದ್ದರು. ಆದರೆ ಉತ್ತರ ಧ್ರುವದಲ್ಲಿ ತುಂಬಾ ಅಪರೂಪಕ್ಕೆ ಹಾಗೂ ಹಠಾತ್ತಾಗಿ ಉಂಟಾಗುವ ಚಂಡಮಾರುತಗಳನ್ನು ಸೆರೆಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೆ ಚೀನ, ಅಮೆರಿಕ, ನಾರ್ವೆ ಹಾಗೂ ಯು.ಕೆ.ಯ ವಿಜ್ಞಾನಿಗಳು ಅಂಥ ಚಂಡಮಾರುತವನ್ನು ನಾಲ್ಕು ಡಿಎಂಎಸ್‌ಪಿ ಉಪಗ್ರಹಗಳಿಂದ ಹಾಗೂ 3-ಡಿ ಮ್ಯಾಗ್ನೆಟೋಸ್ಪಿಯರ್‌ ಮಾಡೆಲಿಂಗ್‌ ತಂತ್ರಜ್ಞಾನದಿಂದ ಸೆರೆಹಿಡಿಯುವಲ್ಲಿ ಸಫ‌ಲರಾಗಿದ್ದಾರೆ. ಇದರ ಅಧ್ಯಯನದಿಂದ ಉತ್ತರ ಧ್ರುವದಲ್ಲಿ ಉಂಟಾಗುವ ಚಂಡಮಾರುತವು ಪ್ಲಾಸ್ಮಾದಿಂದ ಕೂಡಿರುವುದು ತಿಳಿದುಬಂದಿದೆ. ಇದು ಸುರುಳಿಯಾಕಾರದ ಅಲೆಗಳನ್ನು ಸೃಷ್ಟಿಸಿದ್ದು, ಸುಮಾರು 8 ಗಂಟೆಗಳ ಕಾಲ ಉತ್ತರ ಧ್ರುವದಲ್ಲಿ ನೆಲೆನಿಂತಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next