Advertisement

ಹುಣಸೂರು: ಸಾಕಾನೆಗಳ ಕಾರ್ಯಾಚರಣೆಗೂ ಜಗ್ಗದ ಕಾಡಾನೆಗಳು; ಮಹಿಳೆಗೆ ಗಾಯ

09:04 PM Dec 16, 2022 | Team Udayavani |

ಹುಣಸೂರು: ಕೆ.ಆರ್.ನಗರ ತಾಲೂಕಿನ ಹಳ್ಳಿಗಳಲ್ಲಿ ಅಡ್ಡಾಡಿ ಅವಾಂತರ ಸೃಷ್ಟಿಸಿದ್ದ ಎರಡು ಸಲಗಗಳನ್ನು ತಾಲೂಕಿನ ಅರಬ್ಬಿತಿಟ್ಟು ಅರಣ್ಯ ಪ್ರದೇಶಕ್ಕೆ ಗುರುವಾರ ರಾತ್ರಿ ಸೇರಿಸುವಲ್ಲಿ ಯಶಸ್ವಿಯಾದ ಅರಣ್ಯ ಸಿಬಂದಿ, ಅಲ್ಲಿಂದ ಕಾಡಿಗಟ್ಟುವ ಹರಸಾಹಸ ಪಟ್ಟರೂ ಯಶಸ್ವಿಯಾಗದೆ ಅಲ್ಲಿಯೇ ಬೀಡು ಬಿಟ್ಟಿವೆ.

Advertisement

ಈ ಸಲಗಗಳು ಅರಬ್ಬಿತಿಟ್ಟು ಅರಣ್ಯ ಪ್ರದೇಶದ ಸುತ್ತಮುತ್ತಲಿನ ಕೊಳಗಟ್ಟ,ಕುಪ್ಪೆ,ರಾಯನಹಳ್ಳಿ ಮತ್ತಿತರ ಕಡೆ ಅಡ್ಡಾಡಿ ಬೆಳೆಗಳನ್ನು ತಿಂದು-ತುಳಿದು ನಾಶಪಡಿಸಿವೆ. ಭೀಮ ಮತ್ತು ಮಹೇಂದ್ರ ಸಾಕಾನೆಗಳು ಸಾಕಷ್ಟು ಸಾಹಸಮೆರೆದರೂ ಮತ್ತೆ ಅರಬ್ಬಿತಿಟ್ಟು ಅರಣ್ಯ ಪ್ರದೇಶವನ್ನು ಸೇರಿಕೊಂಡಿವೆ.

ಸಾಕಾನೆ ಜೊತೆಗೆ ಕುಮ್ಕಿ ಆನೆಯನ್ನು ಸಹ ಕಾರ್ಯಾಚರಣೆಯಲ್ಲಿ ಬಳಸಿದ್ದು, ರಾತ್ರಿ ವೇಳೆ ಕಾಡಿಗಟ್ಟಲು ವಿಶೇಷ ಶ್ರಮ ಹಾಕಲಾಗಿದೆ. ಒಂದೊಮ್ಮೆ ಸಾದ್ಯವಾಗದಿದ್ದಲ್ಲಿ ಅವುಗಳನ್ನು ಸೆರೆ ಹಿಡಿಯಲು ಅನುಮತಿಗೆ ಪತ್ರ ಬರೆಯಲಾಗಿದ್ದು, ಅನುಮತಿ ಸಿಕ್ಕಲ್ಲಿ ಅರವಳಿಗೆ ನೀಡಿ ಸೆರೆ ಹಿಡಿಯಲಾಗುವುದೆಂದು ಡಿಸಿಎಫ್ ಸೀಮಾ ಮಾಹಿತಿ ನೀಡಿದ್ದಾರೆ.

ಮಹಿಳೆಗೆ ಗಾಯ
ಕೆ.ಆರ್.ನಗರ ಕಡೆಯಿಂದ ಬಂದ ಕಾಡಾನೆಗಳು ಗುರುವಾರ ರಾತ್ರಿ ಅರಬನ್ಬಿ ತಿಟ್ಟು ಅರಣ್ಯದಲ್ಲಿ ಬೀಡು ಬಿಟ್ಟಿದ್ದವು, ಆದರೆ ಶುಕ್ರವಾರ ಬೆಳಗ್ಗೆ ಮತ್ತೆ ತನ್ನ ಉಪಟಳ ಮುಂದುವರೆಸಿದ್ದು, ಶುಕ್ರವಾರ ತಾಲೂಕಿನ ಕೊಳಗಟ್ಟ ಗ್ರಾಮದ ಮಹೇಶ್‌ರ ಪತ್ನಿ ಸಿದ್ದಮ್ಮ ಅವರೆಕಾಯಿ ಬಿಡಿಸುವಾಗ ಅರಬ್ಬಿತಿಟ್ಟು ಕಡೆಯಿಂದ ಬಂದ ಕಾಡಾನೆಗಳೆರಡು ಓಡಿಬರುವ ಸಂದರ್ಭದಲ್ಲಿ ಸಿದ್ದಮ್ಮರನ್ನು ಸೊಂಡಿಲಿನಿAದ ತಳ್ಳಿದ ಪರಿಣಾಮ ಬಿದ್ದು ಬೆನ್ನಿಗೆ ತೀವ್ರತರ ಪೆಟ್ಟಾಗಿ ಹುಣಸೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದ ಆರ್.ಎಫ್.ಓ. ನಂದಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಸಿದ್ದಮ್ಮಳಿಗೆ ಧೈರ್ಯ ತುಂಬಿ ಚಿಕಿತ್ಸೆ ಕೊಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next