Advertisement

ಹುಣಸೂರು: ಯಶಸ್ವಿ ಈದ್ ಮಿಲಾದ್ ಮೆರವಣಿಗೆ; ಗಮನ ಸೆಳೆದ ಧಪ್ ಕಾರ್ಯಕ್ರಮ

10:17 PM Oct 09, 2022 | Team Udayavani |

ಹುಣಸೂರು: ಪ್ರವಾದಿ ಮಹಮದ್ ಪೈಗಂಬರ್ ಹುಟ್ಟು ಹಬ್ಬದ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಮುಸ್ಲಿಂ ಸಮುದಾಯದವರು ಮೆರವಣಿಗೆ ನಡೆಸಿದರು, ಮೆರವಣಿಗೆಯಲ್ಲಿ ಮಕ್ಕಳ ದಫ್ ಕಾರ್ಯಕ್ರಮ ಗಮನ ಸೆಳೆಯಿತು.

Advertisement

ಬಿಸಿಲ ನಡುವೆಯೇ ನಗರದ ಶಬ್ಬೀರ್‌ನಗರದ ಶಾಹಿ ಮಸೀದಿಯಿಂದ ಮಧ್ಯಾಹ್ನ 2.30ಕ್ಕೆ ಹೊರಟ 8 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದ ಬೃಹತ್ ಮೆರವಣಿಗೆಯು ಕಲ್ಪತರು ವೃತ್ತ, ಬಜಾರ್ ರಸ್ತೆ, ಜೆಎಲ್ ಬಿರಸ್ತೆ, ಎಸ್ ಜೆರಸ್ತೆ ಮೂಲಕ ಸಂವಿಧಾನ ವೃತ್ತಕ್ಕಾಗಮಿಸಿ ಅಲ್ಲಿಂದ ಈದ್ಗಾ ಮೈದಾನಕ್ಕಾಗಮಿಸಿದರು. ಅಲ್ಲಿ ಸಾಮೂಹಿಯ ಉಪಹಾರ ಸೇವಿಸಿದ ನಂತರ ಪ್ರಾರ್ಥನೆ ಸಲ್ಲಿಸಿದರು.

ಮೆರವಣಿಗೆಯಲ್ಲಿ ಮುಸ್ಲಿಂ ಯುವಕರು ಇಸ್ಲಾಂ ಜಿಂದಾಬಾದ್, ಅಲ್ಲಾ ಓ ಅಕ್ಬರ್ ಹಾಗೂ ಇನ್ನಿತರೆ ಪ್ರವಾದಿ ಮಹಮ್ಮದರ ಪರವಾಗಿ ಘೋಷಣೆಗಳನ್ನು ಕೂಗಿದರು. ಮೆರೆವಣಿಗೆಯಲ್ಲಿ ಸುಮಾರು 25 ಕ್ಕೂ ಹೆಚ್ಚು ವಾಹನಗಳಲ್ಲಿ ಟ್ಯಾಬ್ಲೊ ಗಳು, ನೂರಾರು ದೊಡ್ಡ ದೊಡ್ಡ ಹಸುರು ಬಣ್ಣದ ಬಾವುಟಗಳು ಹಿಡಿದು ಸಾಗಿ ಬಂದರು.ಪ್ರಮುಖ ವೃತ್ತಗಳಲ್ಲಿ, ರಸ್ತೆ ಇಕ್ಕೆಲಗಳಲ್ಲಿ ನಿಂತಿದ್ದ ಮಹಿಳೆಯರು ಕೈಯಲ್ಲಿ ಹಸಿರು ಬಾವುಟ ಹಿಡಿದು ಮೆರವಣಿಗೆಯಲ್ಲಿ ಆಗಮಿಸಿದ್ದವರಿಗೆ ಶುಭ ಕೋರಿದರು.

ಮುಸ್ಲಿಂ ಸಂಘಟನೆಗಳ ಯುವಕರು ವೃತ್ತಗಳಲ್ಲಿ ಮಜ್ಜಿಗೆ, ಜ್ಯೂಸ್, ಹರೀರಾ ವಿತರಿಸುವ ಮೂಲಕ ಬಿಸಿಲಬೇಗೆಯಲ್ಲಿ ಬಳಲಿದ್ದವರ ದಣಿವಾರಿಸಿದರು. ಮದರಸಾದ ಮಕ್ಕಳಿಂದ ದಫ್, ಮಕ್ಕಾ-ಮದೀನ, ಗುಲಾಬಿ ಹೂವಿನಿಂದ ಅಲಂಕೃತಗೊಳಿಸಿದ್ದ ಸ್ತಬ್ಧಚಿತ್ರಗಳು ಗಮನ ಸೆಳೆದವು.

ಈದ್-ಮಿಲಾದ್ ಹಬ್ಬ ಆಚರಣೆ ಸಮಿತಿಯ ಅಧ್ಯಕ್ಷ ಸರ್ದಾರ್ ಅಹಮದ್ ಜಿ.ಪಂ.ಮಾಜಿ ಸದಸ್ಯ ಫಜಲುಲ್ಲಾ, ನಗರಸಭೆ ಸದಸ್ಯ ಸೈಯದ್ ಯೂನಸ್, ಪುರಸಭೆ ಮಾಜಿ ಸದಸ್ಯರಾದ ಹಜರತ್ ಜಾನ್, ಮಜಾಜ್‌ಅಹಮದ್, ಮಹಮದ್ ಶಫಿ, ಮುಖಂಡರಾದ ವಜೀರ್, ನಜೀರ್ ಅಹಮದ್, ಇನ್ನಿತರ ಮುಖಂಡರು, ಯುವ ಸಂಘಟನೆಗಳವರು ಮೆರವಣಿಗೆಯನ್ನು ಯಶಸ್ವಿಗೊಳಿಸಿದರು.

Advertisement

ಜಿಲ್ಲಾಪೊಲೀಸ್ ವರಿಷ್ಟಾಧಿಕಾರಿ ಆರ್.ಚೇತನ್, ಅಡಿಷನಲ್ ಎಸ್.ಪಿ.ನಂದಿನಿ ಬೊಳಗಿನಿಂದಲೇ ಮೊಕ್ಕಾಂ ಹೂಡಿದ್ದರು. ಹುಣಸೂರು ಉಪ ಅಧೀಕ್ಷಕ ರವಿಪ್ರಸಾದ್ ನೇತೃತ್ವದಲ್ಲಿ ಡಿಎಆರ್ ಡಿವೈಎಸ್‌ಪಿ ಸತೀಶ್ ಇನ್ಸ್ಪೆಕ್ಟ್ಗಳಾದ ಶ್ರೀನಿವಾಸ್, ರವಿಕುಮಾರ್, ಚಿಕ್ಕಸ್ವಾಮಿ ಹುಣಸೂರು, ಪಿರಿಯಾಪಟ್ಟಣ, ಸರಗೂರು, ಎಚ್.ಡಿ.ಕೋಟೆ ತಾಲೂಕುಗಳ ಪೊಲೀಸ್, ಗೃಹರಕ್ಷಕದಳದ ಸಿಬ್ಬಂದಿಗಳು ಕೆ.ಎಸ್.ಆರ್.ಪಿ ಹಾಗೂ ಡಿಎಆರ್ ತುಕಡಿಗಳು ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಶಾಸಕ ಎಚ್.ಪಿ.ಮಂಜುನಾಥ್, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಪ್ರತ್ಯೇಕವಾಗಿ ಸ್ವಲ್ಪದೂರ ಸಾಗಿ ಬಂದು ಮೆರವಣಿಗೆಗೆ ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next