Advertisement
ಬುಧವಾರದಂದು ಬ್ಯಾಂಕಿನ ಆವರಣದಲ್ಲಿ ನಡೆದ 2021-22ನೇ ಸಾಲಿನ ಮಹಾಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ರೈತರಿಗೆ ಭೂಅಭಿವೃದ್ದಿ, ತಂತಿಬೇಲಿ, ಹೈನುಗಾರಿಕೆ, ತುಂತುರು ನೀರಾವರಿ, ತೆಂಗು, ಮಾವು, ರೇಷ್ಮೆ ತೋಟಗಳ ಭೂ ಅಭಿವೃದ್ದಿ ಹಾಗೂ ಕೃಷಿಯಾಂತ್ರಿಕರಣಕ್ಕೆ ಸಾಲ ಸೌಲಭ್ಯ ಒದಗಿಸಲಾಗುವುದು ಎಂದರು.
2022 ರ ಮಾರ್ಚ್ ಅಂತ್ಯಕ್ಕೆ ರೈತರಿಂದ ಶೇ 50.20ರಷ್ಟು ಮಾತ್ರ ವಸೂಲಿಯಾಗಿದ್ದು, 5.29 ಕೋಟಿ ಸಾಲ ಬಾಕಿ ಇದ್ದು, ಬ್ಯಾಂಕ್ ಪ್ರಸ್ತುತ 35.55 ಲಕ್ಷರೂ ನಷ್ಟದಲ್ಲಿದೆ. ಸಾಲ ವಸೂಲಿ ಶೇ.70 ರಷ್ಟಿದ್ದರೆ ಮಾತ್ರ ಕೇಂದ್ರ ಬ್ಯಾಂಕ್ ಹೊಸ ಸಾಲ ನೀಡಲಿದೆ. ಹೀಗಾಗಿ ಸಾಲ ಪಡೆದಿರುವ ರೈತರು ಸಕಾಲದಲ್ಲಿ ಮರುಪಾವತಿ ಮಾಡುವಂತೆ ಹಾಗೂ ರೈತರಿಗೆ ಮನವಿ ಮಾಡಿದರು. ಸಾಲ ವಸೂಲಾತಿಗೆ ಕ್ರಮವೇನು
ಈ ವೇಳೆ ಹಲವು ಸದಸ್ಯರು ಆಹ್ವಾನ ಪತ್ರಿಕೆಯೊಂದಿಗೆ ಆಡಿಟ್ ವರದಿಯನ್ನು ಏಕೆ ಕಳುಹಿಸಿಲ್ಲ, ಐದು ಕೋಟಿ ಸಾಲ ಬಾಕಿ ವಸೂಲಾತಿಗೆ ಯಾವ ಕ್ರಮವಹಿಸಿದ್ದೀರಾ, ಏಕಿಷ್ಟು ಸಾಲ ಬಾಕಿ ಇದೆ ಎಂಬ ಪ್ರಶ್ನೆಗೆ ಕೋವಿಡ್-೧೯ನಿಂದಾಗಿ ಸರಕಾರದ ಸುತ್ತೋಲೆಯಂತೆ ವಸೂಲಿಗೆ ಕ್ರಮವಹಿಸಿರಲಿಲ್ಲಾ. ಕಳೆದ ಐದಾರು ತಿಂಗಳಿಂದ ಬಾಕಿ ವಸೂಲಾತಿಗೆ ಕ್ರಮವಹಿಸಲಾಗುತ್ತಿದೆ ಎಂದು ಅಧ್ಯಕ್ಷರು ಸಮಜಾಯಿಷಿ ನೀಡಿದರು.
Related Articles
Advertisement
ಸಭೆಯಲ್ಲಿ ಬ್ಯಾಂಕಿನ ಪ್ರಭಾರ ವ್ಯವಸ್ಥಾಪಕ ಮಹದೇವಸ್ವಾಮಿ ಆಡಿಟ್ ವರದಿ, 2021-22 ನೇ ಸಾಲಿನ ಲೆಕ್ಕಪತ್ರ ಮಂಡಿಸಿ, 2022-23 ನೇ ಸಾಲಿನ ಅಂದಾಜು ಆಯುವ್ಯಯ ಮಂಡಿಸಿ, ಸಭೆಯ ಅನುಮೋದನೆ ಪಡೆದರು.
ಸಭೆಯಲ್ಲಿ ಉಪಾದ್ಯಕ್ಷ ಸಿ.ಕುಮಾರ್, ನಿರ್ದೇಶಕರಾದ ದೇವರಾಜು, ರುದ್ರೇಗೌಡ, ಬಿಳಿಕೆರೆಪ್ರಸನ್ನ, ಹೇಮಂತಕುಮಾರ್, ಅಪ್ಪುಗೌಡ, ದೊಡ್ಡೇಗೌಡ, ಉದಯ್‌ಕುಮಾರ್, ರಾಮಕೃಷ್ಣೇಗೌಡ, ಸಿದ್ದನಾಯ್ಕ, ಲಕ್ಷ್ಮಮ್ಮ, ಸತ್ಯನಾರಾಯಣ, ಯಶೋದಮ್ಮ ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ಸದಸ್ಯರು ಭಾಗವಹಿಸಿದ್ದರು.