Advertisement

Hunsur: ಅಪರಿಚಿತ ಶವ ಪತ್ತೆ

09:19 AM Sep 09, 2023 | Team Udayavani |

ಹುಣಸೂರು: ಅಪರಿಚಿತ ವ್ಯಕ್ತಿಯೊಬ್ಬರ ಶವ ಮೈಸೂರು- ಹುಣಸೂರು ಹೆದ್ದಾರಿಯ ಹಂದನಹಳ್ಳಿ ಗೇಟ್ ಬಸ್ ತಂಗದಾಣದ ಪಕ್ಕದಲ್ಲಿ ಪತ್ತೆಯಾಗಿದೆ.

Advertisement

ತಾಲೂಕಿನ ಬಿಳಿಕೆರೆ ಹೋಬಳಿಯ ಹಂದನಹಳ್ಳಿ ಗೇಟ್ ಬಳಿ ಬಸ್ ತಂಗುದಾಣದ ಪಕ್ಕದಲ್ಲಿ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಸುಮಾರು 50-55 ವರ್ಷ ವಯಸ್ಸಿನ ಪುರುಷ ವ್ಯಕ್ತಿ ಶವ ಪತ್ತೆಯಾಗಿದ್ದು, ಕೋಲು ಮುಖ, ತೆಳ್ಳಗಿನ ಶರೀರ, ಮೃತನ ಮೈಮೇಲೆ ಕಂದು ಬಣ್ಣದ ತುಂಬು ತೋಳಿನ ಶರ್ಟ್‌, ಕಪ್ಪು ಬಣ್ಣದ ಪ್ಯಾಂಟ್, ಗಡ್ಡ ಹೊಂದಿದ್ದಾರೆ.

ದಾರಿಹೋಕರ ಮಾಹಿತಿ ಮೇರೆಗೆ ಇನ್ಸ್ ಪೆಕ್ಟರ್ ಲೋಲಾಕ್ಷಿ ಪ್ರಕರಣ ದಾಖಲಿಸಿಕೊಂಡು ಗುರುತು ಪತ್ತೆಗೆ  ಕ್ರಮವಹಿಸಿದ್ದಾರೆ.

ಶವವನ್ನು ಕೆ.ಆರ್.ಆಸ್ಪತ್ರೆ ಶವಾಗಾರದಲ್ಲಿಡಲಾಗಿದ್ದು, ಮಾಹಿತಿ ಇದ್ದವರು 9480805057 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next