ಹುಣಸೂರು: ನಗರದಲ್ಲಿ ಸ್ವಾತಂತ್ರೋತ್ಸವ ಅಂಗವಾಗಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಪಂಜಿನ ಮೆರವಣಿಗೆ ನಡೆಸಿದರು.
ನಗರದ ಕೋಟೆ ವೃತ್ತದಿಂದ ಅಲಂಕೃತ ಜೀಪ್ ನಲ್ಲಿ ಭಾರತಾಂಬೆಯ ಬೃಹತ್ ಭಾವಚಿತ್ರವನ್ನಿಟ್ಟು ಕೈಯಲ್ಲಿ ಪಂಜು ಹಿಡಿದಿದ್ದ 500 ಕ್ಕೂ ಹೆಚ್ಚು ಯುವಕರು, ಮಹಿಳಾ ಕಾರ್ಯಕರ್ತರನ್ನೊಳಗೊಂಡು ಹೊರಟ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಭಾರತ್ ಮಾತಾಕಿ ಜೈ, ವಂದೇ ಮಾತರಂ, ಜೋರ್ ಸೇ ಬೋಲೋ ಪ್ಯಾರ್ ಸೇ ಬೋಲೋ, ಹಿಂದೂಸ್ತಾನ್, ಎಂಬಿತ್ಯಾದಿ ಘೋಷಣೆ ಮೊಳಗಿಸಿ ಸಾರ್ವಜನಿಕರ ಗಮನ ಸೆಳೆದರು.
ಮೆರವಣಿಗೆಯು ಎಸ್.ಜೆ.ರಸ್ತೆ, ಬಜಾರ್ ರಸ್ತೆ, ಹಳೇ ಬಸ್ ನಿಲ್ದಾಣ ರಸ್ತೆ, ಸಂವಿದಾನ ವೃತ್ತದ ಮೂಲಕ ಮುನೇಶ್ವರ ಕಾವಲ್ ಮೈದಾನಕ್ಕೆ ಸಾಗಿ ಬಂದರು.
ಮೆರವಣಿಗೆಯಲ್ಲಿ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಲೋಹಿತ್ ಅರಸ್, ತಾಲೂಕು ಸಂಚಾಲಕ ಚಂದ್ರಮೌಳಿ, ಅನಿಲ್, ಗಿರೀಶ್, ಆರ್.ಎಸ್.ಎಸ್.ನ ಮಹದೇವ್ ಬಾಗಲ್, ಅಶ್ವತ್, ಸಂದೇಶ್, ಬಿಜೆಪಿ ನಗರ ಘಟಕದ ಅಧ್ಯಕ್ಷೆ ಕಮಲ, ವಿ.ಎಚ್.ಪಿ.ಯ ವಿ.ಎನ್. ದಾಸ್ ಸೇರಿದಂತೆ ಮುಖಂಡರು ಭಾಗವಹಿಸಿದ್ದರು.