Advertisement

Hunsur; ಮನೆಯಲ್ಲಿ ಬೆಂಕಿ ಆಕಸ್ಮಿಕ :ಒಬ್ಬರಿಗೆ ಗಾಯ, ಲಕ್ಷಾಂತರ ರೂ.ನಷ್ಟ

08:16 PM Nov 12, 2023 | Team Udayavani |

ಹುಣಸೂರು: ಇಸ್ತ್ರಿ ಮಾಡುತ್ತಿದ್ದ ವೇಳೆ ಶಾರ್ಟ್ ಸಕ್ಯೂಟ್‌ನಿಂದಾಗಿ ಮನೆಯಲ್ಲಿದ್ದ ಪದಾರ್ಥಗಳು ಸುಟ್ಟು ಹೋಗಿರುವ ಘಟನೆ ನಗರದ ಸ್ಟೋರ್ ಬೀದಿಯಲ್ಲಿ ಘಟನೆ ನಡೆದಿದ್ದು, ಒಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಸ್ಟೋರ್ ಬೀದಿ ನಿವಾಸಿ ಶೇಖರ್‌ಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮನೆಯ ಪದಾರ್ಥಗಳು ಬೆಂಕಿಗಾಹುತಿಯಾಗಿದೆ.
ಶೇಖರ್ ಬಟ್ಟೆ ಇಸ್ತಿç ಮಾಡಿ ಜೀವನ ನಡೆಸುತ್ತಿದ್ದರು, ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಬಟ್ಟೆಗಳು ಬಂದಿದ್ದರಿಂದಾಗಿ ಅಂಗಡಿಯಿಂದ ಮನೆಗೆ ತಂದು ಇಸ್ತ್ರಿ ಮಾಡುತ್ತಿದ್ದ ವೇಳೆ ಶಾರ್ಟ್ ಸಕ್ಯೂಟ್ ಆಗಿ ಒಮ್ಮೆಲೆ ಬಟ್ಟೆಗೆ ಬೆಂಕಿ ತಗುಲಿ, ನಂತರ ಮನೆಯಲ್ಲಿದ್ದ ಟಿ.ವಿ, ವಾಷಿಂಗ್ ಮಿಷನ್, ಸೇರಿದಂತೆ ಮನೆಯ ಸಾಮಗ್ರಿಗಳಿಗೆ ಬೆಂಕಿ ತಗುಲಿ ಸುಟ್ಟು ಹೋಗಿದೆ.

ಮನೆಯೊಳಗಿನಿಂದ ದಟ್ಟವಾದ ಹೊಗೆ ಬರುತ್ತಿರುವುದನ್ನು ಗಮನಸಿದ ನಿವಾಸಿಗಳು ಅಗ್ನಿಶಾಮಕ ಸಿಬಂದಿಗೆ ಮಾಹಿತಿ ನೀಡಿದ ಮೇರೆಗೆ ತತ್ ಕ್ಷಣವೇ ಆಗಮಿಸಿ ಬೆಂಕಿ ನಂದಿಸಿ, ಬೆಂಕಿ ಅಕ್ಕಪಕ್ಕಕ್ಕೆ ಹರಡುವುದನ್ನು ತಪ್ಪಿಸಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next