ಹುಣಸೂರು: ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಗೆ ಬೆಲ್ಟ್ ನಿಂದ ಹಿಗ್ಗಾಮುಗ್ಗ ಥಳಿಸಿದ ಪತಿರಾಯನನ್ನ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುವ ಘಟನೆ ತಾಲೂಕಿನ ಹಂಚ್ಯ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
ಗ್ರಾಮದ ಸಯ್ಯಾದ್ ಮೊಹಿದೀನ್‌ರ ಪುತ್ರ ಸೈಯದ್ ಯಾಸಿನ್(32) ನ್ಯಾಯಾಂಗ ಬಂಧನಕ್ಕೊಳಗಾದಾತ, ಈತನ ಪತ್ನಿ ಅಮ್ರಿನ್‌ಭಾನು ಪತಿಯಿಂದ ಹಿಗ್ಗಾಮುಗ್ಗ ಥಳಿತದ ಹಲ್ಲೆಗೆ ಒಳಗಾಗಿ ಸಾರ್ವಜನಿಕ ಅಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ: ಪತಿಯ ಥಳಿತಕ್ಕೆ ಒಳಗಾಗಿ ಅಸ್ಪತ್ರೆಗೆ ದಾಖಲಾಗಿರುವ ಅಮ್ರಿನ್‌ಬಾನುರಿಗೆ ಕಳೆದ 8 ವರ್ಷಗಳ ಹಿಂದೆ ಹಂಚ್ಯಾದ ಸೈಯದ್ ಯಾಸ್ಮಿನ್‌ನೊಂದಿಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಸೈಯದ್ ಯಾಸ್ಮಿನ್ ಟೂರಿಸ್ಟ್ ಬಸ್‌ಗಳನ್ನು ಬಾಡಿಗೆಗೆ ಕಳುಹಿಸುತ್ತಿದ್ದ, ಪ್ರವಾಸಕ್ಕೆ ಬಸ್‌ಗಳನ್ನು ಬಾಡಿಗೆಗೆ ಕಳುಹಿಸುತ್ತಿದ್ದ ವೇಳೆ ರಾಮನಾಥಪುರದ ಮಹಿಳೆಯೊಂದಿಗೆ ಪರಿಚಯವಾಗಿ ಆಕೆ ಆಗಾಗ್ಗೆ ಮನೆಗೆ ಬರುತ್ತಿದ್ದಳು. ಸೈಯದ್ ಯಾಸ್ಮಿನ್ ಆಕೆಯೊಂದಿಗೆ ಅಕ್ರಮ ಸಂಬಂಧ ವಿರಿಸಿಕೊಂಡಿದ್ದ ಎನ್ನಲಾಗಿದ್ದು, ಈ ವಿಚಾರವಾಗಿ ಜ. 16 ರಂದು ತನ್ನ ಪತಿ ಅಪರಿಚಿತ ಮಹಿಳೆಯೊಂದಿಗೆ ನಡೆದುಕೊಳ್ಳುತ್ತಿರುವುದನ್ನು ಕಂಡು ಈ ರೀತಿ ಒಳ್ಳೆಯದಲ್ಲವೆಂದು ಪತ್ನಿ ತಿಳಿಹೇಳಿದ್ದರಿಂದ ಕುಪಿತಗೊಂಡ ಪತಿರಾಯ ಮಾರಣಾಂತಿಕವಾಗಿ ಹಿಗ್ಗಾ ಮುಗ್ಗಾ ಥಳಿಸಿ, ತನ್ನ ಬೆಲ್ಟ್‌ನಿಂದ ಕುತ್ತಿಗೆಗೆ ಸುತ್ತಿ, ಕೊಲೆ ಮಾಡಲು ಪ್ರಯತ್ನಪಟ್ಟಿದ್ದರಿಂದ ಅಸ್ಪಸ್ಥಗೊಂಡಾಕೆಯನ್ನು ಕುಟುಂಬದವರು ಅಮ್ರಿನ್‌ಬಾನುಳನ್ನು ಸಾರ್ವಜನಿಕ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದರು. ಹಲ್ಲೆ ನಡೆಸಿ ತನ್ನ ಪ್ರೇಯಸಿಯೊಂದಿಗೆ ಪರಾರಿಯಾಗಿದ್ದ.
ಪರಾರಿಯಾಗಿದ್ದ ಸೈಯದ್‌ಯಾಸ್ಮಿನ್ ಶನಿವಾರದಂದು ಹುಣಸೂರು ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಪೋಲಿಸರು ಅರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ಅರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾರ್ಯಚರಣೆಯಲ್ಲಿ ಇನ್ಸ್ಪೆಕ್ಟರ್ ಎನ್.ಮುನಿರಾಜು ಮಾರ್ಗದರ್ಶನದಲ್ಲಿ ಮಲ್ಲೇಶ್, ಸಿದ್ದರಾಜು ಮತ್ತಿತರ ಸಿಬ್ಬಂದಿಗಳು ಭಾಗವಹಿಸಿದ್ದರು.