Advertisement

Hunsur: ಶಿಷ್ಯೆಯನ್ನೇ ಪ್ರೀತಿಸಿ ವಿವಾಹವಾದ ಉಪನ್ಯಾಸಕ!

10:48 PM Dec 31, 2024 | Team Udayavani |

ಹುಣಸೂರು: ಬಿಎಡ್‌ ಕಾಲೇಜು ಉಪನ್ಯಾಸಕರೊಬ್ಬರು ತನ್ನ ಶಿಷ್ಯೆಯನ್ನೇ ಪ್ರೀತಿಸಿ ಮದುವೆಯಾಗಿ, ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿರುವ ಘಟನೆ ಹುಣಸೂರಿನಲ್ಲಿ ನಡೆದಿದೆ.

Advertisement

ನಗರದ ಖಾಸಗಿ ಬಿಎಡ್‌ ಉಪನ್ಯಾಸಕರಾಗಿದ್ದ ತಾಲೂಕಿನ ಬೆಂಕಿಪುರ ನಿವಾಸಿ ಯಶೋಧ್‌ ಕುಮಾರ್‌ ಹಾಗೂ ನಗರಕ್ಕೆ ಸಮೀಪದ ಹಳೆಯೂರಿನ (ಚಿಕ್ಕಹುಣಸೂರು) ಸಜ್ಜೇಗೌಡರ ಪುತ್ರಿ ಪೂರ್ಣಿಮಾ ಮದುವೆ ಮಾಡಿಕೊಂಡವರು.

ಮಗಳನ್ನು ಶಿಕ್ಷಕಿಯನ್ನಾಗಿಸಬೇಕೆಂಬ ಆಸೆಯಿಂದ ಬೀದಿ ಬದಿ ಸೊಪ್ಪು ವ್ಯಾಪಾರ ಮಾಡಿ, ಜೀವನ ನಡೆಸುತ್ತಿದ್ದ ಸಜ್ಜೇಗೌಡ, ಸಾಲ ಮಾಡಿ ಪೂರ್ಣಿಮಾಳನ್ನು ನಗರದ ಖಾಸಗಿ ಡಿಎಡ್‌ ಕಾಲೇಜಿಗೆ ದಾಖಲಿಸಿದ್ದರು. ಪೂರ್ಣಿಮಾ ಬಿಎಡ್‌ ಮುಗಿಸಿ ಮನೆಯಲ್ಲಿದ್ದಳು. ವ್ಯಾಸಂಗ ಮಾಡುತ್ತಿದ್ದಾಗಲೇ ಇಬ್ಬರೂ ಪ್ರೀತಿಸುತ್ತಿದ್ದರು. ಈ ಮಾಹಿತಿ ತಿಳಿದ ಪೋಷಕರು, ಮಗಳಿಗೆ ತಿಳಿಹೇಳಿ ಎಚ್ಚರಿಸಿದ್ದರಲ್ಲದೆ ವಿರೋಧ ವ್ಯಕ್ತಪಡಿಸಿದ್ದರು. ಇತ್ತ ಯಶೋಧ್‌ ಕುಮಾರ್‌ ಸಹ ಕಾಲೇಜು ತೊರೆದು ಬೇರೆಡೆ ಕೆಲಸಕ್ಕೆ ಸೇರಿದ್ದ. ಇದ್ಯಾವುದನ್ನೂ ಲೆಕ್ಕಿಸದೆ ಇಬ್ಬರು ಮನೆ ತೊರೆದು ಮದುವೆ ಮಾಡಿಕೊಂಡಿದ್ದಾರೆ.

ಈ ನಡುವೆ ರಕ್ಷಣೆಕೋರಿ ಬಿಳಿಕೆರೆ ಠಾಣೆಯಲ್ಲಿ ದೂರು ದಾಖಲಿಸಿದ ಪರಿಣಾಮ, ಎರಡೂ ಕುಟುಂಬಗಳನ್ನು ಕರೆಸಿ ಮಾತುಕತೆ ನಡೆಸಿದ ವೇಳೆ ನಾವಿಬ್ಬರೂ ಪ್ರೀತಿಸಿ ಮದುವೆಯಾಗಿದ್ದೇವೆ, ಒಟ್ಟಿಗೆ ಇರುತ್ತೇವೆಂದು ಪಟ್ಟು ಹಿಡಿದ ಪರಿಣಾಮ, ಪೊಲೀಸರು ಪೋಷಕರಿಗೆ ತಿಳುವಳಿಕೆ ನೀಡಿ. ವಿವಾಹ ನೋಂದಾಯಿಸಿಕೊಳ್ಳುವಂತೆ ಪ್ರೇಮಿಗಳಿಗೆ ಸೂಚಿಸಿ ಕಳುಹಿಸಿದ್ದಾರೆ.

ಡಿ.26ರ ಗುರುವಾರ ಕಾಲೇಜಿನಿಂದ ಸರ್ಟಿಫಿಕೇಟ್‌ ತರುವುದಾಗಿ ಹೇಳಿ ಹೋದ ಪೂರ್ಣಿಮಾ, ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಳು, ಮಗಳು ಮನೆಗೆ ವಾಪಸ್ಸಾಗದಿದ್ದಾಗ ಅನುಮಾನಗೊಂಡು ಬಿಳಿಕೆರೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಸಹೋದರಿಗೆ ವಾಟ್ಸ್ಯಾಪ್‌ ಸಂದೇಶ:

ನಾನು ಈಗ ಮದುವೆ ಆಗಿರುವ ಹುಡುಗ ಕೆಟ್ಟವರಲ್ಲ ಅವರು ತುಂಬಾ ಒಳ್ಳೆಯ ವ್ಯಕ್ತಿ. ನಮ್ಮ ಮನೆಯಲ್ಲಿ ಎಲ್ಲರನ್ನು ಒಪ್ಪಿಸಿ ಮದುವೆ ಆಗಬೇಕು ಎಂಬ ಆಸೆ ನಮ್ಮಿಬ್ಬರದ್ದೂ ಆಗಿತ್ತು. ಆದರೆ ನಮ್ಮಿಬ್ಬರ ಪ್ರೀತಿಯ ವಿಚಾರ ಮನೆಯಲ್ಲಿ ಹೇಳಿದ್ದರ ಫಲವಾಗಿ ಮನೆಯಲ್ಲಿ ತುಂಬಾ ಗಲಾಟೆ ಆಗಿದ್ದು ನೀನೇ ಪ್ರತ್ಯಕ್ಷವಾಗಿ ನೋಡಿದ್ದೀಯಾ, ಹಾಗಾಗಿ ಮತ್ತೊಮ್ಮೆ ಮನೆಯಲ್ಲಿ ನಮ್ಮಿಬ್ಬರ ಪ್ರೀತಿಯ ವಿಷಯ ಹೇಳಲು ನನಗೆ ಧೈರ್ಯ ಇಲ್ಲ. ಹೇಳಿದ್ದರೂ ನಮ್ಮಿಬ್ಬರ ಕಲ್ಮಶವಿಲ್ಲದ ಪ್ರೀತಿಯ ಒಪ್ಪುತ್ತಿರಲಿಲ್ಲ. ಆದ್ದರಿಂದ ನಾನು ನನ್ನ ಸ್ವ ಇಚ್ಛೆಯಂತೆ ಮದುವೆ ಆಗಿದ್ದೇನೆ.

Advertisement

ಇದಕ್ಕೆ ಯಾರ ಬಲವಂತವಾಗಲಿ ಇಲ್ಲ. ನನಗೆ ಅಪ್ಪ, ಅಮ್ಮ, ಹಾಗೂ ನಿನ್ನ ಮೇಲೆ ತುಂಬಾ ಗೌರವವಿದೇ ಹಾಗೇ ಪ್ರೀತಿಯೂ ಇದೇ. ನನ್ನ ಚೆನ್ನಾಗಿ ನೋಡಿಕೊಂಡಿದ್ದೀರಾ ಅದಕ್ಕೆ ನಾನು ಯಾವತ್ತೂ ನಿಮಗೆ ಚಿರಋಣಿ ಆಗಿರುತ್ತೇನೆ. ಅಪ್ಪ, ಅಮ್ಮ ಎಲ್ಲರನ್ನು ನೀನು ಚೆನ್ನಾಗಿ ನೋಡಿಕೋ ನಿಮ್ಮೆಲ್ಲರ ಆಶೀರ್ವಾದ ನಮ್ಮಿಬ್ಬರ ಮೇಲೆ ಸದಾಕಾಲ ಇರಲಿ. ನಾವಿಬ್ಬರು ಮುಂದೆ ಎಲ್ಲಾದ್ರೂ ಹೋಗಿ ಜೀವನ ಮಾಡುತ್ತೇವೆ.

ಅಪ್ಪ, ಅಮ್ಮನನ್ನು ಚೆನ್ನಾಗಿ ನೋಡಿಕೋ ಸಹೋದರಿಗೆ ಮನವಿ:

ನಿನಗಾಗಲಿ, ನಮ್ಮ ಮನೆಯವರಿಗಾಗಲಿ ಕೆಟ್ಟದ್ದು ಮಾಡುವ ಉದ್ದೇಶದಿಂದ ನಾನು ಪೊಲೀಸ್ ಸ್ಟೇಷನ್‌ಗೆ ದೂರು ನೀಡುತ್ತಿಲ್ಲಾ ಅಪ್ಪನ ಮೇಲಿನ ಭಯದಿಂದ ನಮ್ಮಿಬ್ಬರ  ರಕ್ಷಣೆಗೋಸ್ಕರ ನಾನು ಪೊಲೀಸ್ ಸ್ಟೇಷನ್ ಅಲ್ಲಿ ದೂರು ಸಲ್ಲಿಸುತ್ತಿದ್ದೇನೆ. ತಪ್ಪಿದ್ದರೆ ಕ್ಷಮಿಸಿ. ಅಪ್ಪ, ಅಮ್ಮ, ಪಾಪು, ಎಲ್ಲರನ್ನು ಚೆನ್ನಾಗಿ ನೀನು ನೋಡಿಕೋ ಅಕ್ಕಾ ಎಂದು ತನ್ನ ಸಹೋದರಿಗೆ ವ್ಯಾಟ್ಸಪ್ ಮೂಲಕ ಪೂರ್ಣಿಮಾ ಮನವಿ ಮಾಡಿಕೊಂಡಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next