Advertisement

Hunsur: 11 ಲಕ್ಷ ರೂ. ಬೆಲೆ ಬಾಳುವ 2340 ಕೆಜಿ ಪಟಾಕಿ ವಶ; ಇಬ್ಬರು ವಶಕ್ಕೆ

10:56 PM Oct 11, 2023 | Team Udayavani |

ಹುಣಸೂರು: ಲೈಸನ್ಸ್ ಇಲ್ಲದೆ ಹುಣಸೂರು ನಗರದಲ್ಲಿ ಅಕ್ರಮವಾಗಿ ಪಟಾಕಿ ದಾಸ್ತಾನು ಮಾಡಿದ್ದ ಗೋದಾಮು,ಮನೆ ಮೇಲೆ ದಾಳಿ ನಡೆಸಿರುವ ನಗರ ಠಾಣೆ ಪೊಲೀಸರು ಪಟಾಕಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

Advertisement

ತಹಸೀಲ್ದಾರ್ ಡಾ.ಅಶೋಕ್, ನಗರ ಠಾಣೆ ಇನ್ಸ್ಪೆಕ್ಟರ್ ದೇವೇಂದ್ರರ ನೇತೃತ್ವದಲ್ಲಿ ಕಂದಾಯ, ನಗರಸಭೆ ಅಗ್ನಿಶಾಮಕ ಅಧಿಕಾರಿಗಳ ತಂಡ ನಗರದ ಜನ ನಿಭಿಡ ಜೆಎಲ್‌ಬಿ ರಸ್ತೆಯ ಮಧುಗಿರಿ ಸ್ಟೊರ‍್ಸ್ನ ಸಂಜಯ್‌ರಿಗೆ ಸೇರಿದ ಗೋಡೌನ್‌ನಲ್ಲಿ ಸಂಗ್ರಹಿಸಿಟ್ಟಿದ್ದ ವಿವಿಧ ಮಾದರಿಯ ಸುಮಾರು 8 ಲಕ್ಷರೂ ಬೆಲೆ ಬಾಳುವ 1480 ಕೆ.ಜಿ. ಪಟಾಕಿಯನ್ನು ಹಾಗೂ ನ್ಯೂ ಮಾರುತಿ ಬಡಾವಣೆಯ ಸೋಮಶೇಖರ್ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು ರೂಮಿನಲ್ಲಿ ಸಂಗ್ರಹಿಸಿದ್ದ ಸುಮಾರು 3 ಲಕ್ಷರೂ ಬೆಲೆ ಬಾಳುವ ವಿವಿಧ ಬ್ರಾಂಡಿನ 860 ಕೆ.ಜಿ.ಪಟಾಕಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದು, ಇರ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ವೇಳೆ ತಹಶೀಲ್ದಾರ್ ಲೆಪ್ಟೆನೆಂಟ್ ಕರ್ನಲ್ ಡಾ.ಅಶೋಕ್, ಆರ್.ಐ. ನಂದೀಶ್, ಅಗ್ನಿಶಾಮಕ ಠಾಣಾಧಿಕಾರಿ ಸತೀಶ್, ನಗರಸಭೆ ಹಿರಿಯ ಆರೋಗ್ಯಾಧಿಕಾರಿ ಸತೀಶ್ ಹಾಗೂ ಸಿಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next